ಜೀವನಶೈಲಿ: Tulu Times | ಪ್ರತಿಯೊಬ್ಬರ ಜೀವನದಲ್ಲೂ ಕೂಡ ಕಷ್ಟ, ನಷ್ಟ ಎರಡೂ ಇರುತ್ತದೆ. ಇವೆಲ್ಲವನ್ನೂ ಕೂಡ ಸರಿದೂಗಿಸಿಕೊಂಡು ನಡೆಯುವುದೇ ನಮ್ಮ ಜೀವನ! ಹಾಗಾದ್ರೆ, ನಿಮ್ಮ ಕಷ್ಟಗಳಿಗೆ ಯಾರು ಸ್ಪಂದಿಸುತ್ತಿಲ್ಲವಾ? ನಿಮ್ಮ ದುಃಖಗಳನ್ನು ಯಾರೂ ಕೂಡ ಆಲಿಸುತ್ತಿಲ್ಲ ಅಂತ ನಿಮಗೆ ಬೇಸರವಿದ್ಯಾ? ಹಾಗಾದ್ರೆ ಈ ಸ್ಟೋರಿ ನಿಮ್ಮ ಲೈಫ್ ಚೇಂಜ್ ಮಾಡಬಹುದು.
ಮನಸ್ಸಲ್ಲಿ ಹೇಳಲಾಗದ ನೋವುಗಳಿವೆಯಾ..? ಚಿಂತೆ ಬಿಡಿ!
ಸಾಕಷ್ಟು ಜನ ಪುರುಷರು ಹಾಗೂ ಮಹಿಳೆಯರು ಪ್ರತಿನಿತ್ಯ ಒಂದಲ್ಲಾ ಒಂದು ಕಾರಣಗಳಿಂದ ಬೇಸರಗೊಳ್ಳುತ್ತಾರೆ. ಜೀವನದ ಪಯಣದಲ್ಲಿ ಎಲ್ಲವೂ ಸರಿ ಇದೆ ಅಂತ ಅಂದಾಗ ಕೆಲವೊಮ್ಮೆ ಬಹುದೊಡ್ಡ ಆಘಾತ ಎದುರಾಗುತ್ತದೆ. ಇದರಿಂದ, ನಾನಾ ರೀತಿಯ ಕಷ್ಟಗಳನ್ನು ನೀವು ಅನುಭವಿಸಬಹುದು. ಹಾಗಾದ್ರೆ ನಿಮ್ಮ ದುಃಖಗಳನ್ನು ಮರೆಯುವುದು ಹೇಗೆ? ನಿಮ್ಮ ಬೇಸರಗಳನ್ನು ಒಬ್ಬರ ಜೊತೆಗೆ ಹಂಚಿಕೊಳ್ಳಬೇಕು ಅಂತ ಅನಿಸಿದರೆ ಇದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ನಾವು ಲೆಕ್ಕ ಹಾಕಬೇಕು. ದಿನನಿತ್ಯದ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಕೊಳ್ಳುವ ಇಂದಿನ ಜನತೆ ಸಮಾಜಕ್ಕೆ ಗಟ್ಟಿ ಮನುಷ್ಯ ಅಂತ ತಿಳಿಯುವಂತೆ ಇದ್ದರೂ ಕೂಡ ದುಃಖಗಳನ್ನು ಮನಸ್ಸಲ್ಲಿ ಅದುಮಿಟ್ಟುಕೊಂಡು ಬದುಕುವುದೇ ಹೆಚ್ಚು.
ಎಲ್ಲ ವಿಷಯ ಓಪನ್ ಆಗಿ ಹೇಳಿಕೊಂಡರೆ ನಿಮಗೆಯೇ ಪ್ರಾಬ್ಲಂ!!
ಕೆಲವು ಬಾರಿ ನಮ್ಮ ದುಃಖಗಳನ್ನು ಯಾರ ಬಳಿ ಹೇಳುವುದು ಅಂತ ಸಹಜವಾಗಿ ನಮಗೆ ಕಾಡುತ್ತದೆ. ಇನ್ನು ಕೆಲವೊಮ್ಮೆ ನಮ್ಮ ದುಃಖಗಳನ್ನು ನಾವು ಹಂಚಿಕೊಂಡಾಗ ನಮ್ಮ ವೀಕ್ನೆಸ್ ಇನ್ನೊಬ್ಬರಿಗೆ ಅಸ್ತ್ರವಾಗಬಹುದು. ಇದರಿಂದ ನೀವು ಜಾಗರೂಕರಾಗಿ ನಿಮ್ಮಲ್ಲಿರುವಂತಹ ವಿಷಯಗಳನ್ನು ಇನ್ನೊಬ್ಬರಲ್ಲಿ ಹೇಳಿಕೊಳ್ಳುವಾಗ ಜಾಗರೂಕರಾಗಿರಿ. ಇನ್ನೂ ಕೆಲವು ತಮ್ಮ ಮನಸ್ಸಿನಲ್ಲಿರುವ ನೋವುಗಳನ್ನು ಇನ್ನೊಬ್ಬರ ಜೊತೆ ಸುಲಭವಾಗಿ ಹೇಳಿಕೊಳ್ಳುತ್ತಾರೆ. ಅವರು ಸರಿಯೋ ಅಥವಾ ತಪ್ಪಾ ಅನ್ನುವುದನ್ನು ತಿಳಿಯದೆ ನೇರವಾಗಿ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಇಂತಹ ಸಮಯದಲ್ಲಿ ಜಾಗರೂಕರಾಗಿರಿ.
ಡೋಂಟ್ ವರಿ ನಿಮ್ಮ ದುಃಖಗಳಿಗೆ ಫುಲ್ ಸ್ಟಾಪ್ ಸಿಗುತ್ತೆ! ಸಮಾಧಾನ
ನಿಮ್ಮ ದುಃಖಗಳನ್ನು ಕೇಳುವ ಕಿವಿಗಳಿಲ್ಲ ಅಂತ ನಿಮಗೆ ಬೇಸರವಿದ್ದರೆ ನೀವು ಮನಸಾರೆ ದೇವರ ಹತ್ತಿರ ಪ್ರಾರ್ಥನೆ ಮಾಡಿ. ದೇವರ ಜೊತೆ ನಿಮ್ಮ ಮನದ ಮಾತನ್ನು ಶುರು ಮಾಡಿ! ನಿಮ್ಮ ಪರಿಶುದ್ಧ ಮನಸ್ಸಿನಿಂದ ದೇವರ ಮೇಲಿನ ಭಕ್ತಿ ಹೆಚ್ಚಾಗಿ ನಿಮ್ಮ ಮನಸ್ಸಿನ ನೋವು ಕಡಿಮೆಯಾಗುತ್ತದೆ. ವರ್ಷಾನುಗಟ್ಟಲೆಯಿಂದ ಮನಸ್ಸಿನಲ್ಲಿ ಇಟ್ಟುಕೊಂಡಿರುವಂತಹ ನೋವುಗಳು ಕ್ಷಣದಲ್ಲಿ ಮಾಯವಾಗುತ್ತದೆ. ಹೀಗಾಗಿ ನಿಮ್ಮ ಜೊತೆ ಯಾರೂ ಇಲ್ಲ ಅಂತ ನೀವು ಬೇಸರದಿಂದ ಇರಬೇಡಿ. ಖಂಡಿತವಾಗ್ಲೂ ಒಂದು ಪಾಸಿಟಿವ್ ಶಕ್ತಿ ನಿಮ್ಮ ಜೊತೆಗೆ ಇರುತ್ತದೆ. ನೀವು ಮಾಡುವಂತಹ ಕೆಲಸ ಕಾರ್ಯಗಳಿಗೆ ಪಾಸಿಟಿವ್ ಶಕ್ತಿ ನಿಮ್ಮ ಜೊತೆಯಾಗುತ್ತದೆ. ಹಾಗಾಗಿ ದೇವರ ಜೊತೆಗೆ ಮಾತನಾಡಿ ನಿಮ್ಮ ಕಷ್ಟಗಳನ್ನು ದೇವರ ಜೊತೆಗೆ ಹಂಚಿಕೊಳ್ಳಿ ಅಷ್ಟೇ!
Are you feeling sad that there are no ears to hear your sorrows?- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











