ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನಿಮ್ಮ ಯೋಗ್ಯತೆ ಬಗ್ಗೆ ಪ್ರಶ್ನೆ ಮಾಡ್ತಾರಾ..? ಸಿಂಪಲ್ ಹೀಗೆ ಮಾಡಿ ಸಾಕು!

ಜೀವನಶೈಲಿ: Tulu Times | ಜೀವನದಲ್ಲಿ ನಿಮ್ಮ ಯೋಗ್ಯತೆ ಬಗ್ಗೆ ಒಬ್ಬರು ಮಾತನಾಡುತ್ತಾರೆ ಅಂದ್ರೆ ನೀವು ಖಂಡಿತವಾಗ್ಲೂ ಸುಮ್ಮನಿರಲ್ಲ ತಾನೆ? ನಿಮ್ಮ ಮನಸ್ಸಿಗೆ ವಿಪರೀತ ನೋವಾಗುತ್ತದೆ. ಈ ರೀತಿಯಾದಂತಹ ಸನ್ನಿವೇಶಗಳನ್ನು ಬಹಳಷ್ಟು ಜನ ಅನುಭವಿಸುತ್ತಾರೆ. ಕೆಲವರು ಹೇಳಿಕೊಳ್ಳುತ್ತಾರೆ, ಇನ್ನೂ ಕೆಲವೊಬ್ಬರು ಮೌನವಾಗಿ ಸ್ವೀಕರಿಸುತ್ತಾರೆ. ಅಷ್ಟಕ್ಕೂ ನಿಮ್ಮ ಯೋಗ್ಯತೆಯ ಬಗ್ಗೆ ಯಾರಾದ್ರೂ ಕೆಟ್ಟದಾಗಿ ಮಾತನಾಡಿದರೆ ಅವರಿಗೆ ಏನು ಅಂತ ಉತ್ತರಿಸಬೇಕು ಓದಿ..

ಅತಿಯಾಗಿ ಒಳ್ಳೆಯವರಾಗಲು ಹೋಗಬೇಡಿ! 

ನೀವು ಕಣ್ಣ ಮುಂದೆ ನಡೆದ ತಪ್ಪುಗಳನ್ನು ಬಿಡಿಸಿ ಹೇಳುತ್ತಿರಿ ಅಂದ್ರೆ ಅದು ನಿಮ್ಮ ಒಳ್ಳೆಯತನ.. ನೀವು ಪರಿಶುದ್ಧವಾಗಿ ಬದುಕುತ್ತಿದ್ದೀರಿ ಎಂದರ್ಥ! ನಿಮ್ಮ ತಪ್ಪುಗಳನ್ನು ಒಪ್ಪಿಕೊಂಡು ಬದುಕುವುದರಿಂದ  ಯಾರ ಮುಂದೆಯೂ ತಲೆತಗ್ಗಿಸಬೇಕಾಗಿಲ್ಲ. ಆದ್ರೆ ಅದೇ  ನಿಮ್ಮ ಯೋಗ್ಯತೆಯನ್ನು ಇನ್ನೊಬ್ಬರು ಪ್ರಶ್ನೆ ಮಾಡಿದ್ರೆ ಖಂಡಿತವಾಗ್ಲೂ ನೀವು ಬೇಸರ ಮಾಡಿಕೊಳ್ಳಬೇಕಾಗಿಲ್ಲ, ಯಾಕಂದ್ರೆ ನೀವು ಮಾತನಾಡಿರುವುದು ನಿಜವಾದ ಸಂಗತಿ ಆಗಿರುತ್ತದೆ. ಸತ್ಯ ಸಂಗತಿಗಳನ್ನು ಓಪನ್ ಆಗಿ ಬಿಚ್ಚಿಟ್ಟರೇ ಅದು ನಿಮ್ಮ ಒಳ್ಳೆಯತನ. ಸಮಾಜದಲ್ಲಿ ಏನೋ ಅನ್ಯಾಯ ಆಗುತ್ತಿದೆ ಅಥವಾ ಎಲ್ಲೋ ಒಂದು ಕಡೆ ತಪ್ಪಾಗುತ್ತಿದೆ ಅಂದ್ರೆ ಅದನ್ನು ನೀವು ಹೇಳಿದಾಗ ಇನ್ನೊಬ್ಬರಿಗೆ ನೋವು ಆಗಬಹುದು. ಇದರಿಂದ ಅವರು ನಿಮಗೆ ಬಹಳ ಕೆಟ್ಟದಾಗಿ ನಿಮ್ಮ ಬಗ್ಗೆ ಮಾತನಾಡಬಹುದು. ನಿನಗೆ ಯೋಗ್ಯತೆ ಇಲ್ಲ ಅಂತ ನಿಮ್ಮ ಯೋಗ್ಯತೆಯ ಬಗ್ಗೆ ಪ್ರಶ್ನೆ ಮಾಡಬಹುದು ಇವೆಲ್ಲವನ್ನೂ ಕೂಡ ನೀವು ಅತಿಯಾಗಿ ಮನಸ್ಸಿಗೆ ತೆಗೆದುಕೊಳ್ಳಬೇಕಾಗಿಲ್ಲ.

ಬಹಳ ಸೌಮ್ಯ ಸ್ವಭಾವದರಾಗಿದ್ರೆ ನೀವೇ ಇವ್ರಿಗೆ ಆಹಾರ!

ಎಲ್ಲೋ ಒಂದೆಡೆ ತಪ್ಪಾಗುತ್ತಿದೆ ಅಂದ್ರೆ ನೀವು ಅದರ ಬಗ್ಗೆ ಖಂಡಿತವಾಗಲೂ ಮಾತನಾಡಿ.. ಇಲ್ಲವಾದಲ್ಲಿ ನೀವು ಮೌನವಾಗಿರುತ್ತೀರಿ. ನೀವು ಅತಿಯಾಗಿ ಹೊಂದಿಕೊಳ್ಳೋಕೆ ಟ್ರೈ ಮಾಡದಿರಿ. ಇನ್ನೊಬ್ಬರ ತಪ್ಪುಗಳನ್ನು ನೀವು ಹೇಳುವಾಗ ಜಾಗರೂಕರಾಗಿರಿ. ನಿಮ್ಮತನವನ್ನು ನೀವು ಬಿಟ್ಟುಕೊಡಬೇಡಿ. ನಿಮ್ಮ ಮಾತುಗಳು ಇನ್ನೊಬ್ಬರಿಗೆ ಬೇಸರಾಗುತ್ತಿದೆ ಅಂದ್ರೆ ನೀವು ಅವರ ಸಂಗ ಮಾತನಾಡುವುದು ಕಡಿಮೆ ಮಾಡಿ. ಇನ್ನು ಕೆಲವೊಬ್ಬರು ಯೋಗ್ಯತೆಯ ಬಗ್ಗೆ ಪ್ರಶ್ನೆ ಮಾಡಿದಾಗ ಬಹಳ ಮೃದುವಾಗಿ ಇದ್ದುಬಿಡುತ್ತಾರೆ.  ನೀವು ಬಹಳನೇ ಮೃದು ಸ್ವಭಾವತವರಾಗಿದ್ರೆ ಕಷ್ಟ. ಎಲ್ಲವನ್ನೂ ಕೂಡ ಸಹಿಸಿಕೊಂಡು ಬಾಳಬೇಕಾಗುತ್ತದೆ. ಇದರಿಂದ ನಿಮ್ಮತನವನ್ನು ನೀವು ನಿಧಾನವಾಗಿ ಕಳೆದುಕೊಂಡು ಬರುತ್ತಿರಿ. ನಿಮ್ಮ ಯೋಗ್ಯತೆಯ ಬಗ್ಗೆ ಇನ್ಯಾರೋ ಪ್ರಶ್ನೆ ಮಾಡುತ್ತಾರೆ ಅಂದಾಗ ನೀವು ಖಂಡಿತವಾಗ್ಲೂ ಬದಲಾಗಲೇಬೇಕು, ಅವರಿಗೋಸ್ಕರ ಅಲ್ಲ ನಿಮಗೋಸ್ಕರ! ಅದೆಷ್ಟು ಗಟ್ಟಿ ಮನಸ್ಸು ಮಾಡಿ ಆದರೂ ನೀವು ಬದಲಾಗಬೇಕು.  ನೀವು ನಿಮ್ಮ ಹಾದಿಯಲ್ಲಿ ಹೋದರೆ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಸಮಾಜದಲ್ಲಿ ಎಲ್ಲರೂ ಸಮಾನರು! ಯಾರಿಗೂ ಯೋಗ್ಯತೆ ಬಗ್ಗೆ ಮಾತನಾಡುವ ಹಕ್ಕಿಲ್ಲ!

ಅದೆಷ್ಟೋ ಜನ ಯಾರೋ ಏನೋ ಬೈದ್ರು ಅಥವಾ ತನ್ನ ಯೋಗ್ಯತೆಯ ಬಗ್ಗೆ ಮಾತನಾಡಿದ್ರು ಅಂತ ಮನಸ್ಸಿಗೆ ತೆಗೆದುಕೊಂಡು ನೊಂದಿಕೊಳ್ಳುತ್ತಾರೆ. ಇದು ಸಹಜ. ಆದ್ರೆ ನಿಮ್ಮ ಯೋಗ್ಯತೆಯ ಬಗ್ಗೆ ಮಾತನಾಡಲು ಯಾರಿಗೂ ಕೂಡ ಅವಕಾಶ ಇಲ್ಲ. ಈ ಪ್ರಪಂಚದಲ್ಲಿ ಎಲ್ಲರೂ ಸಮಾನರು. ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಲು ಯಾರಿಗೂ ಹಕ್ಕಿಲ್ಲ. ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಅಂದ್ರೆ ಖಂಡಿತವಾಗಲೂ ಅವರಿಗೆ ನಿಮ್ಮ ಮೇಲೆ ಪ್ರೀತಿ ಇಲ್ಲ ಎಂದರ್ಥ. ಹಾಗಾಗಿ, ಅವರ ಸಂಗವನ್ನು ನಿಧಾನವಾಗಿ ಕಡಿಮೆ ಮಾಡಿ. ನಿಮಗೆ ಇಷ್ಟವಾಗುವ ಬದುಕನ್ನು ನೀವು ಬದುಕಿ. ನೀವು ನೀವಾಗಿ ಅವರಿಂದ ದೂರ ಹೋದರೆ ನಿಮ್ಮ ಮನಸ್ಸಿಗೆ ಒಳ್ಳೆಯದು. ನಿಮಗೆ ಇಷ್ಟವಾಗುವಂತಹ ವ್ಯಕ್ತಿಗಳ ಜೊತೆ ನೀವು ಮಾತನಾಡಿ ಸಮಯ ಕಳೆಯಿರಿ. ನಿಮಗೆ ಇಷ್ಟವಾದಂತಹ ಸ್ಥಳಗಳಿಗೆ ಭೇಟಿ ನೀಡಿ. ಮನಸ್ಸನ್ನು ನಿರಾಳವಾಗಿಸಿಕೊಳ್ಳಿ. ನಿಮ್ಮ ಯೋಗ್ಯತೆಯ ಬಗ್ಗೆ ಇನ್ನೊಬ್ಬರು  ಮಾತನಾಡಲು ಬಂದಾಗ ಖಂಡಿತವಾಗ್ಲೂ ನೀವು ಅವರಿಂದ ದೂರವಾಗಿರಿ.

Are you questioning your qualifications? Just do this!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page