ಬ್ರೇಕಿಂಗ್ ನ್ಯೂಸ್
ಕರಾವಳಿಬಂಟ್ವಾಳ

ಪುಂಜಾಲಕಟ್ಟೆ: ಹಾಡಹಗಲೇ ಮನೆಗೆ ನುಗ್ಗಿ ನಗ-ನಗದು ಕಳವು

ಪುಂಜಾಲಕಟ್ಟೆ – ತುಳು ಟೈಮ್ಸ್‌: ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ಎರಡು ಲಕ್ಷ ನಗದು ಎಗರಿಸಿದ ಘಟನೆ ನಡೆದಿದೆ. ಬಂಟ್ವಾಳ ತಾಲೂಕು ಕುಕ್ಕುಪಾಡಿ, ಕೊಲೆಜಾಲು ಎಂಬಲ್ಲಿ ಕಳ್ಳತನ ನಡೆದಿದೆ.

ಕೊಲೆಜಾಲು ವಿಲಿಯಂ ವಾಸ್‌ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿ. 02 ಸಮಯ 10.00 ಗಂಟೆಗೆ ಸಿದ್ದಕಟ್ಟೆಗೆ ಟೈಲರಿಂಗ್ ಕೆಲಸದ ನಿಮಿತ್ತ ಮನೆಗೆ ಬೀಗ ಹಾಕಿ ಹೋಗಿದ್ದಾರೆ. ಮದ್ಯಾಹ್ನ ಕೆಲಸ ಮುಗಿಸಿ ಊಟಕ್ಕೆಂದು ಮನೆಗೆ ಬಂದಾಗ ಶಾಕ್‌ ಆಗಿದ್ದಾರೆ. ಕಳ್ಳರು ಮನೆಯ ಬೀಗವನ್ನು ಮುರಿದು ಒಳ ಪ್ರವೇಶಿಸಿ ಚಿನ್ನಾಭರಣ, ನಗದು ದೋಚಿದ್ದಾರೆ.

ಇದನ್ನೂ ಓದಿ: ಪುತ್ತೂರು: ಗೋಸಾಗಾಟದ ವೇಳೆ ಕೆಟ್ಟು ಹೋದ ಕಾರು – ಇಬ್ಬರ ಬಂಧನ

ಮನೆಯ ಬೆಡ್ ರೂಮಿನಲ್ಲಿದ್ದ ಗೋದ್ರೇಜಿನ ಸೇಫ್ಟಿ ಲಾಕರನ್ನು ಮುರಿದು ಅದರಲ್ಲಿದ್ದ ಅಂದಾಜು ಎರಡು ಲಕ್ಷ ನಗದು ಮತ್ತು ಒಟ್ಟು ತೂಕ 17 ಗ್ರಾಂಗಳ ಚಿನ್ನಾಭರಣವನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 77/2025, ಕಲಂ: 331(3) 305 BNS 2023 ಯಂತೆ ಪ್ರಕರಣ ದಾಖಲಾಗಿರುತ್ತದೆ.

Thieves broke into a house in broad daylight and stole gold ornaments worth lakhs and two lakhs in cash. The theft took place in Kukkupady, Kolejalu, Bantwal taluk. Tulu Times

=====================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 31

You cannot copy content of this page