ಮಂಗಳೂರು – ತುಳು ಟೈಮ್ಸ್: ಮದ್ಯ ಸೇವಿಸೋದಕ್ಕೆ ಹಣ ಕೊಡುವ ವಿಚಾರಕ್ಕೆ ಯುವಕನನ್ನು ಕೊಲೆಗೈದ ದಾರುಣ ಘಟನೆ ನಡೆದಿದೆ. ಡಿ. 7ರ ಭಾನುವಾರದಂದು ಬೈಕಂಪಾಡಿಯಲ್ಲಿ ಈ ಘಟನೆ ನಡೆದಿದೆ.
ಮದ್ಯ ಸೇವನೆಗೆ ಹಣ ನೀಡಿಲ್ಲ ಎಂದು ಜಗಳವಾಡಿರುವುದಕ್ಕೆ ಯುವಕನನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ. ಉತ್ತರ ಪ್ರದೇಶ ಮೂಲದ ನಿವಾಸಿ, ಸದ್ಯ ಬೈಕಂಪಾಡಿಯಲ್ಲಿ ವಾಸವಿರುವ ಸಚಿನ್ ಕುಮಾರ್ ಕೊಲೆಯಾದ ಯುವಕ.
ಇದನ್ನೂ ಓದಿ: ಮಂಗಳೂರು: ಮಾದಕ ವಸ್ತು ಮಾರಾಟ – ಮೂವರ ಬಂಧನ
ಮೂಲತಃ ಬೆಳಗಾವಿ ಜಿಲ್ಲೆ, ಸದ್ಯ ಬೈಕಂಪಾಡಿಯ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಪ್ರವೀಣ್ ಶಿವಶಂಕರಪ್ಪ ಕೊಲೆ ಆರೋಪಿ ಎಂದು ತಿಳಿದು ಬಂದಿದೆ. ಸಚಿನ್ ಕುಮಾರ್ ಮತ್ತು ಪ್ರವೀಣ್ ಶಿವಶಂಕರಪ್ಪ ನೆರೆಹೊರೆಯ ಮನೆಗಳಲ್ಲಿ ವಾಸವಾಗಿದ್ದರು. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
A young man was stabbed to death after arguing with someone who had not paid for alcohol. The murdered youth is Sachin Kumar, a resident of Uttar Pradesh and currently residing in Baikampady. – Tulu Times
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











