ಟಿಇಟಿ ಪರೀಕ್ಷೆ : Tulu Times | ಶಿಕ್ಷಕರಾಗಿ ಸೇವೆ ಸಲ್ಲಿಸುವುದು ಒಂದು ಗೌರವಾನ್ವಿತ ವೃತ್ತಿಯಾಗಿದ್ದು, ಶಾಲಾ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರ ಅರ್ಹತೆ ಪರಿಶೀಲಿಸುವ ಉದ್ದೇಶದಿಂದ ಭಾರತದಲ್ಲಿ ಟೀಚರ್ ಎಲಿಜಿಬಿಲಿಟಿ ಟೆಸ್ಟ್ ಅನ್ನು ಪರಿಚಯಿಸಲಾಗಿದೆ. ಕರ್ನಾಟಕದಲ್ಲಿ ಇದನ್ನು ಕರ್ನಾಟಕ ಟಿಇಟಿ ಎಂದು ಕರೆಯಲಾಗುತ್ತದೆ. ಈ ಸಲುವಾಗಿ ಡಿಸೆಂಬರ್ 7 ರಂದು ಕರ್ನಾಟಕದಾದ್ಯಂತ ಟಿಇಟಿ ಪರೀಕ್ಷೆ ಬರೆಯಲು ದಿನ ನಿಗದಿಯಾಗಿದೆ.
ಟಿಇಟಿ ಪರೀಕ್ಷೆಯು ಒಂದು ಅರ್ಹತಾ ಪರೀಕ್ಷೆಯಾಗಿರುವುದರಿಂದ, ಪ್ರಾಥಮಿಕ ಶಿಕ್ಷಕರಾಗಿ (1ರಿಂದ 5ನೇ ತರಗತಿ) ಅಥವಾ ಹೈಸ್ಕೂಲ್ ಶಿಕ್ಷಕರಾಗಿ (6ರಿಂದ 8ನೇ ತರಗತಿ) ನೇಮಕಾತಿಗೆ ಬೇಕಾಗುವ ಕಡ್ಡಾಯ ಅರ್ಹತೆ ಇದಾಗಿದೆ. ಇಲ್ಲಿ ಟಿಇಟಿ ಪಾಸಾದರೆ ಮಾತ್ರ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಕರ್ನಾಟಕ ಅರ್ಹತಾ ಪರೀಕ್ಷೆ 2025ರ ಅರ್ಹತಾ ಪರೀಕ್ಷೆಯು ಡಿಸೆಂಬರ್ 07, 2025 ರಂದು ನಡೆಯಲಿದ್ದು, ಪರೀಕ್ಷೆಯು ಎರಡು ಅವಧಿಯಲ್ಲಿ ನಡೆಯುತ್ತದೆ, ಬೆಳಿಗ್ಗೆ 9. 30 ರಿಂದ 12 ಗಂಟೆವರೆಗೆ ಮತ್ತು ಮಧ್ಯಾಹ್ನ 2 ರಿಂದ 4.30 ರವರೆಗೆ ಪರೀಕ್ಷೆಯು ನಡೆಯುತ್ತದೆ. ಪರೀಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಯಾವುದೇ ರೀತಿಯ ನಕಲು ಹಾಗೂ ಮೊಬೈಲ್, ಬ್ಲೂಟೂತ್, ಸ್ಮಾರ್ಟ್ ವಾಚ್ ಸೇರಿದಂತೆ ಅತ್ಯಾಧುನಿಕ ತಾಂತ್ರಿಕ ಸಾಧನ ಸಲಕರಣೆಗಳನ್ನು ಪರೀಕ್ಷಾ ಕೊಠಡಿಗೆ ತರದಂತೆ ಮತ್ತು ಬಳಸದಂತೆ ಮುಂಜಾಗೃತೆ ವಹಿಸಬೇಕೆಂದು ಸೂಚಿಸಲಾಗಿದೆ.
ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರತಿ ಅಧಿವೇಶನದ ಪರೀಕ್ಷಾ ಪ್ರಾರಂಭದ ಅವಧಿಗಿಂತ ಒಂದು ಗಂಟೆ ಮುಂಚಿತವಾಗಿ ಹಾಜರಿರಬೇಕು. ಪರೀಕ್ಷೆ ಪತ್ರ ಇಲ್ಲದೇ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ. ಈ ಬಗ್ಗೆ ಯಾವುದೇ ವಿನಾಯಿತಿ ಇರುವುದಿಲ್ಲ. ಬಹಳ ಕಟ್ಟುನಿಟ್ಟಿನ ಕ್ರಮಗಳು ಇಲ್ಲಿ ಜಾರಿಯಲ್ಲಿದ್ದು ಪರೀಕ್ಷೆ ಬರೆಯಲು ಬರುವ ಎಲ್ಲಾ ಶಿಕ್ಷಕರು/ವಿದ್ಯಾರ್ಥಿಗಳು ಇದನ್ನು ಅನುಸರಿಸಬೇಕಾಗುತ್ತದೆ.
Strict action in the teacher eligibility test to be held on December 7th – ತುಳು ಟೈಮ್ಸ್
ಇದನ್ನೂ ಓದಿ :150ಕ್ಕೂ ಅಧಿಕ ಪದಕ ಪಡೆದ ಬೋಳಾರ ಕುಟ್ಟಿ ಕೋಣ ಇನ್ನಿಲ್ಲ
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/CgxzokSn8c4?si=YB3MZXq1Gts5QRk6











