ಬೆಂಗಳೂರು: Tulu Times | ನಟ ದರ್ಶನ್ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದು, ಇದೀಗ ತನ್ನ ಜೊತೆ ಜೈಲಿನಲ್ಲಿರುವ ಸಹ ಖೈದಿಗಳಿಗೆ ಥಳಿಸಿ ಕಿರುಕುಳ ಕೊಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಹ ಕೈದಿಗೆ ನಟ ದರ್ಶನ್ ಕಿರುಕುಳ?
ಈಗಾಗಲೇ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಮತ್ತೆ ಯಡವಟ್ಟು ಮಾಡಿಕೊಂಡಿದ್ದು, ಸಹ ಕೈದಿಗೆ ಥಳಿಸಿದ್ದಾರೆ ಎನ್ನಲಾಗಿದೆ. ಜಾಮೀನು ರದ್ದಾಗಿ ಪರಪ್ಪನ ಅಗ್ರಹಾರ ಜೈಲಿಗೆ ಮರಳಿರುವ ದರ್ಶನ್ ಸಹ ಕೈದಿಗಳಿಗೆ ದೈಹಿಕ ಕಿರುಕುಳ ನೀಡುತ್ತಿರುವುದು ಕೇಳಿ ಬರುತ್ತಿದೆ. ಈಗ ಪರಪ್ಪನ ಅಗ್ರಹಾರದಲ್ಲಿ ರೂಲ್ಸ್ ಗಳು ಕಠಿಣವಾಗಿದ್ದು,ಇದರಿಂದ ನಟ ದರ್ಶನ್ ತತ್ತರಿಸಿಹೋಗಿದ್ದಾರಂತೆ. ಮಾನಸಿಕ ಒತ್ತಡದಿಂದ ದರ್ಶನ್ ಸಹ ಕೈದಿಗಳಿಗೆ ಕಿರುಕುಳ ನೀಡುತ್ತಿರುವ ಆರೋಪವಿದೆ. ಇತ್ತೀಚೆಗೆ ಜೈಲಿನ ಪಾರ್ಟಿ ವಿಡಿಯೋ ವೈರಲ್ ಆದ ನಂತರ ಐಪಿಎಸ್ ಅಧಿಕಾರಿ ಅಂಶು ಕುಮಾರ್ ಜೈಲಿನ ಮುಖ್ಯ ಸೂಪರಿಂಟೆಂಡೆಂಟ್ ಆಗಿ ನೇಮಕಗೊಂಡಿದ್ದಾರೆ.
ನಟ ದರ್ಶನ್ ಸರದಿ ಸಾಲಿನಲ್ಲಿ ನಿಂತು ಊಟ ತೆಗೆದುಕೊಂಡು ಹೋಗಬೇಕು. ಶೌಚಾಲಯ ಕೂಡ ತಾವೇ ಕ್ಲೀನ್ ಮಾಡಿಕೊಳ್ಳಬೇಕು. ಇದರಿಂದ ದರ್ಶನ್ ಬೇಸತ್ತು ಹೋಗಿದ್ದಾರೆ. ನಾಗರಾಜು ಅವರನ್ನು ಹೊರತುಪಡಿಸಿ ಉಳಿದ ಆರೋಪಿಗಳಿಗೆ ದರ್ಶನ್ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ದರ್ಶನ್ ಜೊತೆ ಒಂದೇ ಸೆಲ್ನಲ್ಲಿ ಅನುಕುಮಾರ್, ಜಗ್ಗ, ನಾಗರಾಜು, ಪ್ರದೋಶ್, ಲಕ್ಷ್ಮಣ್ ಇದ್ದಾರೆ. ಕೆಲ ದಿನದ ಹಿಂದೆ ಜಗ್ಗ ಹಾಗೂ ದರ್ಶನ್ ಮಧ್ಯೆ ಜಗಳ ಆಗಿದೆ. ಇಬ್ಬರ ಜಗಳ ಜೋರಾಗುತ್ತಿದ್ದಂತೆ ಅಧಿಕಾರಿಗಳು ಬಂದು ಜಗಳ ನಿಲ್ಲಿಸಿದ್ದಾರೆ. ಇನ್ನು, ಮಲಗಿದ್ದ ಖೈದಿಗಳನ್ನು ಕಾಲಿನಲ್ಲಿ ಒದ್ದ ನಟ ದರ್ಶನ್ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಹೇಳಲಾಗುತ್ತಿದೆ.
ಇಲ್ಲೇ ಇದ್ರೆ ಸಾಯ್ತೀನಿ..ಖೈದಿ ಅಳಲು!
ಜೈಲಿನಲ್ಲಿ ನಟ ದರ್ಶನ್ ಜೊತೆ ಇರುವಂತಹ ಸಹ ಖೈದಿ ಅನುಕುಮಾರ್ ಸಾಯೋದಾಗಿ ಹೇಳಿಕೊಂಡಿದ್ದಾರಂತೆ. ಇವರಿಗೆ ಜಾಮೀನು ಸಿಗುತ್ತಿಲ್ಲ ಅಂತ ಒಂದು ಕಡೆಯಾದರೆ, ಇನ್ನೊಂದು ಕಡೆ ದರ್ಶನ್ ಚಿತ್ರಹಿಂಸೆ ತಡೆಯಲಾಗುತ್ತಿಲ್ಲ. ಹೀಗಾಗಿ ದರ್ಶನ್ ಇರುವ ಸೆಲ್ ಮೇಲೆ ಕಾಳಜಿ ವಹಿಸಲಾಗಿದ್ದು, ಟಾರ್ಚರ್ ತಡೆಯಲಾರದೆ ಅನುಕುಮಾರ್, ತಮ್ಮನ್ನು ಚಿತ್ರದುರ್ಗ ಜೈಲಿಗೆ ಶಿಫ್ಟ್ ಮಾಡಲು ಮನವಿ ಮಾಡಿದ್ದಾರೆ.
Was Darshan harassing fellow prisoners in jail?- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











