ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನಿದ್ರಿಸುವಾಗ ಬಾಯಿಯಿಂದ ಜೊಲ್ಲು ಸುರಿಸುತ್ತೀರಿ ಅಂದ್ರೆ ಏನರ್ಥ?

ಜೀವನಶೈಲಿ: Tulu Times | ಸಾಮಾನ್ಯವಾಗಿ ಬಹುತೇಕ ಮಂದಿ ನಿದ್ರೆ ಮಾಡುವಾಗ ಬಾಯಿಯಿಂದ ಲಾಲಾರಸ ಹೊರಬರುತ್ತದೆ. ಇದಕ್ಕೆ ಸಾಮಾನ್ಯ ಭಾಷೆಯಲ್ಲಿ ಜೊಲ್ಲು ಅಂತ ಕರೆಯುತ್ತೇವೆ. ಹಾಗಾದರೆ ಬಾಯಿಯಿಂದ ಜೊಲ್ಲು ಬರಲು ಕಾರಣವೇನು? ಯಾಕೆ ಬಾಯಿಯಿಂದ ಜೊಲ್ಲು ಹೊರಬರುತ್ತದೆ ನೋಡೋಣ…

ಬಾಯಿಯಿಂದ ಜೊಲ್ಲು ಉತ್ಪತ್ತಿಯಾಗುತ್ತದೆ ಅಂದ್ರೆ ಹೆದರಬೇಡಿ!

ನಾವೆಲ್ಲ ನಿದ್ರೆ ಮಾಡುವಾಗ ಯಾವುದೇ ಚಿಂತೆ ಇಲ್ಲದೆ ಆರಾಮದಲ್ಲಿ ನಿದ್ರಿಸುತ್ತೇವೆ. ಕೆಲವೊಮ್ಮೆ ನಿದ್ದೆ ಬರದೆ ಪರದಾಟ ನಡೆಸುತ್ತೇವೆ. ಇನ್ನು ನಿದ್ರೆ ಬಂದ ನಂತರ ನಾವು ವಿಪರೀತ ನಿದ್ದೆಯಲ್ಲಿದ್ದಾಗ ನಮ್ಮ ಬಾಯಿಯಿಂದ ಲಾಲಾರಸ ಹೊರಹೊಮ್ಮುತ್ತದೆ. ಇದು ಸಾಕಷ್ಟು ಜನ ಅನುಭವಿಸುವ ಸಮಸ್ಯೆಯಾಗಿದೆ. ತನ್ನ ಬಾಯಿಯಿಂದ ಜೊಲ್ಲು ಹೊರಬರುತ್ತದೆ ಕಾರಣ ಏನು ಅಂತ ಯಾರು ಕೂಡ ಚಿಂತೆ ಮಾಡುವುದಿಲ್ಲ. ಈ ರೀತಿಯಾದಂತಹ ಸಣ್ಣಪುಟ್ಟ ವಿಚಾರಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ.

ನಿದ್ರಾಹೀನತೆ ಸಮಸ್ಯೆ ಕಾರಣ: ಚೆನ್ನಾಗಿ ನೀರು ಕುಡಿದು ನಿದ್ರಿಸಿ!

ನಾವು ಪ್ರತಿದಿನ ಹೆಚ್ಚಾಗಿ ಮೊಬೈಲ್ ನೋಡುತ್ತಾ ದಿನ ಕಳೆಯುತ್ತೇವೆ. ಮೊಬೈಲ್ ನೋಡಿ ಮಧ್ಯರಾತ್ರಿಯವರೆಗೂ ಕೂಡ ಮೊಬೈಲ್ ನಲ್ಲಿ ಮೆಸೇಜ್ ಅಥವಾ ವಿಡಿಯೋಗಳನ್ನು ನೋಡುತ್ತಾ ಇರುತ್ತೇವೆ. ಹೀಗಾಗಿ, ಹೆಚ್ಚಿನವರಲ್ಲಿ ನಿದ್ರಾಹೀನತೆ ಸಮಸ್ಯೆ ಕಂಡುಬರುತ್ತದೆ. ಇಂಥವರಿಗೆ ಹೆಚ್ಚಾಗಿ ಬಾಯಿಯಲ್ಲಿ ಜೊಲ್ಲು ಸುರಿಯುವಂತಹ ಸಂದರ್ಭ ಹೆಚ್ಚಾಗುತ್ತದೆ. ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿರುವವರ ಬಾಯಿಯಿಂದ ಸಣ್ಣದಾಗಿ ಲಾಲಾ ರಸ ಬರುತ್ತದೆ ಎನ್ನಲಾಗುತ್ತದೆ. ನಿದ್ರೆ ಇಲ್ಲದೆ ಕೆಲಸ ಮಾಡುವ ಜನರು ಮರುದಿನ ಚೆನ್ನಾಗಿ ನಿದ್ದೆ ಬಂದಾಗ ಅವರ ಬಾಯಿಯಿಂದ ತನ್ನಿಂದ ತಾನೇ ಲಾಲಾರಸ ಹೊರಬರುತ್ತದೆ ಇನ್ನು ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಬಾಯಿಂದ ಉತ್ಪತ್ತಿಯಾಗುತ್ತದೆ. ಅದಕ್ಕೆ ಮಲಗುವ ಮುನ್ನ ಒಂದು ಲೋಟ ನೀರು ನೀರನ್ನು ಕುಡಿದು ನಿದ್ರೆ ಮಾಡಿದರೆ ಒಳ್ಳೆಯದು. ಇಲ್ಲದಿದ್ದರೆ ದೇಹ ಸಂಪೂರ್ಣವಾಗಿ ನೀರಿಲ್ಲದೆ ರಾತ್ರಿಯ ಹೊತ್ತು ಬಾಯಿಂದ ಲಾಲಾರಸ ಉತ್ಪತ್ತಿಯಾಗಲು ಕಾರಣವಾಗುತ್ತದೆ.

ಸೈನಸ್‌ ಸಮಸ್ಯೆಯಿರುವ ಮಂದಿಗೆ ಅಧಿಕ!

ಕೂಲಿ ಕೆಲಸ ಮಾಡುತ್ತಾ ದಿನ ಕಳೆಯುವವರಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ. ಯಾಕೆಂದರೆ ದಿನವಿಡೀ ಅವರು ದೇಹವನ್ನು ದಂಡಿಸಿ ದುಡಿಯುತ್ತಾರೆ. ಇದರಿಂದ ರಾತ್ರಿಯ ಸಮಯದಲ್ಲಿ ಬೇಗನೆ ಕಣ್ಣಿಗೆ ನಿದ್ರೆ ಬೀಳುತ್ತದೆ. ಹೀಗಾಗಿ ಮಧ್ಯರಾತ್ರಿಯಲ್ಲಿ ಅಂತವರ ಬಾಯಿಯಿಂದ ಲಾಲಾರಸ ಉತ್ಪತ್ತಿಯಾಗುತ್ತದೆ. ವಿಪರೀತ ದಣಿದಂತಹ ದೇಹದಿಂದ ಲಾಲಾರಸ ಉತ್ಪತ್ತಿಯಾಗಲು ಶುರುವಾಗುತ್ತದೆ. ಇನ್ನು ಸೈನಸ್ ಸಮಸ್ಯೆ ಇರುವವರಿಗೂ ಕೂಡ ಬಾಯಿಯಲ್ಲಿ ಜೊಲ್ಲು ಸುರಿಯುವಂತಹ ಸಮಸ್ಯೆ ಇರುತ್ತದೆ. ಮೂಗು ಕಟ್ಟಿಕೊಂಡು ಉಸಿರಾಡಲು ಆಗದೆ ಚಡಪಡಿಸುವ ಇವರು ರಾತ್ರಿ ಸಮಯದಲ್ಲಿ ಇವರ ಬಾಯಿಯಿಂದ ಜೊಲ್ಲು ಸುರಿಯುತ್ತದೆ. ಬಾಯಿಯಿಂದ ವಿಪರೀತ ಲಾಲಾರಸ ಉತ್ಪತ್ತಿಯಾಗುತ್ತಿದೆ ಎಂದಾಗ ತಕ್ಷಣವೇ ನೀವು ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.

What does it mean when you drool while sleeping?- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page