ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನಿಮ್ಮವರೇ ನಿಮ್ಮ ಪ್ರೀತಿಗೆ ಸ್ಪಂದಿಸುತ್ತಿಲ್ಲವಾ..! ಹಾಗಾದ್ರೆ ಏನರ್ಥ ಗೊತ್ತಾ..?

ಜೀವನ ಶೈಲಿ: Tulu Times|‌ ಜೀವನದ ಜಂಜಾಟದಲ್ಲಿ ಪ್ರತಿಯೊಬ್ಬರಿಗೂ ಪ್ರೀತಿಯ ಆಸರೆ ಬೇಕಾಗಿರುತ್ತದೆ. ಒಂದಲ್ಲಾ  ಒಂದು ರೀತಿಯಲ್ಲಿ ನಾವು ಪ್ರೀತಿಯನ್ನು ಕೈ ಚಾಚುತ್ತೇವೆ. ಕೆಲವೊಮ್ಮೆ ನಮ್ಮ ಪ್ರೀತಿಗೆ ಇನ್ನೊಬ್ಬರು ಸ್ಪಂದಿಸದೇ ಇರಬಹುದು. ಹಾಗಿದ್ರೆ ನಿಮ್ಮವರೇ  ನಿಮ್ಮ ಪ್ರೀತಿಗೆ ಸ್ಪಂದನೆ ನೀಡುತ್ತಿಲ್ಲವೇ..? ಈ ಸಂದರ್ಭದಲ್ಲಿ ನೀವು ಏನು ಮಾಡಬೇಕು ಗೊತ್ತಾ? ಈ ಸ್ಟೋರಿ ಓದಿ…

ನಿಮ್ಮನ್ನು ನಿಮ್ಮವರು ಸ್ವಲ್ಪವೂ ಕಾಳಜಿ ವಹಿಸ್ತಿಲ್ವಾ..?

ಜೀವನದಲ್ಲಿ ಹಲವಾರು ಘಟ್ಟಗಳಿರುತ್ತವೆ. ಅದರಲ್ಲಿ ಪ್ರತಿಯೊಬ್ಬರೂ ಕೂಡ ಪ್ರೀತಿಗಾಗಿ ಹಾತೊರೆಯುತ್ತಾ ಇರುತ್ತಾರೆ. ಕೆಲವೊಮ್ಮೆ ನಮ್ಮನ್ನು ಬಹಳ ಇಷ್ಟ ಪಡುವವರು ನಮ್ಮ ಬಗ್ಗೆ ಬಹಳ ನೆಗೆಟಿವ್ ಆಗಿ ಥಿಂಕ್ ಮಾಡುತ್ತಾರೆ. ಅದರಲ್ಲೂ ನಮ್ಮ ಬಗ್ಗೆ ಕಿಂಚಿತ್ತೂ ಪ್ರೀತಿಯನ್ನು ತೋರಿಸದೆ ಇರಬಹುದು. ಅಂತವರು, ನಿಮ್ಮ ಸರ್ಕಲ್ ನಲ್ಲಿ ಖಂಡಿತವಾಗ್ಲೂ ಇದ್ದೇ ಇರುತ್ತಾರೆ. ನಿಮ್ಮ ಮೇಲೆ ಪ್ರೀತಿ ಉಂಟಾಗಬೇಕಾದರೆ ಮುಖ್ಯವಾಗಿ ನೀವು ನಿಮ್ಮತನವನ್ನು ಬಿಟ್ಟುಬಿಡಬೇಡಿ. ಕೆಲವೊಮ್ಮೆ ನಮಗೆ ಅವರು ಪ್ರೀತಿ ತೋರಿಸುತ್ತಿಲ್ಲ ಅಂತ ಗೊತ್ತಾಗಿ ಮನಸ್ಸಿಗೆ ಬಹಳ ಖುಷಿಯಾಗುತ್ತದೆ. ಇದೆಲ್ಲವನ್ನು ನೆನೆಸಿಕೊಂಡು ನಿಮ್ಮ ಮನಸ್ಸು ಪದೇ ಪದೇ ಕೊರಗುತ್ತಿರುತ್ತದೆ.

ಅವರೇ ನಿಮ್ಮನ್ನು ಮಿಸ್‌ ಮಾಡಿಕೊಂಡ ಹಾಗೆ ಸುಮ್ಮನಿರಿ..!

ನಿಮ್ಮ ಪ್ರೀತಿ ಪಾತ್ರರು ನಿಮ್ಮ ಜೊತೆ ಮಾತನಾಡುತ್ತಿಲ್ಲ ಅಂದಾಗ ಖಂಡಿತವಾಗಲೂ ಅವರು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಾರೆ ಎಂದು ಅರ್ಥ! ಯಾಕೆಂದರೆ, ನಿಮ್ಮ ಮೇಲಿನ ಕೋಪ ಅವರಿಗೆ ಬಹಳ ಹೆಚ್ಚಾಗಿ ಇದ್ದರೂ ಕೂಡ ಒಂದು ದಿನ ನೀವೇ ಅವರಿಗೆ ಬೇಕಾಗುತ್ತದೆ. ನಿಮ್ಮ ಪ್ರೀತಿಯ ಬೆಂಬಲ ಅವರಿಗೆ ಖಂಡಿತವಾಗಲೂ ಬೇಕಾಗಿರುತ್ತದೆ. ಹಾಗಾದ್ರೆ ನೀವು ಪ್ರೀತಿಯಿಂದ ವಂಚಿತರಾಗುತ್ತಿದ್ದೀರಿ ಅಂತ ಖಂಡಿತವಾಗ್ಲೂ ನಂಬಿಕೊಳ್ಳಬೇಡಿ. ನೀವು ನಿಮ್ಮ ಪ್ರೀತಿಯನ್ನು ಇತರರಿಗೆ ವ್ಯಕ್ತಪಡಿಸಿ ನಿಮಗೆ ಯಾರು ಬಹಳ ಪ್ರಾಮುಖ್ಯತೆಯನ್ನು ಕೊಡುತ್ತಾರೆ ಅಂತವರ ಜೊತೆ ನೀವು ಪ್ರೀತಿಯಿಂದ ಮಾತನಾಡಿ. ಜೊತೆಗೆ, ನಿಮ್ಮ ಮನಸ್ಸಿನಲ್ಲಿರುವಂತಹ ಭಾವನೆಗಳನ್ನು ಆ ವ್ಯಕ್ತಿಯ ಜೊತೆಗೆ ಹಂಚಿಕೊಳ್ಳಿ. ಹೀಗಿದ್ದಾಗ ನಿಮ್ಮ ಮನಸ್ಸಿನ ನೋವು ಮಾಯವಾಗುತ್ತದೆ. ನಿಮ್ಮವರೇ ನಿಮಗೆ ಪ್ರೀತಿ ತೋರಿಸುತ್ತಿಲ್ಲ ಎಂಬ ಕೊರಗು ನಿಮ್ಮಿಂದ ದೂರವಾಗುತ್ತದೆ. ಇಂತಹ ಸಮಯದಲ್ಲಿ ನಿಮ್ಮ ಮನಸ್ಸಿನ ಮಾನಸಿಕ ಶಕ್ತಿ ಇನ್ನಷ್ಟು ಹೆಚ್ಚುತ್ತದೆ. ನೀವು ನಿಮ್ಮದೇ ಸರ್ಕಲ್ ಮಾಡಿಕೊಂಡು ಖುಷಿಯಾಗಿ ನೆಮ್ಮದಿಯಿಂದ ಬದುಕುವಂತಾಗುತ್ತೀರಿ.

ಹೊಸ ಜಗತ್ತನ್ನು ನೀವೆ ಕ್ರಿಯಟ್‌ ಮಾಡಿಕೊಳ್ಳಿ..!

ನಿಮ್ಮವರು ನಿಮ್ಮ ಜೊತೆಗೆ ಮೊದಲಿನಂತ ಪ್ರೀತಿಯಿಂದ ಇಲ್ಲ ಎಂದಾದರೆ ನೀವು ಖಂಡಿತವಾಗ್ಲೂ ಮನಸ್ಸಿಗೆ ಹರ್ಟ್ ಮಾಡಿಕೊಳ್ಳದಿರಿ. ನೀವು ನಿಮ್ಮದೇ ಆದಂತಹ ಹೊಸ ಜಗತ್ತನ್ನು ನಿರ್ಮಿಸಿಕೊಳ್ಳಿ. ಇದರಿಂದ ನೀವು ನಿಮ್ಮ ಸ್ವಾತಂತ್ರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವಿರಿ. ಇನ್ನು ನಿಮಗೆ ತಾಳ್ಮೆ ಅನ್ನೋದು ಬಹಳ ಮುಖ್ಯವಾಗಿರುತ್ತದೆ. ನಿಮ್ಮವರು ನಿಮ್ಮ ಜೊತೆಗೆ ಮಾತನಾಡುತ್ತಿಲ್ಲ ಅಂದರೆ ಅವರಿಂದ ಕೊಂಚ ದೂರವಿರಿ. ಸಮಯ ಹಾಗೂ ತಾಳ್ಮೆ ಖಂಡಿತವಾಗ್ಲೂ ನಿಮಗೆ ಒಳ್ಳೆಯ ಫಲಿತಾಂಶ ನೀಡುತ್ತದೆ. ನೀವು ನಿಮ್ಮ ಯೋಚನೆ ಹಾಗೂ ನಿಮ್ಮ ಮಾನಸಿಕ ಧೃಡತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ನಿಮ್ಮನ್ನು ಇಷ್ಟ ಪಡದೇ ಇರುವವರು ನಿಮ್ಮಿಂದ ದೂರವಾಗುತ್ತಿದ್ದಾರೆ ಅಂದ್ರೆ ಅವರ ಸಂಘ ನೀವು ನೀವಾಗಿಯೇ ದೂರವಿಡಿ. ನೀವು ನಿಮ್ಮತನವನ್ನು ಕಳೆದುಕೊಂಡು ಕ್ಷಮೆ ಕೇಳುತ್ತಾ ಗೋಗರೆಯುತ್ತಾ ನೋವು ಮಾಡಿಕೊಂಡರೆ ನಿಮ್ಮ ಮೌಲ್ಯವನ್ನು ನೀವೇ ಕಳೆದುಕೊಳ್ಳುವಿರಿ. ಹೀಗಾಗಿ ನಿಮ್ಮ ತನವನ್ನು ಬಿಟ್ಟು ಕೊಡಬೇಡಿ. ಜೊತೆಗೆ ನಿಮ್ಮವರು ನಿಮಗೆ ಪ್ರೀತಿ ಕೊಡುತ್ತಿಲ್ಲ ಅಂದಾಗ ಮೌನವಾಗಿರಿ‌. ಹೊಸ ಜಗತ್ತನ್ನು ನೀವೆ ಕ್ರಿಯಟ್‌ ಮಾಡಿಕೊಳ್ಳಿ..!

Are your loved ones not responding to your love? Do you know what that means?- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page