ವಿಟ್ಲ – ತುಳು ಟೈಮ್ಸ್: ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಕಾರೋಪಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕರೋಪಾಡಿ ನಿವಾಸಿ ನಾರಾಯಣ ನಾಯ್ಕ್ ಮೃತಪಟ್ಟವರು.
ನಾರಾಯಣ ನಾಯ್ಕ್ ಅವರು ಡಿ. 7 ರ ಆದಿತ್ಯವಾರದಂದು ಕರೋಪಾಡಿ ಗ್ರಾಮದ ಪದ್ಯಾನ ಗಡಿಭಾಗ ಎಂಬಲ್ಲಿರುವ ಮನೆಯ ಎದುರುಗಡೆಯ ತೆಂಗಿನ ಮರದಿಂದ ಅಲ್ಯೂಮಿನಿಯಂ ಕೊಕ್ಕೆಯಿಂದ ತೆಂಗಿನಕಾಯಿ ಕೀಳುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಕೊಕ್ಕೆ ತೆಂಗಿನ ಮರದ ಪಕ್ಕದಲ್ಲಿ ಹಾದುಹೋಗಿರುವ HT ಲೈನ್ ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ದೋಟಿ ಸ್ಪರ್ಶಗೊಂಡು ವಿದ್ಯುತ್ ಪ್ರವಹಿಸಿ ಬಿದ್ದಿದ್ದಾರೆ.
ಕೂಡಲೇ ಅವರನ್ನು ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಪರಿಶೀಲಿಸಿದ ವೈದ್ಯರು ನಾರಾಯಣ ನಾಯ್ಕ್ ರವರನ್ನು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಈ ಬಗ್ಗೆ ವಿಟ್ಲ ಠಾಣಾ ಯುಡಿಅರ್ ನಂಬ್ರ 46/2025 ಕಲಂ:194(1) BNSS 2023ಯಂತೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿದ್ದ ಅಭಿಷೇಕ್ ಔಟ್ !
Vittla: A man was electrocuted after the long Aluminum hook, he was came into contact with a HT livewire on De.7 Wednesday. The deceased is Narayana Naik, Karopady Village.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











