ಬಿಗ್ ಬಾಸ್: Tulu Times | ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಈ ವಾರ ಮನೆಯಿಂದ ಅಭಿಷೇಕ್ ಹೊರ ನಡೆದಿದ್ದಾರೆ. ಮಾಳು ಹಾಗೂ ಅಭಿಷೇಕ್ ಕೊನೆಯಲ್ಲಿ ಉಳಿದಿದ್ದರೂ ಅದರಲ್ಲಿ ಮಾಳು ಮನೆಯೊಳಗಡೆ ಪ್ರವೇಶ ಮಾಡಿ, ಅಭಿಷೇಕ್ ಮನೆಯಿಂದ ಔಟ್ ಆಗಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಒಟ್ಟು ಒಂಭತ್ತು ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ರಾಶಿಕಾ, ಅಭಿಷೇಕ್, ಗಿಲ್ಲಿ, ಸ್ಪಂದನಾ, ರಕ್ಷಿತಾ, ಕಾವ್ಯ ಮತ್ತು ನಾಮಿನೇಷನ್ ನಲ್ಲಿ ಇದ್ದರು. ಇದರಲ್ಲಿ ಅಭಿಷೇಕ್ ಎಲಿಮಿನೇಟ್ ಆಗಿದ್ದಾರೆ.
ಇದನ್ನೂ ಓದಿ: ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ ದಂಪತಿ
ಅಭಿಷೇಕ್ ಮನೆಯಿಂದ ಎಲಿಮಿನೇಟ್ ಆದರೆ ಅಭಿಷೇಕ್ ಹಾಗೂ ಸ್ಪಂದನಾ ಈ ವಾರ ಜೋಡಿ ಕ್ಯಾಪ್ಟನ್ ಆಗಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಒಬ್ಬರೇ ಮನೆಯ ಕ್ಯಾಪ್ಟನ್ ಆಗುತ್ತಾರೆ ಅನ್ನೋದು ಪ್ರಶ್ನೆ. ಇನ್ನು ಕನ್ನಡ ವಾಹಿನಿಯಲ್ಲಿ ಲಕ್ಷಣ ಧಾರಾವಾಹಿಯ ಮೂಲಕ ಜನರಿಗೆ ಪರಿಚಯವಾದ ನಟ ಅಭಿಷೇಕ್ ಶ್ರೀಕಾಂತ್ ಅವರು ಬಿಗ್ ಬಾಸ್ ಮನೆಯ ಜರ್ನಿಯನ್ನು ಮುಕ್ತಾಯಗೊಳಿಸಿದ್ದಾರೆ. 70-80 ಆಡಿಷನ್ಸ್ ಕೊಟ್ಟು, ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಶಾಂತಂ ಪಾಪಂ’ ಸೀರಿಯಲ್‌ನಲ್ಲಿ ಮೊದಲು ಅಭಿಷೇಕ್ ನಟಿಸಿದರು. ‘ಯಜಮಾನಿ’, ‘ಲಕ್ಷಣ’, ‘ನನ್ನ ದೇವರು’, ‘ವಧು’ ಮುಂತಾದ ಧಾರಾವಾಹಿಗಳಲ್ಲಿ ಅಭಿಷೇಕ್ ನಟಿಸಿದ್ದಾರೆ. ‘ಕೋಟಿ’ ಸಿನಿಮಾದಲ್ಲೂ ಅಭಿಷೇಕ್ ಮಿಂಚಿದ್ದರು.
ಇದನ್ನೂ ಓದಿ: ನಿಮ್ಮ ಯೋಗ್ಯತೆ ಬಗ್ಗೆ ಪ್ರಶ್ನೆ ಮಾಡ್ತಾರಾ..? ಸಿಂಪಲ್ ಹೀಗೆ ಮಾಡಿ ಸಾಕು!
ಬೆಂಗಳೂರಿನಲ್ಲಿ ಹುಟ್ಟಿದ ಅಭಿಷೇಕ್ ಬಿಷಪ್ ಕಾಟನ್ ಬಾಯ್ಸ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದು ಪಿಇಎಸ್ ಯೂನಿವರ್ಸಿಟಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ್ದಾರೆ.ಅಭಿಷೇಕ್ ಶ್ರೀಕಾಂತ್ ಕುಟುಂಬದಲ್ಲಿ ಯಾರೂ ನಟರಿಲ್ಲ. ಆದರೂ ನಟನೆಯಲ್ಲಿ ಅಭಿಷೇಕ್ ಶ್ರೀಕಾಂತ್ ಆಸಕ್ತಿ ಬೆಳೆಸಿಕೊಂಡರು. ಯಾವುದೇ ಬ್ಯಾಕ್‌ಗ್ರೌಂಡ್ ಇಲ್ಲದೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿರುವ ಇವರಿಗೆ ಬಿಗ್ ಬಾಸ್ ಅವಕಾಶ ಸಿಕ್ಕಿತ್ತು.
ಇದನ್ನೂ ಓದಿ: ಮದುವೆ ಬಗ್ಗೆ ಮೌನ ಮುರಿದ ಸ್ಮೃತಿ ಮಂಧಾನ ಹೇಳಿದ್ದೇನು..?
Abhishek, who was the captain, is out of the Bigg Boss house!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











