ಬ್ರೇಕಿಂಗ್ ನ್ಯೂಸ್
ಪುತ್ತೂರು

Puttur: ಇಬ್ಬರು ಸಹೋದ್ಯೋಗಿ ಯುವತಿಯರು ನಾಪತ್ತೆ – ದೂರು ದಾಖಲು

Puttur: ಮಂಡ್ಯದಲ್ಲಿ ಕೆಲಸದಲ್ಲಿದ್ದ ಸಹೋದ್ಯೋಗಿಗಳು ನಾಪತ್ತೆಯಾದ ಘಟನೆ ನಡೆದಿದೆ. ನಾಪತ್ತೆ ಕುರಿತಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರಿನ ಇನಾಮೊಗ್ರುವಿನ ಮೋನಿಶಾ (23) ಮತ್ತು ಮಂಡ್ಯದ ಪಾಂಡವಪುರ ನಿವಾಸಿ ದಿವ್ಯಾ (20) ನಾಪತ್ತೆಯಾದ ಯುವತಿಯರು.

ವರದಿಯ ಪ್ರಕಾರ, ಇವರಿಬ್ಬರೂ ಮಂಡ್ಯದಲ್ಲಿ ಒಂದೇ ಸಂಸ್ಥೆಯಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದರು. ಮಂಡ್ಯದ ದಿವ್ಯಾ ಎಂಬಾಕೆ ನಾಲ್ಕು ದಿನಗಳ ಹಿಂದೆ ಮೋನಿಶಾ ಜೊತೆಗೆ ಇನಾಮೊಗ್ರು ಮನೆಗೆ ಬಂದಿದ್ದಾರೆ. ಅಂದಿನಿಂದ ಮೋನಿಷಾ ಹಾಗೂ ದಿವ್ಯ ನಾಪತ್ತೆಯಾಗಿದ್ದಾರೆ. ಈ ಇಬ್ಬರೂ ಯುವತಿಯರು ಶ್ರವಣ ಮತ್ತು ಮಾತಿನ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ – ಮೂವರ ಬಂಧನ


ವಿಡಿಯೋ ಸುದ್ದಿಗಳಿಗಾಗಿ ನಮ್ಮ ಯುಟ್ಯೂಬ್‌ ಚಾನೆಲ್‌ ಕ್ಲಿಕ್‌ ಮಾಡಿ https://www.youtube.com/@tulutimess 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 11

You cannot copy content of this page