ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಪ್ರಯಾಣಿಕರನ್ನು‌ ಗೊಂದಲಕ್ಕೆ ತಳ್ಳಿತ್ತಾ ಕೆಂಪೇಗೌಡ ವಿಮಾನ ನಿಲ್ದಾಣ ?

ಬೆಂಗಳೂರು : Tulu Times | ಈಗಿನ ಪ್ರಸ್ತುತ ಕಾಲದಲ್ಲಿ ವಿಮಾನಯಾನವು ವೇಗವಾದ ಮತ್ತು ಸುಲಭವಾದ ಸಂಚಾರವಾಗಿ ಪರಿಣಮಿಸಿದೆ. ಆದರೆ ಕೆಲವೊಮ್ಮೆ ಯೋಜಿತ ಸಮಯಕ್ಕೆ ವಿಮಾನ ಹಾರದೆ ವಿಳಂಬವಾಗುವುದು, ರದ್ದಾಗುವುದು ಅಥವಾ ಮಾರ್ಗ ಬದಲಾವಣೆ ಆಗುವುದು ಸಾಮಾನ್ಯ. ಇದನ್ನೇ ವಿಮಾನ ಹಾರಾಟದಲ್ಲಿ ವ್ಯತ್ಯಯ ಎಂದು ಕರೆಯುತ್ತಾರೆ. ಈ ವ್ಯತ್ಯಯಗಳು ಪ್ರಯಾಣಿಕರಿಗೆ ಅಸೌಕರ್ಯ ಉಂಟುಮಾಡಿದರೂ, ಅವುಗಳ ಹಿಂದೆ ಗಂಭೀರ ಹಾಗೂ ತಾಂತ್ರಿಕ ಕಾರಣಗಳು ಇರುತ್ತವೆ.
ಇದರಂತೆ,‌ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ಕೊರತೆ, ಕಾರ್ಯಾಚರಣೆಯ ಸಮಸ್ಯೆಗಳಿಂದಾಗಿ ಇಂಡಿಗೋ ಏರ್ಲೈನ್ಸ್‌ನ 200ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ಇದರಿಂದಾಗಿ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡು, ಸ್ಪಷ್ಟ ಮಾಹಿತಿ ಇಲ್ಲದೆ ಪ್ರತಿಭಟನೆ ನಡೆಸಿದ್ದಾರೆ.

ಕಳೆದ ಎರಡು ದಿನಗಳಿಂದ ಇಂಡಿಗೋ ಏರ್ಲೈನ್ಸ್‌ಗಳ ವಿಮಾನ ಹಾರಾಟದಲ್ಲಿ ಉಂಟಾಗಿರುವ ಭಾರೀ ವ್ಯತ್ಯಯದಿಂದ ನೂರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೂಲಗಳ ಪ್ರಕಾರ, ಸಿಬ್ಬಂದಿ ಕೊರತೆ ಹಾಗೂ ಕಾರ್ಯಾಚರಣಾ ಸಮಸ್ಯೆಗಳ ಹಿನ್ನೆಲೆಯಲ್ಲಿ ಇಂಡಿಗೋ 200ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ಇದರ ಪರಿಣಾಮವಾಗಿ ಕೋಲ್ಕತ್ತಾ, ಗೋವಾ, ದೆಹಲಿ, ಹೈದರಾಬಾದ್, ಪುಣೆ ಮುಂತಾದ ಪ್ರಮುಖ ಮಾರ್ಗಗಳ ವಿಮಾನಗಳನ್ನು ಬಳಸಬೇಕಿದ್ದ ಹಲವು ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ರಾತ್ರಿಯಿಂದ ಬೆಳಿಗ್ಗೆಯವರೆಗೂ ವಿಮಾನ ನಿಲ್ದಾಣದಲ್ಲಿ ಕಾದುಕೊಂಡು ಕುಳಿತಿದ್ದ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಟರ್ಮಿನಲ್–1 ಹೊರಗಡೆಯಲ್ಲಿ ಪ್ರತಿಭಟನೆ ನಡೆಸಿದರು. ಫ್ಲೈಟ್ ಬಗ್ಗೆ ವಿಚಾರಿಸಿದಾಗ ಅಧಿಕಾರಿಗಳು ಸ್ಪಷ್ಟ ಉತ್ತರ ಕೊಡುತ್ತಿಲ್ಲ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.

ಇದರಿಂದ ಜೈಪುರದಿಂದ ಬೆಂಗಳೂರು ಮೂಲಕ ಶ್ರೀಲಂಕಾ ಮತ್ತು ಮಲೇಷಿಯಾದತ್ತ ತೆರಳಬೇಕಿದ್ದ ಪ್ರಯಾಣಿಕರ ತಂಡವೊಂದಕ್ಕೆ ಈ ವ್ಯತ್ಯಯದಿಂದ ದೊಡ್ಡ ಹೊಡೆತವಾಗಿದೆ. ಗುರುವಾರ ಕೂಡ ಇದೇ ಸಮಸ್ಯೆ ಮುಂದುವರಿದಿದ್ದು, ಕೆಐಎನಿಂದ ನಿರ್ಗಮಿಸಬೇಕಿದ್ದ 30ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡವು. ಆಗಮಿಸಬೇಕಿದ್ದ 40ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಪಡಿಸಲಾಗಿದೆ. ಒಟ್ಟು 73ಕ್ಕೂ ಹೆಚ್ಚು ವಿಮಾನಗಳ ರದ್ದು ಆಗಿರುವುದರಿಂದ ಏರ್ಪೋರ್ಟ್‌ನ ಟರ್ಮಿನಲ್–1 ಹಾಗೂ ಡಿಪಾರ್ಚರ್ ಗೇಟ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದವು. Did Kempegowda Airport confuse passengers? – ತುಳು ಟೈಮ್ಸ್

ಇದನ್ನೂ ಓದಿ : ವಾಹನ ಚಾಲಕರಿಗೂ ಸ್ಮಾರ್ಟ್ ಕಾರ್ಡ್ : ಸಾರಿಗೆ ಇಲಾಖೆಯ ಹೊಸ ಫ್ಲಾನ್

=======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/LZb3zDSz3GE?si=3cN3b-LBd-PrsGLz

 

 

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page