ಮಂಗಳೂರು - ತುಳು ಟೈಮ್ಸ್: ರಿಯಾದ್‌ನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ವಿಮಾನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿದಿದೆ. ಪ್ರಯಾಣಿಕರೊಬ್ಬರಿಗೆ ವೈದ್ಯಕೀಯ ತುರ್ತುಸ್ಥಿತಿ ಎದುರಾಗಿದ್ದರಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ಸೋಮವಾರ ತಡರಾತ್ರಿ ತುರ್ತಾಗಿ ಇಳಿಸಲಾಯಿತು ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ರಿಯಾದ್‌ನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ (ಐಎಕ್ಸ್ 522) ವಿಮಾನವನ್ನು ಸೋಮವಾರ ತಡರಾತ್ರಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿಸಲಾಗಿದೆ.
ವಿಮಾನದಲ್ಲಿದ್ದ 30 ವರ್ಷದ ಪ್ರಯಾಣಿಕರೊಬ್ಬರಿಗೆ ವೈದ್ಯಕೀಯ ತುರ್ತು ಸಂದರ್ಭ ಎದುರಾಗಿದೆ. ಈ ವೇಳೆ ಹತ್ತಿರವಿರುವ ಮಂಗಳೂರಿನಲ್ಲಿ ಲ್ಯಾಂಡ್ ಮಾಡಲು ಪೈಲೆಟ್‌ಗಳು ಯೋಚಿಸಿದ್ದಾರೆ. ಕೂಡಲೇ ಮಂಗಳೂರು ವಿಮಾನ ನಿಲ್ದಾಣದ ಗಮನಕ್ಕೆ ತಂದು ಇಳಿಸಲಾಗಿದೆ.
ಇದನ್ನೂ ಓದಿ: ಪುತ್ತೂರು: ಗೋಸಾಗಾಟದ ವೇಳೆ ಕೆಟ್ಟು ಹೋದ ಕಾರು – ಇಬ್ಬರ ಬಂಧನ
ವಿಮಾನ ನಿಲ್ದಾಣದ ಕಾರ್ಯಾಚರಣೆ ನಿಯಂತ್ರಣ ಕೇಂದ್ರವು ಎಲ್ಲಾ ವಿಭಾಗಗಳ ಸಮನ್ವಯದಲ್ಲಿ ವೈದ್ಯಕೀಯ ತಂಡ ಸಜ್ಜುಗೊಳಿಸಿ ವಿಮಾನದಲ್ಲೇ ರೋಗಿಗೆ ಚಿಕಿತ್ಸೆ ನೀಡಿದ್ದಾರೆ. ನಂತರ ಸ್ಥಳೀಯ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.
ಚಿಕಿತ್ಸೆಯ ನಂತರ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಮಂಗಳವಾರ ಬೆಳಗಿನ ಜಾವ 2.05 ಗಂಟೆಗೆ ತಿರುವನಂತಪುರಂ ಕಡೆಗೆ ಹೊರಟಿತು. ತಕ್ಷಣದ ಕಾರ್ಯಾಚರಣೆ, ನಿಲ್ದಾಣದ ಸಿಬ್ಬಂದಿಯ ಹೊಂದಾಣಿಕೆಯಿಂದ ಇದು ಸಾಧ್ಯವಾಯಿತು ಎಂದು ವಕ್ತಾರರು ತಿಳಿಸಿದ್ದಾರೆ.
Air India Express flights land at Mangalore Airport (IXE) for a variety of routes, including a recent diversion for a medical emergency on December 2, 2025, from a Riyadh-Thiruvananthapuram flight. Tulu Times
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











