ಬ್ರೇಕಿಂಗ್ ನ್ಯೂಸ್
ದೇಶ

ಭಾರತ ಹಾಗೂ ರಷ್ಯಾದ ಜಂಟಿ ಒಪ್ಪಂದಗಳು : ದ್ವಿಪಕ್ಷೀಯ ಬಾಂಧವ್ಯ ವೃದ್ಧಿ

ದೆಹಲಿ : Tulu Times | ಭಾರತ-ರಷ್ಯಾದ 23ನೇ ವಾರ್ಷಿಕ ಶೃಂಗಸಭೆಗಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುರುವಾರ, ಡಿಸೆಂಬರ್ 4 ರ ಸಂಜೆ ಭಾರತಕ್ಕೆ ಆಗಮಿಸಿದ್ದು,‌ ರೆಡ್ ಕಾರ್ಪೆಂಟ್ ಹಾಕಿ ರಷ್ಯಾ ಅಧ್ಯಕ್ಷ ಪುಟಿನ್ ಗೆ ಸ್ವಾಗತವನ್ನು ಕೋರಲಾಯಿತು. ತದ ನಂತರ ಪ್ರಧಾನ ಮಂತ್ರಿ ಮೋದಿಯ ನಿವಾಸದಲ್ಲಿಯೇ ಪುಟಿನ್ ಗೆ ಭರ್ಜರಿ ಔತಣಕೂಟವನ್ನು ನೀಡಲಾಯಿತು.

ರಾತ್ರಿ ದೆಹಲಿ ಮೌರ್ಯ ಹೋಟೆಲ್ ನಲ್ಲಿ ಪುಟಿನ್ ವಾಸ್ತವ್ಯವಿದ್ದರು. ಇದೇ ಸಂದರ್ಭದಲ್ಲಿ ಮೋದಿಯು ಪುಟಿನ್ ಗೆ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದ್ದರು. ಹಲವು ವರ್ಷಗಳ ಹಿಂದೆ ಭಗವದ್ಗೀತೆಯ ಬಗ್ಗೆ ತಾತ್ಸಾರ ಮಾಡಿದ ರಷ್ಯಾ ಇವತ್ತು ಅದೇ ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದುಕೊಂಡಿರುವುದು ಗಮನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗ್ತಾ ಇದೆ.

ಹಾಗೂ ಇಂದು ಭಾರತದಲ್ಲಿ ಹಲವು ಸ್ಥಳಗಳಿಗೂ ಪುಟಿನ್ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ 4 ವರ್ಷದ ಬಳಿಕ ಭಾರತಕ್ಕೆ ಬಂದ ಪುಟಿನ್ ನನ್ನು ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಸ್ವಾಗತಿಸಲಾಯಿತು. ಇದು ಜಗತ್ತಿನೆಲ್ಲೆಡೆ ಗಮನಸೆಳೆದ ವಿಷಯವಾಗಿದ್ದು ರಾಜ್ ಗಟ್ ನಲ್ಲಿ ಗಾಂಧೀಜಿಗೆ ಪುಟಿನ್ ರವರು ಗೌರವವನ್ನು ಸಲ್ಲಿಸಿದರು ಹಾಗೂ ಮುಖ್ಯವಾಗಿ ಇಂದು ಭಾರತ ರಷ್ಯಾ ದೇಶಗಳ 23ನೇ ವಾರ್ಷಿಕ ಶೃಂಗಸಭೆಯು ನಡೆಯಲಿದೆ ಇದರಲ್ಲಿ ಹಲವಾರು ಒಪ್ಪಂದಗಳು ಕೂಡ ಭಾರತ ಮತ್ತು ರಷ್ಯಾ ನಡುವೆ ನಡೆಯಲಿರುವ ಸಾಧ್ಯತೆ ಇದೆ ಹಲವು ಮಹತ್ವದ ಒಪ್ಪಂದ ಗಳಿಗೂ ಉಭಯ ನಾಯಕರು ಸಹಿ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಪುಟಿನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ವಿಚಾರ ಸೇರಿದಂತೆ ಜಾಗತಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ರಕ್ಷಣೆ, ಇಂಧನ, ಸಹಕಾರ, ಬಾಹ್ಯಾಕಾಶ, ಕೃಷಿ, ಕೈಗಾರಿಕೆ, ಆರ್ಥಿಕ ವಿಚಾರ ಸೇರಿದಂತೆ ವಿವಿಧ ವಲಯಗಳಲ್ಲಿ ಜಂಟಿ ಪಾಲುದಾರಿಕೆ ಸಂಬಂಧ ಹಲವು ಒಪ್ಪಂದಗಳಿಗೆ ಮೋದಿ-ಪುಟಿನ್‌ ಸಹಿ ಹಾಕುವ ನಿರೀಕ್ಷೆಯಿದೆ. ಉಭಯ ದೇಶಗಳ ನಡುವಿನ ಕಾರ್ಯತಂತ್ರ ಸಂಬಂಧ ಮತ್ತಷ್ಟು ಬಲಗೊಳಿಸಲು ಮಾತುಕತೆ ನಡೆಯಲಿದೆ ಎನ್ನಲಾಗುತ್ತಿದೆ.

India and Russia sign joint agreements: Strengthening bilateral ties – ತುಳು ಟೈಮ್ಸ್

ಇದನ್ನೂ ಓದಿ :2026 ರಲ್ಲಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲಿದ್ದಾರೆ ನಟ ಯಶ್

========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/dOL6osnuj0U?si=Gegoqzsp73S9-fm0

 

 

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 19

You cannot copy content of this page