ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಬೀದಿನಾಯಿಗಳಿಗೆ ಎರಡು ಹೊತ್ತಿನ ಬಿರಿಯಾನಿ ಭಾಗ್ಯ ನಿಜಾನಾ ?

ಬೆಂಗಳೂರು : Tulu Times | ನಗರ ಪ್ರದೇಶಗಳಲ್ಲಿ ಮಾನವ ಜೀವನದ ಜತೆಜತೆಗೂ ಬೀದಿ ಪ್ರಾಣಿಗಳ ಬದುಕು ಕೂಡ ನಿಕಟವಾಗಿ ಬೆಸೆದುಕೊಂಡಿದೆ. ವಿಶೇಷವಾಗಿ ಬೀದಿ ನಾಯಿಗಳು ನಮ್ಮ ದೈನಂದಿನ ಪರಿಸರದ ಒಂದು ಭಾಗವಾಗಿದ್ದು, ಹಲವಾರು ಬಾರಿ ಆಹಾರದ ಕೊರತೆಯಿಂದ ಬಳಲುತ್ತಿರುತ್ತವೆ. ಅವರುಗಳಿಗೆ ಸಹಾನುಭೂತಿ ತೋರಿಸಿ ಆಹಾರ ನೀಡುವುದು ಮಾನವೀಯತೆಯೂ ಹೌದು. ಆದರೆ ಕೆಲವೊಮ್ಮೆ ವಿಪರೀತ ಬಿದಿನಾಯಿಗಳ ಹಾವಳಿಯಿಂದ ನಡೆದಾಡುವ ಜನರಿಗೆ ಹಾಗೂ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸೋದನ್ನು ಕಂಡ ಸುಪ್ರೀಂ ಕೋರ್ಟ್ ಕೆಲವೊಂದು ನಿಯಮಗಳನ್ನು ಜಾರಿಗೆ ತಂದಿತ್ತು.

ಆದರೆ, ಬೀದಿ ನಾಯಿಗಳ ಕಾಟಕ್ಕೆ ಬ್ರೇಕ್ ಹಾಕಲು ಜಿಬಿಎ ನಾನಾ ಪ್ರಯತ್ನ ಮಾಡ್ತಿದೆ. ಇದರ ನಡುವೆ ಇದೀಗ ಮತ್ತೆ ಬೀದಿ ನಾಯಿಗಳಿಗೆ ಬಿರಿಯಾನಿ ಭಾಗ್ಯದ ವಿಚಾರ ಚರ್ಚೆಯಲ್ಲಿದ್ದು, ಇದೀಗ ಒಂದು ಬಾರಿ ಅಲ್ಲ, ಬದಲಿಗೆ ದಿನಕ್ಕೆ ಎರಡು ಬಾರಿ ಚಿಕನ್ ಬಿರಿಯಾನಿ ನೀಡಲು ಜಿಬಿಎ ಮುಂದಾಗಿದ್ದರೆ, ಇತ್ತ ಅಧಿಕಾರಿಗಳು ಬೀದಿ ನಾಯಿಗಳಿಗೆ ಸುಪ್ರೀಂ ಕೋರ್ಟ್ ಹೆಸರಲ್ಲಿ ಕಿರುಕುಳ ಕೊಡುತ್ತಿದ್ದಾರೆಂದು ಅತಿಯಾಗಿ ಪ್ರಾಣಿಯನ್ನು ಪ್ರೀತಿಸೋರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಎರಡು ಹೊತ್ತಿನ ಊಟಕ್ಕೆ 50 ರೂ. ನಿಗದಿ ;

ಬೀದಿ ನಾಯಿಗಳ ದಾಳಿಯಿಂದ ಅನೇಕರು ಆಸ್ಪತ್ರೆಗೆ ದಾಖಲಾದರೆ ಕೆಲವರು ತಮ್ಮ‌ ಪ್ರಾಣವನ್ನೆ ಕಳೆದುಕೊಂಡಿದ್ದಾರೆ. ಆದರೆ ಇದಕ್ಕೆ ಬ್ರೇಕ್ ಹಾಕಬೇಕಿದ್ದ ಜಿಬಿಎ ಮಾತ್ರ ಬೀದಿ ನಾಯಿಗಳಿಗೆ ಬಿರಿಯಾನಿ ನೀಡುವ ವಿಚಾರಕ್ಕೆ ಮತ್ತೆ ಕೈ ಹಾಕಿದೆ. ಅದು ಒಂದು ಬಾರಿ ಅಲ್ಲ, ಬದಲಿಗೆ ದಿನಕ್ಕೆ ಎರಡು ಬಾರಿ ಬಿರಿಯಾನಿ ನೀಡಲು ಮುಂದಾಗಿದೆ. ಈಗಾಗಲೇ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬೀದಿ ನಾಯಿಗಳನ್ನ ಸೆರೆ ಹಿಡಿದು ಅವುಗಳಿಗೆ ಶೆಲ್ಟರ್ ವ್ಯವಸ್ಥೆ ಮಾಡಲು ಜಿಬಿಎ ತಯಾರಿ ನಡೆಸಿದೆ. ಇದರ ಜೊತೆಗೆ ಇದೀಗ ಬೀದಿ ನಾಯಿಗಳಿಗೆ ದಿನಕ್ಕೆ ಎರಡು ಬಾರಿ ಚಿಕನ್ ಬಿರಿಯಾನಿ ನೀಡಲು ಸಹ ತಯಾರಿ ನಡೆದಿದೆ. ಇನ್ನೂ ಕಳೆದ ಬಾರಿ ಒಂದು ಹೊತ್ತಿನ‌ ಊಟಕ್ಕೆ 22 ರೂ. ನಿಗದಿ ಪಡಿಸಲಾಗಿತ್ತು. ಆದರೆ ಇದೀಗ ಮತ್ತೆ ಮೂರು ರೂ. ಹೆಚ್ಚಳ ಮಾಡಿದ್ದು, ಒಂದು ಹೊತ್ತಿನ ಊಟದ ಬೆಲೆ 25ರೂ ನಿಗದಿ ಮಾಡಲಾಗಿದೆ. ಅಂದರೆ ಎರಡು ಹೊತ್ತಿನ ಊಟಕ್ಕೆ 50ರೂ ನಿಗದಿ ಪಡಿಸಲಾಗಿದೆ. ಸದ್ಯಕ್ಕೆ ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ವಿಚಾರ ಸದ್ದು ಮಾಡುತ್ತಿದ್ದು ಈ ಕ್ರಮ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು, ಮುಂದಿನ ಕ್ರಮಗಳ ಬಗ್ಗೆ ಕಾದು ನೋಡಬೇಕಾಗಿದೆ.

Is it true that two meals of biryani are good for street dogs? – ತುಳು ಟೈಮ್ಸ್

ಇದನ್ನೂ ಓದಿ :ಮಂಗಳೂರು: ಹೆದ್ದಾರಿಯಲ್ಲಿ ಮಾದಕ ವಸ್ತು ಸಾಗಾಟ – ನಾಲ್ವರು ಸಿಸಿಬಿ ಬಲೆಗೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/dKrXuyqaIac?si=-7d-zODtzCF_BDjp

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page