ಜೀವನಶೈಲಿ: Tulu Times | ಮನುಷ್ಯರಾದ ನಾವು ಒಂದಲ್ಲ ಒಂದು ಕಾರಣಕ್ಕಾಗಿ ಒಬ್ಬರನ್ನು ಒಬ್ಬರು ಅವಲಂಬಿಸಬೇಕು. ಅದರಲ್ಲೂ ಮನಸ್ಸಿಗೆ ನೋವಾದಾಗ ಅದನ್ನು ಇನ್ನೊಬ್ಬರ ಜೊತೆಗೆ ಹಂಚಿಕೊಳ್ಳಲೇಬೇಕು. ಇನ್ನು ಸಾಕಷ್ಟು ಜನ ಹೇಳುವ ಮಾತೆಂದರೆ ನನ್ನನ್ನು ಅವರು ಬಳಸಿಕೊಳ್ಳುತ್ತಿದ್ದಾರೆ ಅಂತ! ಹಾಗಾದ್ರೆ ನಿಮ್ಮನ್ನು ಇನ್ನೊಬ್ಬರು ಅವರ ಸ್ವಂತ ಕೆಲಸಗಳಿಗೆ ಬಳಸಿಕೊಡುತ್ತಾರೆ ಅಂತ ಅನಿಸಿದ್ರೆ ಏನರ್ಥ ನೋಡೋಣ..
ನಿಮ್ಮ ಜೀವನ ನೀವು ನೋಡಿಕೊಳ್ಳಿ..!
ಮನುಷ್ಯ ಸ್ವಾವಲಂಬಿ ಬದುಕನ್ನು ಜೀವಿಸಬೇಕಾದರೆ ಆತ ತಾನು ಮಾಡುವ ಕೆಲಸದಲ್ಲಿ ಶ್ರದ್ಧೆಯಿಂದ ಇರಬೇಕು. ಹಾಗೆ ಎಷ್ಟೋ ಜನ ತನ್ನನ್ನು ಇನ್ನೊಬ್ಬರು ಅವರ ಕೆಲಸಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಅಂತ ಕಂಪ್ಲೈಂಟ್ ಮಾಡುವವರು ಇದ್ದಾರೆ. ಇದನ್ನೇ ಮನಸ್ಸಿನಲ್ಲಿ ತೆಗೆದುಕೊಂಡು ಮನಸ್ಸಿಗೆ ನೋವು ಮಾಡಿಕೊಳ್ಳುತ್ತಾರೆ. ಕಷ್ಟದ ಸಮಯದಲ್ಲಿ ನೀವು ಇನ್ನೊಬ್ಬರಿಗೆ ಸಹಾಯ ಮಾಡಿದರೆ ಇನ್ನೊಬ್ಬರೂ ಕೂಡ ನಿಮ್ಮ ಕಷ್ಟ ಕಾಲದಲ್ಲಿ ನಿಮ್ಮ ಜೊತೆಯಾಗಿ ನಿಲ್ಲುತ್ತಾರೆ.
ಗೆಳೆತನ ಅಂದ್ರೆ ಎರಡೂ ಕಡೆಯಿಂದ ಸಹಾಯ ಹಸ್ತ ಬೇಕಲ್ವಾ..?
ಜೀವನದ ಉದ್ದಕ್ಕೂ ನಾವು ಒಂದಲ್ಲ ಒಂದು ಕಾರಣಗಳಿಗಾಗಿ ಇನ್ನೊಬ್ಬರ ಜೊತೆಗೆ ಕೈಚಾಚೆಲೇಬೇಕು. ಇಲ್ಲವಾದಲ್ಲಿ, ಅದು ಜೀವನವೇ ಅಲ್ಲ. ಇನ್ನೊಬ್ಬರಿಗೆ ಉಪಕಾರ ಮಾಡಿದರೆ ನಿಮ್ಮ ಕಷ್ಟ ಕಾಲದಲ್ಲಿ ಅವರು ನಿಮ್ಮ ಜೊತೆಯಾಗುತ್ತಾರೆ.ಇನ್ನು ಅನೇಕ ಜನ ಗೆಳೆಯರು, ಗೆಳತಿಯರು ಕಷ್ಟ ಬಂದಾಗ ಜೊತೆಗೆ ಇರುವುದಿಲ್ಲ. ಅದೇ ಅವರಿಗೆ ಕಷ್ಟ ಬಂದಾಗ ನೀವು ಅವರ ಮುಂದೆ ನಿಲ್ಲುತ್ತೀರಿ. ಅದು ನಿಮ್ಮ ಒಳ್ಳೆಯತನಕ್ಕೆ ಕಾರಣವಾಗುತ್ತದೆ. ನಿಮ್ಮನ್ನು ಇನ್ನೊಬ್ಬರು ಬಳಸಿಕೊಳ್ಳುತ್ತಾರೆ ಅಂದ್ರೆ ನೀವು ಕೂಡ ನಿಮ್ಮ ಬುದ್ಧಿವಂತಿಕೆಯನ್ನು ಬಳಸಲೇಬೇಕು.
ನಿಮ್ಮನ್ನು ಉಪಯೋಗಿಸಿಕೊಳ್ಳುವ ಮಂದಿಯಿಂದ ದೂರವಿರಿ!
ಅತಿಯಾಗಿ ಒಳ್ಳೆಯವರಾಗಲು ಹೋಗಿ ನೀವು ಕಷ್ಟಕ್ಕೆ ಸಿಲುಕದಿರಿ. ಇನ್ನೊಬ್ಬರಿಗೆ ಅತಿಯಾಗಿ ಸಹಾಯ ಮಾಡದೇ ನಿಮ್ಮ ಮನಸ್ಸಿಗೆ ಒಂದಿಷ್ಟು ಹತೋಟಿ ತರುವುದು ಒಳ್ಳೆಯದು. ಕೆಲವರು ಸಹಾಯವನ್ನು ಮಾಡಿ ನಾಲ್ಜಕು ಜನರಿಗೆ ತಿಳಿಸಿ ಜನ ಮೆಚ್ಚುಗೆ ಪಡೆಯುತ್ತಾರೆ. ಇನ್ನೂ ಕೆಲವೊಮ್ಮೆ ನಿಮ್ಮ ಕಷ್ಟ ಕಾಲದಲ್ಲಿ ನಿಮ್ಮ ಜೊತೆ ಯಾರು ನಿಲ್ಲದಿದ್ದರೆ ಕೊನೆಗೆ ನೀವಷ್ಟೇ ಇರುವಿರಿ ಜೊತೆಗೆ ಇರುವಂತಹ ಸ್ನೇಹಿತರು ನಿಮ್ಮನ್ನು ಬಳಸಿಕೊಳ್ಳುತ್ತಾರೆ ಅಂದ್ರೆ ನೀವು ಅಂತಹ ಅತಿಯಾದ ಗೆಳೆತನವನ್ನು ದೂರ ಮಾಡಿಕೊಳ್ಳಿ. ಗೆಳೆತನ ಅನ್ನುವಂತದ್ದು ತುಂಬಾ ಮುಖ್ಯ. ಆದ್ರೆ ನಿಮ್ಮನ್ನು ಬಳಸಿಕೊಳ್ಳುವಂತಹ ಗೆಳೆತನ ನಿಜಕ್ಕೂ ಒಳ್ಳೆಯದಲ್ಲ. ನೀವು ಈ ಸಮಯದಲ್ಲಿ ಕೊಂಚ ಯೋಚನೆ ಮಾಡಿ ಮುನ್ನಡೆಯಬೇಕು.
Do you feel like everyone takes advantage of you in the name of friendship?- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











