ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಆದಾಯ ತೆರಿಗೆ ಪ್ರಕರಣದಲ್ಲಿ ನಟ ಯಶ್ ಗೆ ಬಿಗ್‌ ರಿಲೀಫ್..! ನೋಟಿಸ್ ರದ್ದು

ಕರ್ನಾಟಕ: Tulu Times | ರಾಕಿಂಗ್‌ ಸ್ಟಾರ್‌ ಯಶ್‌  ಗೆ ಆದಾಯ ತೆರಿಗೆ ಪ್ರಕರಣದಲ್ಲಿ 2019ರಲ್ಲಿ  ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ಇದೀಗ ಐಟಿ ನೋಟಿಸ್ ರದ್ದುಗೊಳಿಸಲು ಹೈಕೋರ್ಟ್‌ ಆದೇಶ ನೀಡಿದೆ.

ನಟ ಯಶ್ ಅವರ ಆದಾಯ ತೆರಿಗೆ ಸಂಬಂಧ 2013-14 ರಿಂದ 2018 -19ರ ಅವಧಿಗೆ ನೀಡಿದ್ದ ನೋಟಿಸ್ ರದ್ದು ಮಾಡಲಾಗಿದೆ.
ಆದಾಯ ತೆರಿಗೆ ಪ್ರಕರಣದಲ್ಲಿ ನಟ ಯಶ್ ಅವರಿಗೆ ಬಿಗ್‌  ರಿಲೀಫ್ ಸಿಕ್ಕಿದೆ. ಐಟಿ ಇಲಾಖೆ ನೀಡಿದ್ದ ನೋಟಿಸ್ ರದ್ದುಗೊಳಿಸಿ ಹೈಕೋರ್ಟ್ ಆದೇಶವನ್ನು ಹೊರಡಿಸಿದೆ. ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಹೈಕೋರ್ಟ್ ನ್ಯಾಯಪೀಠದಿಂದ ಆದೇಶ ನೀಡಲಾಗಿದೆ. ಇನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಯ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿದ್ದ ನಟ ಯಶ್, ಆದಾಯ ತೆರಿಗೆ ಇಲಾಖೆಯವರು ಕರೆದಾಗ ಇಲ್ಲ ಎನ್ನಲು ಆಗುವುದಿಲ್ಲ ಎಂದು ಹೇಳಿದ್ದರು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು  2019ರಲ್ಲಿ ನಟ ಯಶ್ ಅವರ ಮನೆ ಮೇಲೆ ದಾಳಿ ನಡೆಸಿದ್ದರು.

ತಮ್ಮ ನಿವಾಸ ಶೋಧಿಸಿದ್ದರೂ 153 ಸಿ ಅಡಿ ನೋಟಿಸ್ ಕಾನೂನು ಬಾಹಿರ ಎಂದು ಯಶ್ ಪರ ವಕೀಲರ ವಾದ ಮಂಡಿಸಿದ್ದರು. ಹೊಂಬಾಳೆಗೆ ಸಂಬಂಧಪಟ್ಟಂತೆ ಮಾತ್ರ ಯಶ್ ನಿವಾಸದಲ್ಲಿ ಶೋಧಕಾರ್ಯ ನಡೆದಿತ್ತು. ಹೀಗಿದ್ದೂ ಸೆ.153 ಸಿ ಅಡಿ ಶೋಧನೆಗೊಳಗಾಗದ ವ್ಯಕ್ತಿಯೆಂದು ನೋಟಿಸ್ ನೀಡಿರೋದು ಸರಿಯಲ್ಲ ಎಂದು ಯಶ್ ಪರ ವಾರ ಮಂಡನೆಯಾಗಿತ್ತು. ವಾದಗಳನ್ನು ಆಲಿಸಿದ ಹೈಕೋರ್ಟ್ ಪೀಠ ಐಟಿ ಇಲಾಖೆ ನೀಡಿದ್ದ ನೋಟಿಸ್  ರದ್ದು ಮಾಡಿದೆ. ಯಶ್ ಸದ್ಯ‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ,  ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ಇತ್ತೀಚೆಗೆ ಪೂರ್ಣಗೊಂಡಿದ್ದು, ಮಾರ್ಚ್ 19ರಂದು ಸಿನಿಮಾ ರಿಲೀಸ್ ಆಗಲಿದೆ.

Relief for actor Yash in income tax case..! Notice cancelled- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page