ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಪದೇ ಪದೇ ಎಲ್ಲರೂ ನಿಮಗೆ ಅವಮಾನ ಮಾಡುತ್ತಿದ್ದಾರಾ‌‌‌‌..? ಹಾಗಾದ್ರೆ ನೀವೇ ಜಾಣರು!

ಜೀವನಶೈಲಿ: Tulu Times | ಜೀವನ ಅಂದ್ರೆ ನಿಂತ ನೀರಲ್ಲ. ನಾವು ನಮ್ಮ ಜೀವನದಲ್ಲಿ ಯಶಸ್ಸಿನ ಮಟ್ಟವನ್ನು ತಲುಪಬೇಕಾದರೆ ಅದೆಷ್ಟೋ ಅವಮಾನಗಳನ್ನು ಗೆದ್ದು ಮುನ್ನಡೆಯಬೇಕಾಗುತ್ತದೆ. ಇಲ್ಲವಾದರೆ ಅದು ಜೀವನವೇ ಅಲ್ಲ! ಹಾಗಾದ್ರೆ, ಜೀವನದಲ್ಲಿ ಎಲ್ಲಾ ಅವಮಾನಗಳನ್ನು ಮೆಟ್ಟಿ ನಿಲ್ಲುವುದು ಹೇಗೆ ನೋಡೋಣ ಈ ಪುಟ್ಟ ಸ್ಟೋರಿಯಲ್ಲಿ…

ಅವಮಾನ ಆಯ್ತು ಅಂತ ಸೈಲೆಂಟ್‌ ಆಗದಿರಿ!

ಅವಮಾನ ಇದ್ದಲ್ಲಿ ಸನ್ಮಾನ ಇದ್ದೇ ಇರುತ್ತೆ.. ಅದೆಷ್ಟೋ ಬಾರಿ ಜೀವನದಲ್ಲಿ ಅವಮಾನಕ್ಕೆ ನಾವು ಒಳಗಾಗುತ್ತೇವೆ. ಈ ಸಂದರ್ಭದಲ್ಲಿ ಯಾರು ಕೂಡ ನಮ್ಮ ಜೊತೆಗೆ ಇರುವುದಿಲ್ಲ. ಅವಮಾನಗಳನ್ನು ಎದುರಿಸಿದಾಗ ವ್ಯಕ್ತಿ ಸೈಲೆಂಟ್ ಆಗಿಬಿಡುತ್ತಾನೆ. ತಾನಾಯ್ತು ತನ್ನ ಜಗತ್ತು ಆಯ್ತು ಅಂತ ತನ್ನಲ್ಲಿ ಕೊರಗಿಕೊಳ್ಳುತ್ತಾ ಇರುತ್ತಾನೆ.

ಎಲ್ಲರಿಗೂ ಕಷ್ಟ ಇರುತ್ತದೆ ದುಡುಕದಿರಿ..!

ಜೀವನದಲ್ಲಿ ಅವಮಾನ ಆಯ್ತು ಅಂತ ಎಷ್ಟೋ ಜನ ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಾರೆ. ಎಲ್ಲವನ್ನು ಕೂಡ ಬಿಟ್ಟು ದೂರ ನಿಲ್ಲುತ್ತಾರೆ. ಅವಮಾನಗಳಿಂದ ಬೇಸತ್ತು ಹೋಗಿ ನನ್ನಿಂದ ಇನ್ನು ಏನೂ ಸಾಧ್ಯವೇ ಇಲ್ಲ ಅನ್ನುವ ಮಟ್ಟಿಗೆ ತಲುಪಿ ಬಿಡುತ್ತಾರೆ. ಇಂಥವರು ಜೀವನದಲ್ಲಿ ಪಾಸಿಟಿವ್ ಆಗಿ ಯೋಚನೆ ಮಾಡಬೇಕು. ಇಂದಲ್ಲ ನಾಳೆಯಾದರೂ ನಾನು ಯಶಸ್ಸಿನ ತುತ್ತ ತುದಿಯಲ್ಲಿ ಇರುತ್ತೇನೆ ಅಂತ ಭರವಸೆಯಿಂದ ಜೀವನ ನಡೆಸಬೇಕು. ಇಲ್ಲವಾದಲ್ಲಿ ಜನರು ನಿಮ್ಮನ್ನು ಮೆಟ್ಟಿ ಮುಂದಕ್ಕೆ ಹೋಗುತ್ತಾರೆ. ನೀವು ಅದೇ ಕಷ್ಟದ ಹಾದಿಯಲ್ಲಿ ಸಿಲುಕಿ ನೆಮ್ಮದಿಯನ್ನೇ ಕಳೆದುಕೊಂಡು ಬಿಡುತ್ತೀರಿ.

ಮಾನಸಿಕವಾಗಿ ಕುಗ್ಗಿ ಸೊರಗದಿರಿ..!

ಇನ್ನು ಅವಮಾನ ಆದರೆ ಒಂದು ಕ್ಷಣ ನಿಮ್ಮ ಮನಸ್ಸು ಹಾಗೂ ನಿಮ್ಮ ದೈಹಿಕ ಶಕ್ತಿ ಕುಂಠಿತವಾಗುತ್ತದೆ. ಅಯ್ಯೋ ಎಲ್ಲರೂ ಕೂಡ ನನಗೆ ಅವಮಾನ ಮಾಡಿದ್ರು.. ಎಲ್ಲರ ಎದುರು ನನಗೆ ಈ ರೀತಿಯಾಗಿ ಅವಮಾನ ಆಯಿತು ಅಂತ ಜನ ನೊಂದುಕೊಂಡಿರುವವರು ಬಹಳಷ್ಟು ಇದ್ದಾರೆ. ಇನ್ನು ಹೇಗಪ್ಪ ಸಮಾಜಕ್ಕೆ ನಾನು ಮುಖ ತೆರೆದಿಡುವುದು ಅಂತ ಎಷ್ಟೋ ಜನ ಮಾನಸಿಕವಾದ ನೆಮ್ಮದಿಯನ್ನು ಕಳೆದುಕೊಂಡಿರುತ್ತಾರೆ. ಇಂಥವರು ತಾವು ಯೋಚನೆ ಮಾಡುವಂತಹ ರೀತಿಯಲ್ಲಿ ಸಂಪೂರ್ಣವಾಗಿ ಬದಲಾಯಿಸಿಕೊಂಡರೆ ಒಳ್ಳೆಯದು.

ಸಾಧನ ಮಾಡಿದೋರಿಗೆನೇ  ಅವಮಾನಗಳ ಅನುಭವ ಆಗಿರೋದು..!

ಎಷ್ಟೋ ಜನ ದೊಡ್ಡ ದೊಡ್ಡ ಸಾಧಕರು ಅದೆಷ್ಟೋ ಅವಮಾನಗಳನ್ನು ಎದುರಿಸಿ ಜೀವನದಲ್ಲಿ ಮುಂದೆ ಬಂದಿದ್ದಾರೆ. ಇಂದು ಯಶಸ್ಸಿನ ಉತ್ತುಂಗಕ್ಕೆ ಏರಿ ಅವರು ಜನ ಮೆಚ್ಚುವ ಕೆಲಸಗಳನ್ನು ಮಾಡುತ್ತಿದ್ದಾರೆ. ಜನರು ಅವರಿಗೆ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಹೀಗಾಗಿ, ಚಿಕ್ಕಪುಟ್ಟ ಅವಮಾನಗಳನ್ನು ಮೆಟ್ಟಿ ನಿಲ್ಲುವಂತಹ ಧೈರ್ಯ ನಿಮಗೆ ಬರಬೇಕು ಇಲ್ಲವಾದಲ್ಲಿ ಸಣ್ಣಪುಟ್ಟ ಅವಮಾನಗಳಿಗೂ ನೀವು ಕುಗ್ಗಿ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತೀರಿ.

Is everyone insulting you repeatedly? Then you are smart!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page