ಮಂಗಳೂರು – ತುಳು ಟೈಮ್ಸ್: ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ತಲಪಾಡಿ ಗ್ರಾಮದ ತಚ್ಚಣಿಯಲ್ಲಿ ಎಂಡಿಎಂಎ ಮಾರಾಟದ ಬಗ್ಗೆ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ ಉಳ್ಳಾಲ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಶರೀಫ್ ಅಲಿಯಾಸ್ ಅಮೀನ್ (34), ಅಬ್ದುಲ್ ರವೂಫ್ (30), ಮತ್ತು ನಿಯಾಜ್ (23) ಬಂಧಿತರು. ಆರೋಪಿಗಳಿಂದ ಅಂದಾಜು ಎರಡು ಲಕ್ಷ ರೂ ಮೌಲ್ಯದ 42 ಗ್ರಾಂ ಎಂಡಿಎಂಎ, ಟೊಯೋಟಾ ಕಾರು, ಮೂರು ಮೊಬೈಲ್ ಫೋನ್ ಮತ್ತು ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿಸಿದ್ದಾರೆ.
ಪ್ರಾಥಮಿಕ ವಿಚಾರಣೆಯಲ್ಲಿ ನಿಯಾಜ್ ಎಂಬಾತ ಮಾದಕ ವಸ್ತು ಖರೀದಿಸಲು ಸ್ಥಳಕ್ಕೆ ಬಂದಿದ್ದ. ದಾಳಿಯ ಸಮಯ ಮತ್ತೊಬ್ಬ ಶಂಕಿತ ಸಲಾಮ್ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Three Arrested for MDMA Trafficking Near Talapady Border; Drugs Valued at Rs 2 Lakh Seized – Tulu Times
ಇದನ್ನೂ ಓದಿ: ದರ್ಶನ್ ಜೈಲಿನಲ್ಲಿ ಸಹ ಖೈದಿಗಳಿಗೆ ಕಿರುಕುಳ ಕೊಡ್ತಿದ್ದಾರಾ..?
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











