ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಜಿಎಸ್ ಟಿ ಕಡಿತ : ರಾಜ್ಯಕ್ಕೆ 18 ಕೋಟಿ ರೂ. ನಷ್ಟ

ಜಿಎಸ್ ಟಿ : Tulu Times | ಭಾರತದಲ್ಲಿ ಜಿಎಸ್‌ಟಿ ಪದ್ಧತಿ ಜಾರಿಯಾದ ಬಳಿಕ ತೆರಿಗೆ ಸಂಗ್ರಹ ಪಾರದರ್ಶಕವಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಕೆಲವೊಂದು ರಿಟರ್ನ್ ಸರಿಯಿಲ್ಲದೆ ಅಸಮಾನತೆ ತೋರಿರುವುದು, ಮತ್ತು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ದುರುಪಯೋಗದಿಂದ ಸರ್ಕಾರಕ್ಕೆ ದೊಡ್ಡ ಮಟ್ಟದ ಆದಾಯ ನಷ್ಟ ಉಂಟಾಗುತ್ತಿರುವುದು ವಿಚಾರಣೆಗೆ ಕಾರಣವಾಗಿದೆ. ಇತ್ತೀಚಿನ ತನಿಖೆಗಳು ಮತ್ತು ವರದಿಗಳ ಪ್ರಕಾರ ಸರ್ಕಾರಕ್ಕೆ ಸುಮಾರು ಕೋಟಿ ರೂ.‌ ಆದಾಯ ನಷ್ಟ ಉಂಟಾಗಿದೆ. ಬಹಳಷ್ಟು ವ್ಯಾಪಾರಿಗಳು ನಕಲಿ ಬಿಲ್‌ಗಳನ್ನು ಸೃಷ್ಟಿಸಿ, ಅಸ್ತಿತ್ವವಿಲ್ಲದ ವಸ್ತುಗಳ ಖರೀದಿ ತೋರಿಸಿ ಮೋಸ ಮಾಡ್ತಾ ಇದ್ದಾರೆ.

ದಾಖಲೆಗಳಿಲ್ಲದೇ ಅದೆಷ್ಟೋ ಹಣ ಸಂಗ್ರಹವಾಗ್ತಾ ಇದೆ. ಇದರ ಜೊತೆಜೊತೆಗೇ ಕೇಂದ್ರ ಜಿಎಸ್ ಟಿ ದರ ಕಡಿತದಿಂದ ಜನಸಾಮಾನ್ಯರಿಗೆ ರಿಲೀಫ್ ನೀಡಿತ್ತು. ಆದರೆ ಇದು ರಾಜ್ಯಗಳಿಗೆ ಬಿಗ್ ಶಾಕ್ ಉಂಟು ಮಾಡಿದ್ದು, ಕರ್ನಾಟಕ ರಾಜ್ಯದ ಜಿಎಸ್​ಟಿ ಸಂಗ್ರಹಣೆಯೂ ಕುಸಿದಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದು, ಸೆಸ್‌ನಿಂದ ಸಂಗ್ರಹವಾಗುವ ಆದಾಯದ ಅರ್ಧದಷ್ಟು ಭಾಗವನ್ನು ರಾಜ್ಯದೊಂದಿಗೆ ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ.ಹೌದು…! ಜಿಎಸ್​​ಟಿ ದರ ಸರಳೀಕರಣದಿಂದ ರಾಜ್ಯಗಳ ಆದಾಯಕ್ಕೆ ನಷ್ಟ ಉಂಟಾಗಿದೆ. ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ನಾಗರಿಕರ ಹೊರೆ ಕಡಿಮೆ ಮಾಡಲು ರಾಜ್ಯಗಳು ಬೆಂಬಲ ಸೂಚಿಸಿವೆ. ಆದರೆ, ದೇಶದ ಜಿಎಸ್ ಟಿ ಸಂಗ್ರಹದಲ್ಲಿ ಭಾರಿ ಕುಸಿತ ಕಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗೂ ರಾಜ್ಯಕ್ಕೆ ಈಗಾಗಲೇ 18 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿದರು. GST cut: Rs 18 crore loss to the state – ತುಳು ಟೈಮ್ಸ್

ಇದನ್ನೂ ಓದಿ :150ಕ್ಕೂ ಅಧಿಕ ಪದಕ ಪಡೆದ ಬೋಳಾರ ಕುಟ್ಟಿ ಕೋಣ ಇನ್ನಿಲ್ಲ

==========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/k8odT-8iq_c?si=GeXiexVDN_Uwds6p

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page