ಕೇಂದ್ರ ಸರ್ಕಾರ : Tulu Times |ಈ ಆಧುನಿಕ ಜೀವನದಲ್ಲಿ ವಿದ್ಯುತ್ ನಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಬೆಳಕು, ಅಡುಗೆ, ಸಂಚಾರ, ಸಂವಹನ, ಗೃಹೋಪಯೋಗಿ ಸಾಧನಗಳು ಇತ್ಯಾದಿ ಎಲ್ಲದಕ್ಕೂ ವಿದ್ಯುತ್ ಅಗತ್ಯ. ಈ ವಿದ್ಯುತ್ ಬಳಕೆಗೆ ತಕ್ಕಂತೆ ತಿಂಗಳಿಗೆ ಬರುವ ಬಿಲ್ ನ್ನು ವಿದ್ಯುತ್ ಬಿಲ್ ಆಗಿ ಕಾಣುತ್ತೇವೆ ಮತ್ತು ಇದು ಕೇವಲ ಹಣಪಾವತಿ ದಾಖಲೆ ಮಾತ್ರವಲ್ಲ. ಮನೆಯ ಆರ್ಥಿಕ ಯೋಜನೆ, ವಿದ್ಯುತ್ ಬಳಕೆಯ ನಿಯಂತ್ರಣ ಮತ್ತು ಉಳಿತಾಯಕ್ಕೆ ಸೂಚಕವಾಗಿಯೂ ಕಾರ್ಯನಿರ್ವಹಿಸುತ್ತದೆ.
ಆದರೆ ಈಗಿನ ತಂತ್ರಜ್ಞಾನದ ಯುಗದಲ್ಲಿ ವಿದ್ಯುತ್ ಬಿಲ್ ಗೆ ಕೂಡಾ ಎಐ ಅವಶ್ಯಕತೆಯನ್ನು ಕಂಡುಹಿಡಿಯಲಾಗಿದೆ. ದೇಶಾದ್ಯಂತ ಇರುವ ಕೋಟ್ಯಾಂತರ ವಿದ್ಯುತ್ ಗ್ರಾಹಕರ ಮೇಲೆ ಬೀಳುತ್ತಿರುವ ದೊಡ್ಡ ಮೊತ್ತದ ಬಿಲ್ ದರಗಳನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಹೊಸ ಹೆಜ್ಜೆಯಿಟ್ಟಿದ್ದು, ಕೃತಕ ಬುದ್ಧಿಮತ್ತೆ ( ಎಐ) ಮೊರೆ ಹೋಗಲು ನಿರ್ಧರಿಸಿದೆ. ಕೃತಕ ಬುದ್ಧಿಮತ್ತೆ ಬಳಸಿ ವಿದ್ಯುತ್ ಕಳ್ಳತನ ಮತ್ತು ವಿದ್ಯುತ್ ಅಪವ್ಯಯ ಆಗೋದನ್ನ ಪತ್ತೆ ಹಚ್ಚಿ, ಜನಸಾಮಾನ್ಯರ ವಿದ್ಯುತ್ ಬಿಲ್ ಕಡಿಮೆ ಮಾಡೋಕೆ ಸರ್ಕಾರ ಮುಂದಾಗಿದೆ.
ಫ್ರೀ ವಿದ್ಯುತ್ ಬಿಲ್ ಅಂದ್ರೆ ಗೃಹಜ್ಯೋತಿ ಯೋಜನೆಯಿಂದ ಎಲ್ಲಾ ಮನೆಯಲ್ಲಿ ಫ್ರೀಯಾಗಿ ವಿದ್ಯುತ್ ಬಳಕೆ ಮಾಡ್ತಾ ಕೆಲವು ಕಡೆ ಯೂನಿಟ್ ನಲ್ಲಿ ಜಾಸ್ತಿಯಿದ್ರೂ ಬಿಲ್ ಮಾಡುವಾಗ ಕಡಿಮೆ ಎಂಟ್ರಿ ಮಾಡ್ತಾ ವಿದ್ಯುತ್ ಕಳವಾಗುತಿತ್ತು. ಇನ್ನು ಕೆಲವು ಕಡೆ, ತುಂಬಾ ಮನೆಗಳಲ್ಲಿ ವಿದ್ಯುತ್ ವೈರಿಂಗ್ ಸರಿಯಾಗಿಲ್ಲ ಎಂದಾದರೆ, ಅರ್ಥ್ ಲೀಕೇಜ್ ಇದ್ದರೆ ವಿದ್ಯುತ್ ಸುಮ್ಮನೇ ಖರ್ಚಾಗುತ್ತಿರುತ್ತದೆ. ಸಾಮಾನ್ಯವಾಗಿ ಲೈಟು, ಫ್ಯಾನು ಅನಗತ್ಯವಾಗಿ ಉರಿದರೆ ಮಾತ್ರ ವಿದ್ಯುತ್ ವ್ಯಯವಾಗುತ್ತದೆ ಎಂದು ತಿಳಿದಿರುತ್ತಾರೆ. ಆದರೆ, ಅರ್ಥಿಂಗ್ ನಲ್ಲಿ ಪ್ರಾಬ್ಲಂ ಇದ್ದರೂ ಹಾಗಾಗುತ್ತೆ. ಕೇಂದ್ರ ಸರ್ಕಾರ ಸದ್ಯದಲ್ಲೇ ಅಳವಡಿಸಲಿರುವ ಎಐ ಟೂಲ್ಸ್ ಈ ತರಹದ ತಪ್ಪುಗಳನ್ನ ಪ್ರತಿದಿನ ಪತ್ತೆ ಹಚ್ಚುತ್ತವೆ.
ಇದೇ ಸಂದರ್ಭದಲ್ಲಿ, ಇದೇ ವರ್ಷ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ವಿದ್ಯುತ್ ತಿದ್ದುಪಡಿ ಮಸೂದೆ 2025 ರ ಕರಡನ್ನು ಮಂಡಿಸಿದೆ. ಈ ಮಸೂದೆಯ ಮುಖ್ಯ ಉದ್ದೇಶ ವಿದ್ಯುತ್ ಬೆಲೆಗಳನ್ನ ಸರಿಪಡಿಸುವುದು, ಅಡಗಿರುವ ಸಬ್ಸಿಡಿಗಳನ್ನ ತೆಗೆದುಹಾಕುವುದು, ಮತ್ತು ಕೈಗಾರಿಕೆಗಳಿಗೆ ಕೈಗೆಟುಕುವ ಬೆಲೆಯಲ್ಲಿ ವಿದ್ಯುತ್ ಒದಗಿಸುವುದು. ಆದರೆ, ರೈತರು ಮತ್ತು ಬಡ ಕುಟುಂಬಗಳಿಗೆ ಇರುವ ಸಬ್ಸಿಡಿಗಳನ್ನ ಈ ಮಸೂದೆ ರಕ್ಷಿಸುತ್ತದೆ. ಅಂದರೆ, ಎಲ್ಲರಿಗೂ ತೊಂದರೆ ಆಗದಂತೆ, ಅಗತ್ಯ ಇರುವವರಿಗೆ ಸಹಾಯ ಮುಂದುವರೆಯುತ್ತದೆ. ಎ.ಐ. ತಂತ್ರಜ್ಞಾನ ಬಳಸಿ ವಿದ್ಯುತ್ ಕಳ್ಳತನ ಮತ್ತು ವೇಸ್ಟ್ ಆಗೋದನ್ನ ತಡೆಯೋದು ಒಂದು ದೊಡ್ಡ ಹೆಜ್ಜೆ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. Preventing electricity theft using AI technology – ತುಳು ಟೈಮ್ಸ್
ಇದನ್ನೂ ಓದಿ :ಮಂಗಳೂರು: ಹೆದ್ದಾರಿಯಲ್ಲಿ ಮಾದಕ ವಸ್ತು ಸಾಗಾಟ – ನಾಲ್ವರು ಸಿಸಿಬಿ ಬಲೆಗೆ
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/bVV7PCunwKI?si=-ARE59rh7pfpy5-Q











