ಮಂಗಳೂರು: Tulu Times | ಇತ್ತೀಚೆಗೆ ರಿಷಭ್ ಶೆಟ್ಟಿ ಹಾಗೂ ಸಿನಿಮಾ ತಂಡ ಕಾಂತಾರ 1 ಯಶಸ್ಸಿನ ಬೆನ್ನಲ್ಲೇ ಮಂಗಳೂರಿನ ಬಾರೆಬೈಲು ಜಾರಂದಾಯ ಬಂಟ ಹಾಗೂ ವಾರಾಜಿ ಪಂಜುರ್ಲಿ ದೈವಸ್ಥಾನದಲ್ಲಿ ಹರಕೆ ಕೋಲ ಸಲ್ಲಿಸಲಾಯಿತು. ಈ ವೇಳೆ ದೈವನರ್ತಕ ಎಣ್ಣೆಬೂಳ್ಯ ಪದ್ದತಿ ವೇಳೆ ಸಂಪ್ರದಾಯ ಮೀರಿ ವರ್ತಿಸಿದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
ಸಂಪ್ರದಾಯ ಮೀರಿ ನಡೀತಾ ರಿಷಬ್ ಶೆಟ್ಟಿ ಕೊಟ್ಟ ಹರಕೆ ನೇಮೋತ್ಸವ?
ಸಾಮಾಜಿಕ ತಾಣಗಳಲ್ಲಿ ತುಳುನಾಡ ದೈವಾರಾಧಕರ ಪರ-ವಿರೋಧ ಚರ್ಚೆಗೆ ಹರಕೆ ಕೋಲ ವೇದಿಕೆಯಾಗಿದೆ. ನಟ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ವತಿಯಿಂದ ಕ್ಷೇತ್ರದಲ್ಲಿ ನಡೆದಿದ್ದ ಹರಕೆ ನೇಮೋತ್ಸವದಲ್ಲಿ ನೇಮೋತ್ಸವ ಆರಂಭಕ್ಕೂ ಮುನ್ನ ದೈವಸ್ಥಾನದಲ್ಲಿ ದೈವ ಎಣ್ಣೆಬೂಳ್ಯ ನೀಡುವ ವಾಡಿಕೆ ಸಂಪ್ರದಾಯವಾಗಿದೆ. ಈ ವೇಳೆ ದೈವ ನರ್ತಕರು ತುಳುನಾಡ ಧೈವಾರಾಧನೆ ಸಂಪ್ರದಾಯ ಮೀರಿ ವರ್ತಿಸಿದ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ನಟ ರಿಷಬ್ ಶೆಟ್ಟಿಯ ಎರಡೂ ಕಾಂತಾರ ಸಿನಿಮಾಗಳಲ್ಲಿ ಮಾರ್ಗದರ್ಶಕರಾಗಿದ್ದ ದೈವ ನರ್ತಕರೊಬ್ಬರ ವಿರುದ್ದ ಅಸಮಾಧಾನ ಕೇಳಿಬರುತ್ತಿದೆ. ಬಾರೆಬೈಲು ಹರಕೆ ನೇಮೋತ್ಸವದಲ್ಲೂ ದೈವದ ನರ್ತಕರಾಗಿದ್ದ ಎಣ್ಣೆ ಬೂಳ್ಯ ಸ್ವೀಕರಿಸಿದ್ದ ನರ್ತಕನ ವಿರುದ್ಧ ದೈವಾರಾಧಕ ವಿರುದ್ಧ ಮಾತು ಕೇಳಿ ಬರುತ್ತಿದೆ. ಈ ವೇಳೆ ದೈವ ನಟ ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿ ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದ ಹರಕೆ ನೇಮೋತ್ಸವ ವಿಭಿನ್ನ ಕ್ಷಣಕ್ಕೆ ಸಾಕ್ಷಿಯಾಗಿದೆ.
ತುಳುನಾಡಿನ ದೈವಾರಾಧನ ಪರಂಪರೆಯಲ್ಲಿ ದೈವ ನರ್ತನ ನಿಯಮ ಮೀರಿ ವರ್ತಿಸಬಾರದು ಎಂದು ಆಕ್ಷೇಪ ವ್ಯಕ್ತವಾಗಿದೆ. ರಿಷಬ್ ಶೆಟ್ಟಿಯ ಎರಡೂ ಕಾಂತಾರಗಳಲ್ಲಿ ಮಾರ್ಗದರ್ಶಕರಾಗಿದ್ದ ದೈವ ನರ್ತಕರಿಂದ ನಿಯಮ ಮೀರಿದ ಆರೋಪ ಕೇಳಿಬಂದಿದೆ. ಕಾಂತಾರ 1 ಚಿತ್ರೀಕರಣದ ವೇಳೆ ಸಿನಿಮಾಗೆ ಪೂರ್ಣ ಮಾರ್ಗದರ್ಶನ ನೀಡಿದ್ದ ದೈವ ನರ್ತಕ ಮುಖೇಶ್ ಸಿನಿಮಾ ಸೆಟ್‌ನಲ್ಲೂ ನಟ ರಿಷಬ್ ಶೆಟ್ಟಿಗೆ ದೈವಾರಾಧನ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದ್ದರು.
ಕಾಂತಾರ ಮೊದಲ ಸಿನಿಮಾಗೆ ಸೈಮಾ ಪ್ರಶಸ್ತಿ ಬಂದಾಗಲೂ ದೈವ ನರ್ತಕ ಮುಖೇಶ್ ಪ್ರಶಸ್ತಿ ಸ್ವೀಕರಿಸಿದ್ದರು. ಮೊನ್ನೆ ಬಾರೆಬೈಲ್ ನೇಮೋತ್ಸವದ ವೇಳೆಯೂ ಪಂಜುರ್ಲಿ ದೈವದ ನರ್ತಕರಾಗಿದ್ದರು. ಇದೀಗ ಇದೇ ಕಾರಣಕ್ಕೆ ದೈವ ನರ್ತನ ಮುಖೇಶ್ ವಿರುದ್ದ ಸಾಮಾಜಿಕ ತಾಣಗಳಲ್ಲಿ ದೈವಾರಾಧಕರ ಅಪಸ್ವರ ಕೇಳಿಬಂದಿದೆ. ದೈವಾರಾಧನೆಯ ಕಟ್ಟಲೆಗಳನ್ನು ಮೀರಿ ದೈವ ಕೋಲದ ಸಂಪ್ರದಾಯ ಮರೆತು ವರ್ತಿಸಿದ ಬಗ್ಗೆ ಸಾರ್ವಜನಿಕವಾಗಿ ಭಾರೀ ಪರ ವಿರೋಧ ಚರ್ಚೆಯಾಗುತ್ತಿದೆ. ಇನ್ನು ದೈವ ನರ್ತಕರಾದ ಮುಖೇಶ್ ಅವರ ಪರವಾಗಿಯೂ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಲಾಗುತ್ತಿದೆ.
Rishabh Harake; Dissatisfaction of Tulunadu idolaters against divine dancer who broke the rules! – ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











