ದೆಹಲಿ : Tulu Times | ಸೈಬರ್ ಕಾಟಕ್ಕೆ ಅದೆಷ್ಟೋ ಜನ ತಿಳಿದೋ ತಿಳಿಯದೆಯೋ ವಂಚನೆಗೆ ಒಳಗಾಗುತ್ತಿದ್ದಾರೆ. ಅದೆಷ್ಟೇ ಎಚ್ಚರಿಕೆ ನೀಡಿದ್ರೂ ಮೋಸ ಹೋಗೋದು ತಪ್ಪೋದಿಲ್ಲ. ಈ ರೀತಿ ವಂಚನೆಗೆ ಒಳಗಾಗುವ ವ್ಯಕ್ತಿಗಳು ಒಂದೆಡೆಯಾದ್ರೆ ಎಲ್ಲವನ್ನೂ ಜಾಗರೂಕತೆಯಿಂದ ಪರಿಶೀಲನೆ ಮಾಡೋ ಇನ್ನೊಂದು ವರ್ಗದ ಜನರೂ ಇದ್ದಾರೆ ಅನ್ನೋದಕ್ಕೆ ಸಾಕ್ಷಿ ದೆಹಲಿಯಲ್ಲಿ ನಡೆದಿದೆ. ಒಬ್ಬ ವ್ಯಕ್ತಿ ಎಐ ಬಳಸಿಕೊಂಡು ಆನ್ಲೈನ್ ನಲ್ಲಿ ವಂಚಕನಿಗೆ ತಕ್ಕ ಪಾಠವನ್ನು ಕಲಿಸಿದ್ದಾನೆ. ಇದೀಗ ಈ ಸುದ್ದಿ ವೈರಲ್ ಆಗಿದ್ದು ಅದೇ ವ್ಯಕ್ತಿ ವಂಚಕನಿಂದ ಹಣ ಕಳೆದುಕೊಳ್ಳುವ ಬದಲು ಎಐ ಸಹಾಯದಿಂದ ಚಾಟ್ ಜಿಪಿಟಿ ನೆರವಿನಿಂದಲೇ ಆತನ ನಿಖರವಾದ ಮುಖ ಪರಿಚಯ ಮತ್ತು ಸ್ಥಳವನ್ನು ಪತ್ತೆ ಮಾಡಿ ಕೊನೆಗೆ ಆ ವಂಚಕನನ್ನು ಸರಿಯಾಗಿ ಸಿಕ್ಕಿ ಹಾಕಿಕೊಳ್ಳುವಂತೆ ಮಾಡಿದ್ದಾನೆ.
ಇಲ್ಲಿ ವಂಚಕನು ಸೈನಿಕ ವೇಷದಲ್ಲಿ ಐಎಎಸ್ ಅಧಿಕಾರಿ ಎಂದು ನಟಿಸಿ, ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವ ನೆಪದಲ್ಲಿ ದೆಹಲಿಯಲ್ಲಿರುವ ಒಬ್ಬ ವ್ಯಕ್ತಿಗೆ ಕ್ಯೂಆರ್ ಕೋಡ್ ಕಳುಹಿಸಿ ಹಣ ನೀಡುವಂತೆ ಬೇಡಿಕೆಯನ್ನು ಇಟ್ಟಿದ್ದ. ಆದರೆ ಈ ವಂಚನೆಯನ್ನು ತಿಳಿದುಕೊಂಡ ಒಬ್ಬ ಬುದ್ಧಿವಂತ ವ್ಯಕ್ತಿ ಅದರ ಬಗ್ಗೆ ಆಲೋಚನೆ ಮಾಡಿದ ಮತ್ತು ಆತ ಸುಮ್ಮನೆ ಕೂರಲಿಲ್ಲ. ಚಾಟ್ ಜಿಪಿಟಿ ಮುಖಾಂತರ ವೆಬ್ ನಲ್ಲಿ ವಂಚಕನ ಸ್ಥಳ ಪತ್ತೆ ಹಚ್ಚುವ ಟ್ರ್ಯಾಕರ್ ಕೋಡ್ ನ್ನು ಸಿದ್ಧಪಡಿಸಿ, ಆ ಪುಟವು ಬಳಕೆದಾರನ ಸ್ಥಳ ಕಂಡುಹಿಡಿಯುವ ಜಿಪಿಎಸ್ ಕ್ಯಾಪ್ಚರ್ ಮಾಡುವ ಹಾಗೆ ಬಳಕೆದಾರರ ಸಾಧನದ ಫ್ರಂಟ್ ಕ್ಯಾಮರಾದಿಂದ ಫೋಟೋ ತೆಗೆಯುವುದಾಗಿಯೂ ಈ ಲಿಂಕ್ ನಲ್ಲಿ ಅಪ್ಲೋಡ್ ಮಾಡಿದರೆ ಹಣ ಪಾವತಿ ಬೇಗ ಆಗುತ್ತದೆ ಎಂದು ಸುಳ್ಳು ಹೇಳಿ ವಂಚಕನಿಗೆ ಆ ಲಿಂಕನ್ನು ಕಳಿಸುತ್ತಾನೆ.
ಹಣದ ದುರಾಸೆ ಮತ್ತು ಆತುರದಲ್ಲಿದ್ದ ವಂಚಕ ಏನನ್ನು ಯೋಚಿಸದೆ ಆ ಲಿಂಕನ್ನು ಕ್ಲಿಕ್ ಮಾಡಿದ್ದಾನೆ. ಲಿಂಕ್ ಕ್ಲಿಕ್ ಮಾಡಿದ ತಕ್ಷಣ ವಂಚಕನ ಎಲ್ಲಾ ವಿಳಾಸದ ಜೊತೆ ಫೋಟೋ ಕೂಡ ಸ್ಪಷ್ಟವಾಗಿ ಸೆರೆ ಹಿಡಿಯಲಾಯಿತು ಹಾಗೂ ಈತನ ಗುಟ್ಟನ್ನು ರಟ್ಟು ಮಾಡಿದ ವ್ಯಕ್ತಿಯ ಜೊತೆ ವಂಚಕ ಕ್ಷಮೆಯನ್ನು ಕೇಳಿದ್ದು ಆತ ಕಣ್ಣೀರಿಟ್ಟಿರುವುದಾಗಿಯೂ ವರದಿಯಾಗಿದೆ. ಈ ತರಹದ ಅದೆಷ್ಟೋ ವಂಚಕರು ಇನ್ನೂ ಕೂಡ ನಮ್ಮ ದೇಶದಲ್ಲಿ ಇರುವುದು ಸತ್ಯ. ಹೀಗಾಗಿ, ಸಾಮಾನ್ಯ ಜನರು ಕೆಲವು ಊಹಾಪೋಹದ ಮಾತುಗಳಿಗೆ ಅಥವಾ ಸಂದೇಶಗಳಿಗೆ ಪ್ರತಿಕ್ರಿಯೆಯನ್ನು ಮಾಡದೆ ಎಚ್ಚರದಿಂದ ಇದ್ದರೆ ನೀವು ವಂಚನೆಗೆ ಒಳಗಾಗುವುದನ್ನು ತಪ್ಪಿಸಬಹುದು. A photo of a fraudster was captured with the help of AI – ತುಳು ಟೈಮ್ಸ್
ಇದನ್ನೂ ಓದಿ :ಪದೇ ಪದೇ ಎಲ್ಲರೂ ನಿಮಗೆ ಅವಮಾನ ಮಾಡುತ್ತಿದ್ದಾರಾ..? ಹಾಗಾದ್ರೆ ನೀವೇ ಜಾಣರು!
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/B6prUvD0mUk?si=z48LSM-x4RglLr8V











