ಬ್ರೇಕಿಂಗ್ ನ್ಯೂಸ್
ಕರ್ನಾಟಕ

40 ಲಕ್ಷ ರೂ. ಬಗ್ಗೆ ಆರೋಪಿ ದರ್ಶನ್ ನೀಡಿದ ಹೇಳಿಕೆ ನಿಜಾನಾ ?

ಬೆಂಗಳೂರು : Tulu Times | ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಆರೋಪಿ ನಟ ದರ್ಶನ್ ನ ಮನೆಯಲ್ಲಿ ಲಕ್ಷಗಟ್ಟಲೆ ಹಣವನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವ ಸುದ್ದಿ ಎಲ್ಲರಿಗೂ ತಿಳಿದ ವಿಚಾರ. ಇಷ್ಟೊಂದು ಹಣ ಎಲ್ಲಿಂದ ಬಂತು ಅನ್ನೋ ವಿಚಾರವಾಗಿ ವಿಚಾರಣೆ ನಡೆಯುತ್ತಿರುವಾಗಲೇ ದರ್ಶನ್ ಹೇಳಿಕೆಯನ್ನು ನೀಡಿದ ಪ್ರಕಾರ ದಾಖಲಿಸಿಕೊಳ್ಳಲಾಗಿದೆ.

ಐಟಿ ರಿಟರ್ನ್ಸ್ ವೇಳೆ ಈ ಹಣದ ಬಗ್ಗೆ ಮಾಹಿತಿ ಸಲ್ಲಿಕೆ ;

ಸಿಕ್ಕಿದ್ದ 82 ಲಕ್ಷ ರೂಪಾಯಿ ಹಣಕ್ಕೆ ಸಂಬಂಧಿಸಿದಂತೆ ಪ್ರಕರಣವೂ ದಾಖಲಾಗಿತ್ತು. ಈ ಹಣವನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣ ಮುಚ್ಚಿ ಹಾಕಲು ದರ್ಶನ್ ಬಳಸಿದ್ದರು ಎನ್ನಲಾಗಿತ್ತು. ಹಣದ ಮೂಲದ ಬಗ್ಗೆ ತನಿಖಾಧಿಕಾರಿಗಳಿಗೆ ಅನುಮಾನಗಳಿದ್ದವು, ಇದೀಗ ನಟ ದರ್ಶನ್, ಹಣದ ಮೂಲದ ಬಗ್ಗೆ ಮಾಹಿತಿ ನೀಡಿದ್ದಾರೆ. ಕೃಷಿ ಮತ್ತು ಪಶುಸಂಗೋಪನೆಯಿಂದ ತಮಗೆ ಆ ಹಣ ಬಂದಿದೆಯೆಂದು ನಟ ದರ್ಶನ್ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಎದುರು ಹೇಳಿಕೆ ನೀಡಿದ್ದಾರೆ. ಆ ಹಣಕ್ಕೆ ತಮ್ಮ ಬಳಿ ದಾಖಲೆ ಇಲ್ಲವೆಂದು ಸಹ ಹೇಳಿದ್ದಾರೆ. ಅಲ್ಲದೆ, ಐಟಿ ರಿಟರ್ನ್ಸ್ ವೇಳೆ ಈ ಹಣದ ಬಗ್ಗೆ ಮಾಹಿತಿ ಸಲ್ಲಿಕೆ ಮಾಡುವುದಾಗಿ ತಿಳಿಸಿದ್ದಾರೆ.

ಒಟ್ಟು 40 ಲಕ್ಷ ರೂ. ಹಣಕ್ಕೆ ಲೆಕ್ಕ ಕೊಟ್ಟ ಆರೋಪಿ ದರ್ಶನ್ 25 ಲಕ್ಷ ರೂ. ಕೃಷಿಯಿಂದ ಬಂದದ್ದು,‌15 ಲಕ್ಷ ರೂ. ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಸಿಕ್ಕಿದ್ದು, ಈ ಹಣದ ಬಗ್ಗೆ ದಾಖಲೆಗಳು ಇಲ್ಲ ಮತ್ತೆ ಉಳಿದ ಹಣದ ಬಗ್ಗೆ ಗೊತ್ತಿಲ್ಲ ಎಂಬುದಾಗಿ ಹೇಳಿಕೆ ನೀಡಲಾಗಿದೆ.

ಹೀಗಿರುವಾಗಲೇ, ‘ಡೆವಿಲ್’ ಟ್ರೈಲರ್ ರಿಲೀಸ್ ಆಗಿದ್ದು, ಇದರಿಂದ ಅಭಿಮಾನಿಗಳು‌ ನಿರಾಳವಾಗಿದ್ದು, ಇಂದಲ್ಲ ನಾಳೆ ದರ್ಶನ್ ಬಿಡುಗಡೆಯಾಗಲಿದ್ದಾರೆ ಎಂದು ಮನಸ್ಸಿಗೆ ಸಮಾಧಾನ ತಂದುಕೊಳ್ಳುತ್ತಿದ್ದಾರೆ. ಇದರ ಜೊತೆಗೇ, ದರ್ಶನ್ ಪತ್ನಿ ತಮ್ಮ ಇನ್ಸ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ದಿ ಡೆವಿಲ್ ಟ್ರೈಲರ್ ನಮ್ಮ ಎಲ್ಲಾ ಸೆಲೆಬ್ರಿಟಿಗಳಿಗೆ ಸಮರ್ಪಿತವಾಗಿ ಬಂದಿರುವ ಚಿತ್ರದ ಟ್ರೈಲರ್. ಇದೀಗ ನಿಮ್ಮ ಮುಂದೆ… ನೋಡಿ ಆನಂದಿಸಿ ಮತ್ತು ನಿಮ್ಮ ಪ್ರೀತಿಯ ಬೆಂಬಲವನ್ನು ನೀಡಿರಿ ಎಂದು ವಿಜಯಲಕ್ಷ್ಮಿ ಪೋಸ್ಟ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. Is the statement given by accused Darshan about Rs. 40 lakh true? – ತುಳು ಟೈಮ್ಸ್

ಇದನ್ನೂ ಓದಿ :ನಿಮ್ಮ ದುಃಖಗಳನ್ನು ಕೇಳುವ ಕಿವಿಗಳಿಲ್ಲ ಅಂತ ಬೇಸರ ಕಾಡುತ್ತಿದೆಯಾ..?

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/B6prUvD0mUk?si=j3qFQIqwzfPGEAta

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page