ಗುಜರಾತ್ : Tulu Times | ಭಾರತೀಯ ಸಂಸ್ಕೃತಿಯಲ್ಲಿ ಪ್ರಸಾದಕ್ಕೆ ಅತ್ಯಂತ ಮಹತ್ವವಿದೆ. ದೇವಸ್ಥಾನಗಳಲ್ಲಿ ದೇವರುಗಳಿಗೆ ನೈವೇದ್ಯ ಅರ್ಪಿಸಿದ ನಂತರ ಭಕ್ತರಿಗೆ ಹಂಚುವ ಪ್ರಸಾದವು ತುಂಬಾ ಪ್ರಾಮುಖ್ಯವಾದದ್ದು. ಇದು ಕೇವಲ ಊಟವಲ್ಲ; ದೇವರಿಗೆ ಅರ್ಪಿಸಲಾದ ಕೃಪೆಯ ಸಂಕೇತ, ಭಕ್ತನಿಗೆ ನೀಡಲಾಗುವ ಆಶೀರ್ವಾದ.
ಬೇರೆ ಬೇರೆ ದೇವಸ್ಥಾನಗಳಲ್ಲಿ ಬೇರೆ ಬೇರೆ ರೀತಿಯ ಪ್ರಸಾದ ವಿತರಣೆ ಮಾಡಲಾಗುತ್ತದೆ. ಸಂಪ್ರದಾಯಕ್ಕೆ ತಕ್ಕಂತೆ ಕೆಲವೊಮ್ಮೆ ಅದು ಬದಲಾಗುವುದೂ ಇದೆ. ಆದರೆ ತೀರಾ ಆಧುನಿಕವಾಗಿಬಿಡುವುದೇ….? ಹೌದು…! ಜನರು ಆಧುನಿಕತೆಗೆ ಬದಲಾದಂತೆ ದೇವರು, ದೇವಸ್ಥಾನಗಳಲ್ಲೂ ಆಧುನಿಕತೆಯನ್ನು ಕಾಣಬಹುದು. ಅದೀಗ ದೇವರ ನೈವೇದ್ಯದಲ್ಲೂ ಪರಿಣಾಮ ಬೀರಿರುವುದಂತೂ ನಿಜ. ಸಾಮಾನ್ಯವಾಗಿ ತೆಂಗಿನಕಾಯಿ, ಅವಲಕ್ಕಿ, ಲಡ್ಡು, ಪಾಯಸ ಅಥವಾ ಪುಳಿಯೋಗರೆಯನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಆದರೆ ಇಲ್ಲೊಂದು ದೇವಾಲಯ ಇದಕ್ಕೆ ವಿರುದ್ಧವಾಗಿದೆ.
ದಶಕಗಳಿಂದ, ಗುಜರಾತ್‌ನ ರಾಜ್‌ಕೋಟ್ ಮತ್ತು ಚೆನ್ನೈನಲ್ಲಿರುವ ಈ ಎರಡು ಪ್ರಸಿದ್ಧ ದೇವಾಲಯಗಳಲ್ಲಿ ಪಿಜ್ಜಾ, ಸ್ಯಾಂಡ್‌ವಿಚ್, ಬರ್ಗರ್, ಪಾನಿಪುರಿ ಮತ್ತು ತಂಪು ಪಾನೀಯಗಳನ್ನು ಪ್ರಸಾದವಾಗಿ ವಿತರಿಸಲಾಗುತ್ತಿದೆ. ಇದೀಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದನ್ನು ಪ್ರಸಾದವಾಗಿ ನೀಡಲು ಒಂದು ಪ್ರಮುಖ ಕಾರಣವಿದೆ. ಮಕ್ಕಳ ಮೇಲಿನ ಪ್ರೀತಿ ಮತ್ತು ಅವರ ದೀರ್ಘಾಯುಷ್ಯಕ್ಕಾಗಿ ಪೋಷಕರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ರಪುತಾನಾ ಗ್ರಾಮದಲ್ಲಿ 65-70 ವರ್ಷಗಳ ಹಿಂದಿನ ಜೀವಿಕಾ ಮಾತಾಜಿ ದೇವಾಲಯದಲ್ಲಿ ಈ ವ್ಯವಸ್ಥೆಯನ್ನು ಮಾಡಲಾಗಿದೆ. ತಾಯಂದಿರು ತಮ್ಮ ಮಕ್ಕಳ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ವಿಶೇಷ ಪ್ರಾರ್ಥನೆಗಳನ್ನು ಈ ದೇವಾಲಯದಲ್ಲಿ ಸಲ್ಲಿಸಲಾಗುತ್ತದೆ. ಈ ಹಿಂದೆ ದೇವಾಲಯದಲ್ಲಿ ತೆಂಗಿನಕಾಯಿ ಮತ್ತು ಸಕ್ಕರೆಯಿಂದ ಮಾಡಿದ ಸರಳ ಪ್ರಸಾದ ನೀಡಲಾಗುತ್ತಿತ್ತು. ಆದರೆ ದೇವಾಲಯಕ್ಕೆ ಬರುವ ಮಕ್ಕಳು ಈ ಪ್ರಸಾದವನ್ನು ತಿನ್ನಲು ನಿರಾಕರಿಸಿದ್ದಾರೆ. ಅದಕ್ಕಾಗಿ ಮಕ್ಕಳು ಸಂತೋಷದಿಂದ ದೇವಾಲಯಕ್ಕೆ ಬಂದು ಪ್ರಸಾದವನ್ನು ಸ್ವೀಕರಿಸುವಂತೆ ದೇವಾಲಯ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಬದಲಾವಣೆ ಆಗಬೇಕು ಆದರೆ ಇಷ್ಟೊಂದು ಮುಂದುವರಿದ ಬದಲಾವಣೆ ನಿಜವಾಗಿಯೂ ಅಚ್ಚರಿ ತರುವಂತದ್ದು.
What is this… Is fast food being offered in the temple – ತುಳು ಟೈಮ್ಸ್
ಇದನ್ನೂ ಓದಿ :ಮಂಗಳೂರು: ಜೈಲಿನಲ್ಲಿದ್ದ ಕೈದಿಗೆ ತಂದ ಟೂತ್‌ಪೇಸ್ಟ್ ಟ್ಯೂಬ್‌ನಲ್ಲಿ ಎಂಡಿಎಂಎ ಪತ್ತೆ!
=========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/OSYN1bbCWKE?si=N8HV-1yysemC7NmS











