ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಇತ್ತ ಕಡೆ ‘ಡೆವಿಲ್’ ರಿಲೀಸ್ ಗೆ ಸಜ್ಜಾದ್ರೆ, ಅತ್ತ ಜೈಲಲ್ಲಿ ದಾಸನ ಕಷ್ಟಗಳ ಸರಮಾಲೆ ಮುಂದುವರೆಯುತ್ತಾ ?

ಸಿನೆಮಾ : Tulu Times | ಡೆವಿಲ್ ಸಿನಿಮಾ 2025ರಲ್ಲಿ ಬಿಡುಗಡೆಯಾಗಲಿರುವ ಅತ್ಯಂತ ನಿರೀಕ್ಷಿತ ಆ್ಯಕ್ಷನ್ , ಮಾಸ್ ಎಂಟರ್‌ಟೈನರ್ ಚಿತ್ರಗಳಲ್ಲಿ ಒಂದಾಗಿದೆ. ದರ್ಶನ್ ಅವರು ಚಿತ್ರದಲ್ಲಿ ತೀವ್ರ ಸ್ವಭಾವದ, ಶಕ್ತಿಶಾಲಿ ಮಾಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಲುಕ್‌ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಹಳೆಯ ಕಾಲದ ಆ್ಯಕ್ಷನ್ ನಾಯಕ ಪಾತ್ರಗಳಿಗೆ ಟ್ರಿಬ್ಯೂಟ್ ನೀಡುವಂತಿದೆ. ಸಿನಿಮಾ ಕ್ಲೈಮ್ಯಾಕ್ಸ್ ಮತ್ತು ಆ್ಯಕ್ಷನ್ ಸೀಕ್ವೆನ್ಸ್‌ಗಳು ಪ್ರಮುಖ ಆಕರ್ಷಣೆಯಾಗಿವೆ. ಇವೆಲ್ಲದರ ಮಧ್ಯೆ ಆರೋಪಿಯಾಗಿ ಜೈಲುವಾಸ ಅನುಭವಿಸುತ್ತಿರುವ ದರ್ಶನ್ ಬಿಡುಗಡೆಯ ಭಾಗ್ಯ‌ ಸಿಗುವಂತೆ ಕಾಣುತ್ತಿಲ್ಲ.

ಇದೀಗ ಡಿಸೆಂಬರ್ 11 ಕ್ಕೆ ದರ್ಶನ್ ನಟಿಸಿದ ಡೆವಿಲ್ ಸಿನಿಮಾದ ರಿಲೀಸ್ ಗೋಸ್ಕರ ಅದ್ಧೂರಿ ನಡೀತಾ ಇದೆ. ಆದರೆ ಅತ್ತಕಡೆ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ದರ್ಶನ್ ಗೆ ಬುಧವಾರ ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು ಪರಪ್ಪನ ಅಗ್ರಹಾರದಲ್ಲಿರುವ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿದೆ. ಜಾಮೀನಿನ ಮೇಲಿರುವ ಇತರ ಆರೋಪಿಗಳು ಕೋರ್ಟ್ ಗೆ ಖುದ್ದಾಗಿ ಹಾಜರಾಗಿದ್ದಾರೆ.

ದರ್ಶನ್ ಮನೆಯನ್ನ ಮಹಜರು ಮಾಡುವ ವೇಳೆ 82 ಲಕ್ಷ ರೂಪಾಯಿಯನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ಹಣದ ಮೂಲದ ಬಗ್ಗೆ ದಾಖಲೆ ನೀಡುವಂತೆ ಕೇಳಲಾಗಿತ್ತು. ಆದರೆ ಇದಕ್ಕೆ ದಾಖಲೆಯನ್ನು ಕೊಟ್ಟಿರಲಿಲ್ಲ ಇದರ ಬಗ್ಗೆ ಆದಾಯ ತೆರಿಗೆ ಇಲಾಖೆಯಲ್ಲಿ ತನಿಖೆ ನಡೆಯಲಿದ್ದು ಈ ಹಣವನ್ನು ಕೋರ್ಟ್ ಸದ್ಯಕ್ಕೆ ಐಟಿ ವಶಕ್ಕೆ ನೀಡಿದೆ. ದರ್ಶನ್ ನ ಇಷ್ಟೂ ಲಕ್ಷದ ಮೊತ್ತದ ಹಣ ಐಟಿ ಅಧಿಕಾರಿಗಳ ಪಾಲಾಗಿದೆ. ಜೊತೆಗೆ ಇದರ ತನಿಖೆಯನ್ನು ಎದುರಿಸಬೇಕಾಗಿದೆ. ಇನ್ನು ಇದ್ದದ್ರಲ್ಲಿ ಮನಸ್ಸಿಗೆ ಸ್ವಲ್ಪ ಸಮಾಧಾನ ನೀಡಿದ ಸಂಗತಿ ಅಂದ್ರೆ ದರ್ಶನ್ ಇರುವ ಪರಪ್ಪನ ಅಗ್ರಹಾರದ ಸೆಲ್ ಗೆ ಕೋರ್ಟ್ ‘ಎಸ್’ ಅಂದಿದೆ. ಕೋರ್ಟ್ ಗೆ ಆರೋಪಿ ಲಕ್ಷ್ಮಣ ಎಲ್ಲಾ ಆರೋಪಿಗಳ ಪರವಾಗಿ ಕೋರ್ಟಿಗೆ ಮನವಿಯನ್ನು ಮಾಡಿ ತಾವಿರುವ ರೂಂನಲ್ಲಿ ಮೈಂಡ್ ಅಪ್ಸೆಟ್ ಆಗಿದೆ. ರೂಮ್ ನಲ್ಲಿ ಒಂದು ಟಿವಿ ಹಾಕಿಸಿ ಕೊಡುವಂತೆ ಮನವಿ ಮಾಡಿದ್ದಾನೆ. ಇದಕ್ಕೆ ಕೋರ್ಟ್ ನಿರ್ದೇಶನ ನೀಡುತ್ತೇನೆಂದು ಹೇಳಿರುತ್ತಾರೆ. ಒಟ್ಟಿನಲ್ಲಿ ದರ್ಶನ ಕೇಸ್ ನಲ್ಲಿ ಸಾಕಷ್ಟು ಬೆಳವಣಿಗಳು ಆಗ್ತಾನೇ ಇವೆ. ಇತ್ತ ಸಿನಿಮಾ ಡೆವಿಲ್ ತೆರೆಗೆ ಬರ್ತಾ ಇದ್ರೆ ಅತ್ತ ದಾಸನ ಕಷ್ಟಗಳು ಮುಂದೆವರಿತಾನೇ ಇದೆ. While ‘Devil’ is getting ready for release, will Das’s series of hardships continue in prison? – ತುಳು ಟೈಮ್ಸ್

ಇದನ್ನೂ ಓದಿ :ಪ್ರಮೋದ್ ಗಿಲ್ಲ ಚಾನ್ಸ್, ಹುದ್ದೆಯಲ್ಲಿಲ್ಲದ ಬೊಟ್ಯಾಡಿ ಪತ್ನಿಗೆ ಭೇಟಿ ಭಾಗ್ಯ !?

======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/dOL6osnuj0U?si=en2fwir4n3q_e8wz

 

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page