ಮಂಗಳೂರು: Tulu Times | ಕಾಂತಾರ ಚಾಪ್ಟರ್ 1 ಸಿನಿಮಾ ಯಶಸ್ವಿಯಾದ ಬೆನ್ನಲ್ಲೇ ಮಂಗಳೂರಿನ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ನಡೆದ ಹರಕೆ ನೇಮ ಕಾರ್ಯಕ್ರಮದಲ್ಲಿ ಪಂಜುರ್ಲಿ ದೈವ ರಿಷಭ್ ಶೆಟ್ಟಿ ಅವರನ್ನು ಬಿಗಿದಪ್ಪಿಕೊಂಡು ಅಭಯ ತೋರಿದ ಘಟನೆ ನಡೆದಿದೆ.
ದೈವಕ್ಕೆ ಸೇವೆ ಮಾಡಲು ನಿಂತ ಕಾಂತಾರ ಟೀಂ..!
ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ವತಿಯಿಂದ ಹರಕೆ ನೇಮೋತ್ಸವ ಆಯೋಜನೆ ಮಾಡಲಾಗಿತ್ತು. ಈ ವೇಳೆ ಸಾಕಷ್ಟು ಜನ ಭಾಗಿಯಾಗಿದ್ದರು. ಇನ್ನು ರಿಷಭ್ ಶೆಟ್ಟಿಯನ್ನು ಅಪ್ಪಿ ಅಲಂಗಿಸಿದ ಮಡಿಲಲ್ಲಿ ಮಲಗಿದ ಪಂಜುರ್ಲಿ ದೈವ ನಿನ್ನ ಹಿಂದೆ ನಾನಿದ್ದೇನೆ ಎಂದು ಹೇಳಿ ಕೈ ಭಾಷೆಯಲ್ಲಿ ಸನ್ನೆ ಮಾಡಿ ಅಭಯ ನೀಡಿದೆ. ನಾನು ಸಂತುಷ್ಟನಾಗಿದ್ದೇನೆ ಎಂದು ಹೇಳಿದೆ.
ಇನ್ನು ವಾರಾಹಿ ಪಂಜುರ್ಲಿಗೆ ಎಣ್ಣೆ ಬೂಳ್ಯ (ಎಣ್ಣೆ ಬೂಳ್ಯ ಅಂದ್ರೆ ತುಳುನಾಡಿನ ಸಾಂಪ್ರದಾಯಿಕ ಪೂಜೆ, ಶುಭ ಕಾರ್ಯಗಳಲ್ಲಿ ಬಳಸುವ ಒಂದು ವಿಧಿವಿಧಾನ, ಇದರಲ್ಲಿ ತೆಂಗಿನ ಎಣ್ಣೆ, ಐದು ಅಡಿಕೆ, ಒಂದು ವೀಳ್ಯದೆಲೆ ಇರುತ್ತದೆ. ಇದು ಪೂಜೆಗೆ ಮತ್ತು ಭೂತ ಕೋಲಕ್ಕೆ ಅನುಮತಿ ನೀಡುವ ಸಂಕೇತವಾಗಿದೆ. ಇನ್ನು ಕೋಲವು ಮಧ್ಯರಾತ್ರಿವರೆಗೂ ನಡೆದಿದೆ. ಈ ವೇಳೆ ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ಆನಂದ ರಾಮ್, ರಿಷಭ್ ಪತ್ನಿ ಪ್ರಗತಿ ಶೆಟ್ಟಿ ಮುಂತಾದವರು ಭಾಗಿಯಾಗಿದ್ದರು. ಗಗ್ಗರ ಸೇವೆ, ಅನ್ನಸಂತರ್ಪಣೆಯಲ್ಲಿ ಕಾಂತಾರ ಚಿತ್ರತಂಡ ಭಾಗಿಯಾಗಿದೆ.
ಕಾಂತಾರ ಸಿನಿಮಾ ಬಿಡುಗಡೆಗೂ ಮುನ್ನ ರಿಷಭ್ ಮಗನ ಹುಟ್ಟುಹಬ್ಬದ ದಿನ ದೈವಸ್ಥಾನಕ್ಕೆ ಆಗಮಿಸಿ, ಕಾಂತಾರ ಚಿತ್ರಕ್ಕೆ ಯಾವುದೇ ಸಮಸ್ಯೆಯಾಗಬಾರದು ಎಂದು ಪ್ರಾರ್ಥನೆ ಮಾಡಿದ್ದರು. ಈ ವೇಳೆ ದೈವ ಸಿನಿಮಾ ಮತ್ತು ಸಂಸಾರದಲ್ಲಿ ಜಾಗರೂಕತೆಯಿಂದ ಇರುವಂತೆ ಎಚ್ಚರಿಕೆ ನೀಡಿತ್ತು. ಹರಕೆ ಹೇಳಿಕೊಂಡಿದ್ದರೆ ಅದನ್ನು ಕೊಟ್ಟು ಬಿಡು ಎಂದು ದೈವ ರಿಷಬ್‌ಗೆ ಹೇಳಿತ್ತು. ಕಾಂತಾರ ಸಿನಿಮಾದ ಯಶಸ್ಸಿನ ತಕ್ಷಣ ಹರಕೆ ತೀರಿಸಿದ್ದಾರೆ.
Panjurli Devi, who slept on Rishabh Shetty’s lap, hugged him and hugged him- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











