ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಮಿಟ್ಟಿ ಬೆಕ್ಕಿನ ಮಾಯಾ ಸಾಹಸ : ಮಕ್ಕಳ ವಾರದ ಕಥೆ

ಮಕ್ಕಳ ಕಥೆ : Tulu Times | ಒಂದು ಕಾಲದಲ್ಲಿ, ಮಿಟ್ಟಿ ಎಂಬ ಚಿಕ್ಕ ಬೆಕ್ಕು ತನ್ನ ತಾಯಿಯ ಜೊತೆಗೆ ಹಳ್ಳಿಯ ಅಂಚಿನಲ್ಲಿರುವ ಒಂದು ಸುಂದರ ಗುಡಿಸಲಿನಲ್ಲಿ ವಾಸಿಸುತ್ತಿತ್ತು. ಮಿಟ್ಟಿಗೆ ಆಟವಾಡುವುದು ತುಂಬಾ ಇಷ್ಟ. ಆದರೆ ಯಾರೂ ಕೂಡಾ ಮಿಟ್ಟಿಯ ಜೊತೆ ಆಟವಾಡೋದಿಕ್ಕೆ ಬರ್ತಾ ಇಲ್ಲದ ಕಾರಣ ಮಿಟ್ಟಿ ಒಬ್ಬಂಟಿಯಾಗಿ ಇರ್ತಿತ್ತು. ಮಿಟ್ಟಿಗೆ ವಿಶೇಷವಾಗಿ ಬಣ್ಣ ಬಣ್ಣದ ಚಿಟ್ಟೆಗಳನ್ನು ಹಿಂಬಾಲಿಸುವುದು ಅಂದ್ರೆ ಬಹಳ ಇಷ್ಟ. ಒಂದು ದಿನ ಮಿಟ್ಟಿ ಹೂವಿನ ತೋಟದಲ್ಲಿ ಆಟವಾಡುತ್ತಿದ್ದಾಗ, ಚಿನ್ನದ ಬಣ್ಣದ ಒಂದು ಚಿಟ್ಟೆ ಅವಳ ಮುಂದೆ ಹಾರಿತು. ಅದು ಸಾಮಾನ್ಯ ಚಿಟ್ಟೆಯಂತಿರಲಿಲ್ಲ ಅದರಿಂದ ಹೊಳೆಯುವ ಬೆಳಕು ಬರುತ್ತಿತ್ತು.

ಮಿಟ್ಟಿ ಆಶ್ಚರ್ಯದಿಂದ, “ಅಯ್ಯೋ! ನೀನು ಯಾರು?” ಎಂದು ಕೇಳಿತು. ಚಿಟ್ಟೆ ನಗುತ ಹೇಳಿತು, “ನಾನು ಮಾಯಾ ಚಿಟ್ಟೆ. ಧೈರ್ಯವಾಗಿರುವ ಮಕ್ಕಳಿಗೆ ಮತ್ತು ಪ್ರಾಣಿಗಳಿಗೆ ಸಣ್ಣ ಉಡುಗೊರೆ ಕೊಡುತ್ತೇನೆ. ನೀನು ನನ್ನನ್ನು ಹಿಂಬಾಲಿಸಿ ಬಂದರೆ, ನಾನು ನಿನಗೆ ಒಂದು ಮಾಯಾ ಬೀಜ ನೀಡುತ್ತೇನೆ.” ಎಂದು. ಮಿಟ್ಟಿ ಹಿಗ್ಗಿ ಚಿಟ್ಟೆ ಹಾರುತ್ತಿದ್ದಂತೆ ಅದನ್ನು ಹಿಂಬಾಲಿಸಿ ಅರಣ್ಯಕ್ಕೆ ಓಡಿತು. ಸ್ವಲ್ಪ ದೂರ ಹೋದ ಮೇಲೆ, ಚಿಟ್ಟೆ ಒಂದು ದೊಡ್ಡ ಮರದ ಬಳಿಯಲ್ಲಿ ನಿಂತಿತು ಮತ್ತು ಮಿಟ್ಟಿಯ ಕೈಯಲ್ಲಿ ಒಂದು ಚಿಕ್ಕ ಚಿನ್ನದ ಬೀಜ ಹಾಕಿತು.
“ಈ ಬೀಜವನ್ನು ನೀನು ಮನೆಯಲ್ಲಿ ನೆಟ್ಟರೆ, ಅದು ನಿನಗೆ ಬೇಕಾದ ಫಲ ಕೊಡುವ ಮರವಾಗಿ ಬೆಳೆಯುತ್ತದೆ,” ಎಂದಿತು ಚಿಟ್ಟೆ. ಮಿನಿ ಮನೆಗೆ ಓಡಿ ಹೋಗಿ, ಆ ಬೀಜವನ್ನು ತನ್ನ ಮನೆ ಬದಿಯ ಮಣ್ಣಿನಲ್ಲಿ ನೆಟ್ಟಿತು. ಆಗ ಅದ್ಭುತವೇ ಆಯಿತು ನೋಡಿ… ಕೆಲವೇ ಗಂಟೆಗಳಲ್ಲಿ ಆ ಬೀಜದಿಂದ ಒಂದು ಚಿಕ್ಕ ಗಿಡ ಹುಟ್ಟಿ, ನಿಧಾನವಾಗಿ ದೊಡ್ಡ ದೊಡ್ಡ ಹಣ್ಣುಗಳಿಂದ ತುಂಬಿದ ಮರವಾಗಿ ಬೆಳೆಯಿತು.

ಆ ಮರದ ಹಣ್ಣುಗಳು ಯಾವಾಗ ಬೇಕಾದರೂ ಮಿಟ್ಟಿ ಬಯಸಿದಂತೆ ಬದಲಾಗುತ್ತಿತ್ತು. ಸಿಹಿ ಹಾಲು, ಚಾಕಲೇಟ್, ಸೇಬು, ಮತ್ತು ಕೆಲವೊಮ್ಮೆ ಆಟಿಕೆಗಳು ಕೂಡಾ ಕೊಡುತ್ತಿತ್ತು. ಮಿಟ್ಟಿ ತನ್ನವರನ್ನೆಲ್ಲಾ ಕರೆದು ಆ ಜಾದೂ ಮರದ ಹಣ್ಣುಗಳನ್ನು ಹಂಚಿತು. ಆ ದಿನದಿಂದ, ಮಿಟ್ಟಿ ತನ್ನ ಮಿತ್ರರೊಂದಿಗೆ ಸಂತೋಷವಾಗಿ, ಮಂತ್ರಮಯ ಮರದ ಕೆಳಗೆ ಆಟವಾಡುತ್ತಾ ಜೀವನ ಸಾಗಿಸಿತು. The Magic Adventure of Mitti the Cat: Children’s Weekly Story – ತುಳು ಟೈಮ್ಸ್

ಇದನ್ನೂ ಓದಿ :ನಿಮ್ಮ ಯೋಗ್ಯತೆ ಬಗ್ಗೆ ಪ್ರಶ್ನೆ ಮಾಡ್ತಾರಾ..? ಸಿಂಪಲ್ ಹೀಗೆ ಮಾಡಿ ಸಾಕು!

=======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/Ydo5aphrgek?si=BeFhxecl-ym8yyIB

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page