ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕೆಂಪೇಗೌಡ ವಿಮಾನ‌ ನಿಲ್ದಾಣದಲ್ಲಿ ಹೊಸ ಕಾನೂನು : ಚಾಲಕರ ಜೇಬಿಗೆ ಕತ್ತರಿ

ಬೆಂಗಳೂರು : Tulu Times | ಬೆಂಗಳೂರಿನ ಕೇಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇಂದು ಭಾರತದ ಅತ್ಯಾಧುನಿಕ ಹಾಗೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಜಗತ್ತಿನ ಅನೇಕ ಪ್ರಮುಖ ನಗರಗಳೊಂದಿಗೆ ಬೆಂಗಳೂರು ಸಂಪರ್ಕ ಸಾಧಿಸುತ್ತಿರುವುದು ಈ ವಿಮಾನ ನಿಲ್ದಾಣದ ಮೂಲಕವೇ. ಹೀಗಿರುವಾಗ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಎರಡೂ ಟರ್ಮಿನಲ್‌ಗಳಲ್ಲೂ ಅನುಮತಿಸಿದ ಉಚಿತ ಸಮಯಕ್ಕಿಂತ ಹೆಚ್ಚು ಅವಧಿ ತಂಗುವ ವಾಹನಗಳಿಗೆ ಬಿಗ್ ಶಾಕ್ ಎದುರಾಗಿದೆ.

ಡಿಸೆಂಬರ್ 8ರಿಂದ ವೈಟ್‌ ಮತ್ತು ಎಲ್ಲೋ ಬೋರ್ಡ್‌ ವಾಹನ, ಎಲೆಕ್ಟ್ರಿಕ್‌ ವಾಹನಗಳಿಗೆ ಪ್ರತ್ಯೇಕ ದಂಡ ನಿಗದಿ ವಿಧಿಸಲಾಗುವುದು ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿಯಮಿತ ಹೇಳಿದೆ. ಎರಡೂ ಟರ್ಮಿನಲ್‌ಗಳ ಪಿಕಪ್ ವಲಯದಲ್ಲಿ ಎಲ್ಲಾ ಖಾಸಗಿ ವಾಹನಗಳು (ಬಿಳಿ ಬೋರ್ಡ್) 8 ನಿಮಿಷ ಉಚಿತವಾಗಿ ಬಳಕೆ ಮಾಡಬಹುದು. ಇದಾದ ಬಳಿಕ ಕಾರುಗಳಿಗೆ 8–13ನಿಮಿಷದ ವರೆಗೆ ₹ 150 ಹಾಗೂ 13–18ನಿಮಿಷದವರೆಗೆ ₹300 ಶುಲ್ಕ ವಿಧಿಸಲಿದೆ. ಈ ಮೂಲಕ ಚಾಲಕರ ಜೇಬಿಗೆ ಕತ್ತರಿ ಬೀಳಲಿದೆ.

18 ನಿಮಿಷಕ್ಕೂ ಹೆಚ್ಚು ಕಾಲ ಏರ್ಪೋರ್ಟ್‌ನಲ್ಲೇ ವಾಹನ ನಿಂತಿದ್ದರೆ ಅಂತಹ ಗಾಡಿಗಳನ್ನು ಜಪ್ತಿ ಮಾಡಿ, ಪೊಲೀಸ್ ಠಾಣೆಗೆ ರವಾನೆ ಮಾಡಲಾಗುವುದು. ಮಾಲೀಕರು ದಂಡದ ಜೊತೆಗೆ ಟೋಯಿಂಗ್ ಶುಲ್ಕವನ್ನೂ ಕಟ್ಟಬೇಕಾಗುವ ಪರಿಸ್ಥಿತಿ ಇರಲಿದೆ. ಅದರಲ್ಲೂ ಪ್ರಯಾಣಿಕರನ್ನು ಇಳಿಸಲು (ಡ್ರಾಪ್) ಬರುವ ನಿರ್ಗಮನ ಗೇಟ್‌ನಲ್ಲಿ ಖಾಸಗಿ ಹಾಗೂ ವಾಣಿಜ್ಯ ವಾಹನಗಳಿಗೆ ಈ ಶುಲ್ಕ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಏರ್ಪೋರ್ಟ್‌ಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಪಿಕ್-ಅಪ್ ವಲಯಗಳಲ್ಲಿ ಶಿಸ್ತು ಕಾಪಾಡುವುದು ಅನಿವಾರ್ಯವಾಗಿದೆ. ಇದು ಕೇವಲ ನಿಯಮವಲ್ಲ. ಜನರ ಸುರಕ್ಷತೆ ಕಾಪಾಡುವುದು. ಬೇರೆ ಪ್ರಯಾಣಿಕರ ಸಮಯವನ್ನು ಉಳಿಸುವ ಕ್ರಮವಾಗಿದೆ ಎಂದು ವರದಿಯಾಗಿದೆ.

New law at Kempegowda Airport: A cut to the pockets of motorists – ತುಳು ಟೈಮ್ಸ್

ಇದನ್ನೂ ಓದಿ :ಮದುವೆಯಲ್ಲಿ ನೀವು‌ ಥೇಟ್‌ ಅಪ್ಸರೆಯಂತೆ ಕಾಣುವ ಆಸೆನಾ..? ಈ ಸ್ಟೋರಿ ನಿಮಗಾಗಿ !

=========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/dcWSAiKNAZc?si=Dl6dRfk0ldeacqIZ

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page