ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಮೂಡಬಿದಿರೆ

ಕಟೀಲು ದೇವಸ್ಥಾನದಿಂದ ಬರುವಾಗ ಕಾರು ಅಪಘಾತ

ಮೂಡಬಿದಿರೆ: Tulu Times | ಕಟೀಲು ದೇವರ ದರ್ಶನ ಪಡೆದುಕೊಂಡು ಹಿಂತಿರುಗಿ ಬರುವಾಗ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದಕ್ಕೆ ಡಿಕ್ಕಿಯಾಗಿರುವ ಘಟನೆ ಪುತ್ತಿಗೆ ಗ್ರಾಮದ ಸಂಪಿಗೆಯಲ್ಲಿ ನಡೆದಿದೆ.

ರಸ್ತೆ ಬದಿಯಲ್ಲಿರುವ ಚಂದ್ರ ನಾಯ್ಕ ಅವರ ಮನೆಗೆ ಡಿಕ್ಕಿ ಹೊಡೆದಿದ್ದು,  ಕಟೀಲು ದೇವಸ್ಥಾನದಿಂದ  ಬರುವಾಗ ಅಪಘಾತ ಸಂಭವಿಸಿದೆ.  ಕಟೀಲು ದುರ್ಗಾಪರಮೇಶ್ವರಿ  ದೇವಸ್ಥಾನಕ್ಕೆ ಭೇಟಿ ನೀಡಿ ಹಿಂದಿರುಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಮನೆಯೊಂದಕ್ಕೆ  ಗುದ್ದಿ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಮಹಿಳೆಗೆ ಗಾಯಗಳಾಗಿವೆ. ಅವರ ಮುಖ ಮತ್ತು ಹಲ್ಲಿನ ಭಾಗಕ್ಕೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ. ಇನ್ನು ಅಪಘಾತಕ್ಕೆ ಮನೆಯ ಗೋಡೆ ಬಿರುಕು ಬಿಟ್ಟಿದ್ದು,  ಕಾರು ಜಖಂಗೊಂಡಿದೆ.

ಲೋಕಾಯುಕ್ತ ಇನ್ಸ್ ಪೆಕ್ಟರ್ ಭೀಕರ ರಸ್ತೆ ಅಪಘಾತದಲ್ಲಿ ಸಜೀವ ದಹನ!

ಪ್ರತ್ಯೇಕ ಪ್ರಕರಣದಲ್ಲಿ, ಮಹಾತೇಂಶ್ ಬೀಳಗಿ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳುವ ಮುನ್ನವೇ ಇನ್ನೊಂದು ಆಘಾತಕಾರಿ ಅಪಘಾತವು ಸಂಭವಿಸಿದೆ. ದಕ್ಷ ಅಧಿಕಾರಿಗಳು ಈ ರೀತಿ ಅಪಘಾತದಲ್ಲಿ ಸಾವನ್ನಪ್ಪುವುದು ನಿಜಕ್ಕೂ ವಿಶಾದದ ವಿಚಾರ. ನಿನ್ನೆ ರಜೆ ಪಡೆದು ಊರಿಗೆ ತೆರಳುತ್ತಿದ್ದ ಲೋಕಾಯುಕ್ತ ಇನ್ಸ್ ಪೆಕ್ಟರ್ ಭೀಕರ ರಸ್ತೆ ಅಪಘಾತದಲ್ಲಿ ಸಜೀವ ದಹನವಾಗಿದ್ದಾರೆ. ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಬಳಿಕ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ.

ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಹಾವೇರಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಆಗಿದ್ದ ಪಂಚಾಕ್ಷರಿ ಸಾಲಿಮಠ ಅವರು ಕಾರಿನೊಳಗೆ ಸುಟ್ಟು ಕರಕಲಾಗಿದ್ದಾರೆ. ಅಣ್ಣಿಗೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ: ಭಾರತದ ಮೊದಲ ಮೆಟ್ರೋ ರೈಲು ವ್ಯವಸ್ಥೆಯಡಿ ಉದ್ಯೋಗಸ್ಥರಿಗೆ ಅರ್ಜಿ ಆಹ್ವಾನ

ಡಿವೈಡರ್‌ಗೆ ಡಿಕ್ಕಿಯಾಗಿ ಬಳಿಕ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆಯೇ ಧಗಧಗ ಹೊತ್ತಿ ಉರಿದಿದೆ. ಇದರಿಂದ ಇನ್ಸ್ ಪೆಕ್ಟರ್ ಸಾಲಿಮಠ ಅವರಿಗೆ ಲಾಕ್ ತೆಗೆದು ಹೊರಬರಲಾಗದೇ ಕಾರಿನೊಳಗೆ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. ಬೆಂಕಿ ಹೊತ್ತಿಕೊಂಡು ನೋಡುತ್ತಿದ್ದಂತೆಯೇ ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆಯೇ ಸ್ಥಳಕ್ಕೆ ಅಣ್ಣಿಗೇರಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಆದ್ರೆ, ಅಷ್ಟರೊಳಗೆ ಇನ್ಸ್‌ಪೆಕ್ಟರ್ ಕಾರಿನೊಳಗೆ ಸುಟ್ಟು ಕರಕಲಾಗಿದ್ದಾರೆ.

ಗದಗದಲ್ಲಿರುವ ತಮ್ಮ ಕುಟುಂಬವನ್ನು ಭೇಟಿ ಮಾಡುವ ಸಲುವಾಗಿ ಪ್ರಯಾಣ ನಡೆಸಿದ ಸಂದರ್ಭದಲ್ಲಿ ವಿಧಿ ಈ ರೀತಿಯಾಗಿ ಬಲಿ ತೆಗೆದುಕೊಂಡಿರುವುದು ನಿಜಕ್ಕೂ ಘೋರ ದುರಂತಕ್ಕೆ ಸಾಕ್ಷಿಯಾಗಿದೆ. ಇವರು ತಮ್ಮ ಸೃಜನಶೀಲ ಕೆಲಸದಿಂದ ಜನಮನ್ನಣೆಯನ್ನು ಗಳಿಸಿದ್ದರು.

Car accident while coming from Kateel temple- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 138

You cannot copy content of this page