ಕರ್ನಾಟಕ: Tulu Times | ಕೆಲವು ದಿನಗಳ ₹6ಕ್ಕೆ ಮಾರಾಟವಾಗುತ್ತಿದ್ದ ಒಂದು ಕೋಳಿ ಮೊಟ್ಟೆ ಈಗ ₹8ಕ್ಕೆ ಏರಿಕೆ ಕಂಡಿದ್ದು, ಗ್ರಾಹಕರಿಗೆ ಹೊರೆಯಾಗಿದೆ. ಇನ್ನು ಚಳಿಗಾಲದಲ್ಲಿ ಮೊಟ್ಟೆಗೆ ಹೆಚ್ಚು ಬೇಡಿಕೆ ಇರುತ್ತದೆ.
ನಗರದ ವಿವಿಧ ಮಾಲ್ ಹಾಗೂ ಆನ್‌ಲೈನ್ ಖರೀದಿ ವೇದಿಕೆಗಳಲ್ಲಿ ಒಂದು ಮೊಟ್ಟೆ ದರ ₹6.95 ರಿಂದ ₹7.50 ಇದೆ. ನಗರದ ವಿವಿಧ ಪ್ರದೇಶಗಳ ಕಿರಾಣಿ ಅಂಗಡಿಗಳಲ್ಲಿ ₹7.50ರಿಂದ ₹8ಕ್ಕೆ ಏರಿಕೆ ಇದೆ. ಕೆಲವು ದಿನಗಳಿಂದ ಮೊಟ್ಟೆಯ ದರ ಹೆಚ್ಚಳವಾಗುತ್ತಿದೆ.
ಕ್ರಿಸ್‌ಮಸ್ ಹಾಗೂ ಹೊಸ ವರ್ಷದಲ್ಲಿ ಕೇಕ್ ಗೆ ಬಳಕೆ!
ಇನ್ನೇನು ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಶುರುವಾಗುತ್ತಿದೆ. ಹೀಗಾಗಿ, ಕೇಕ್ ತಯಾರಿಸಲು ಮೊಟ್ಟೆ ಬಳಸಲಾಗುತ್ತಿದ್ದು, ಮಾರುಕಟ್ಟೆಯ ಮೊಟ್ಟೆ ಹೆಚ್ಚಾಗಿ ಪೂರೈಕೆಯಾಗದ ಕಾರಣ ದರ ಜಾಸ್ತಿಯಾಗಿದೆ. ಕಳೆದ ವರ್ಷ ಹಕ್ಕಿ ಜ್ವರ ಬಂದಿದ್ದರಿಂದ ಕೋಳಿಗಳ ಸಾಕಾಣಿಕೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ ಮಾರುಕಟ್ಟೆ ಅಭಿವೃದ್ಧಿ ಅಧಿಕಾರಿ ಶೇಷನಾರಾಯಣ ಈ ಬಗ್ಗೆ ಮಾಹಿತಿ ನೀಡಿ, ರಾಜ್ಯದಲ್ಲಿ ನಿತ್ಯ 2.20 ಕೋಟಿ ಮೊಟ್ಟೆ ಉತ್ಪಾದನೆ ಆಗುತ್ತದೆ. ಇದರಲ್ಲಿ ಗೋವಾ, ಮಹಾರಾಷ್ಟ್ರ, ಕೇರಳಕ್ಕೆ ಪೂರೈಸಲಾಗುತ್ತದೆ. ಮೊಟ್ಟೆಯ ಉತ್ಪನ್ನಗಳನ್ನು ತಯಾರಿಸಲು ನಿತ್ಯ 11 ಲಕ್ಷ ಮೊಟ್ಟೆ ಬಳಕೆಯಾಗುತ್ತದೆ. ತಮಿಳುನಾಡಿನ ನಾಮಕ್ಕಲ್‌ನಿಂದ ರಾಜ್ಯಕ್ಕೆ ಸುಮಾರು 50 ಲಕ್ಷ ಮೊಟ್ಟೆಗಳ ಪೂರೈಕೆ ಆಗುತ್ತಿತ್ತು ಎಂದು ತಿಳಿಸಿದ್ದಾರೆ.
ಹೋಟೆಲ್ ಮತ್ತು ಬೇಕರಿ ಉದ್ಯಮದ ಮೇಲೆ ಪರಿಣಾಮ!
ಹೋಟೆಲ್ ಮತ್ತು ಬೇಕರಿ ಉದ್ಯಮದ ಮೇಲೆ ಮೊಟ್ಟೆ ದರ ಏರಿಕೆ ಪರಿಣಾಮ ಬೀರಲಿದೆ. ಕ್ರಿಸ್‌ಮಸ್ , ಹೊಸ ವರ್ಷಾಚರಣೆ ಸಮೀಪಿಸುತ್ತಿದೆ ಎಂದು ಬೇಕರಿ ವ್ಯಾಪಾರಸ್ಥರು ಹೇಳುತ್ತಾರೆ. ಇನ್ನು ದಿನನಿತ್ಯ 2.20 ಕೋಟಿ ಮೊಟ್ಟೆ ಉತ್ಪಾದನೆಯಾಗುತ್ತದೆ. ತಮಿಳುನಾಡಿನ ನಾಮಕ್ಕಲ್‌ನಿಂದ ಬೆಂಗಳೂರಿಗೆ ನಿತ್ಯ 45 ಲಕ್ಷ ಪೂರೈಕೆಯಾಗುತ್ತದೆ. ಇನ್ನು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆ ಎಂ. ಜಯಮ್ಮ ಮಾತನಾಡುತ್ತಾ, ಮೊಟ್ಟೆ ದರ ಏರಿಕೆಯಿಂದಾಗಿ ಅಂಗನವಾಡಿಗಳಲ್ಲಿ ಮಕ್ಕಳಿಗೆ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಮೊಟ್ಟೆ ವಿತರಿಸಲು ಕಷ್ಟವಾಗುತ್ತಿದೆ ಎಂದರು.
Chicken egg prices rise suddenly.. Huge demand for eggs for Christmas & New Year- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











