ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಹೀಗೆ ಮಾಡಿದ್ರೆ ನೀವು ವಾಸಿಸೋ ಮನೆ ತುಂಬಾ ಘಮ ಘಮ ಪರಿಮಳ ಬರುತ್ತೆ…!

ಜೀವನ ಶೈಲಿ : Tulu Times | ಮನೆಯ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಮರಮುಟ್ಟು, ಪೇಯಿಂಟ್, ಕಲ್ಲು ಇತ್ಯಾದಿಗಳಿಂದ ಮನೆಯನ್ನು ಸುಂದರ ವಿನ್ಯಾಸಕ್ಕೆ ಕರೆದುಕೊಂಡು ಹೋಗುತ್ತಾರೆ.  ಹೀಗಿರುವಾಗ, ಮನೆಯ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೂ ಅಷ್ಟೇ ಮುಖ್ಯವಾಗಿರುತ್ತದೆ. ಹಾಗಾಗಿ, ಮನೆಯನ್ನು ಸ್ವಚ್ಛವಾಗಿಡುವುದು ಹಾಗೆ ಶುಭ್ರವಾಗಿ ಸುವಾಸನೆ ಬರುವಂತೆ ಇಡುವುದು ಈಗಿನ ಫ್ಯಾಷನ್ ಆಗಿದೆ.

ಅದರಲ್ಲೂ ಮನೆಯಲ್ಲಿನ ವಸ್ತುವನ್ನು ಬಳಸಿಕೊಂಡು ರೂಮ್ ಫ್ರೆಶ್ನರ್ ತಯಾರಿಸಿಕೊಳ್ಳುವ ವಿಧಾನ ಹಾಗೂ ಮನೆಯನ್ನು 24 ಗಂಟೆಗಳ ಕಾಲ ಘಮ ಘಮ ಎನಿಸುವಂತೆ ಇಟ್ಟುಕೊಳ್ಳಬಹುದು. ಇದು ಖರ್ಚು ಕೂಡ ಕಡಿಮೆ ಹಾಗೆ ನಿಮಗೆ ಅತ್ಯುತ್ತಮ ಸುವಾಸನೆ ನೀಡುವ ದ್ರಾವಣವನ್ನು ಮಾಡಬಹುದು. ಹಾಗಾದ್ರೆ ಮನೆಯಲ್ಲಿ ಈ ದ್ರಾವಣ ಮಾಡಲು ಯಾವೆಲ್ಲಾ ವಸ್ತು ಬೇಕು? ಹೇಗೆ ಮಾಡಬೇಕು ಎಂಬುದನ್ನು ಇಲ್ಲಿ ಹೇಳ್ತೀವಿ ಕೇಳಿ… ಇದಕ್ಕೆ ಒಂದು ಪ್ಯಾಕ್ ಬಟ್ಟೆ ಒಗೆದ ಬಳಿಕ ಬಳಸುವ ಕಮ್‌ಫರ್ಟ್ ಬಳಸಿದರೆ ಸಾಕಾಗುತ್ತದೆ.

ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು 2 ಗ್ಲಾಸ್ ನೀರು ಹಾಕಿಕೊಳ್ಳಿ. ಬಳಿಕ ನೀರು ಬಿಸಿಯಾಗಲು ಬಿಡಿ. ನೀರು ಬಿಸಿಯಾದಾಗ ಇದಕ್ಕೆ 2 ಸ್ಪೂನ್ ಅಷ್ಟು ಕಮ್‌ಫರ್ಟ್ ದ್ರಾವಣವನ್ನು ಇದಕ್ಕೆ ಹಾಕಿಕೊಳ್ಳಿ. ನಂತರ ಕುದಿಬರಲು ಬಿಡಿ. ನಂತರ ಇದನ್ನು ಒಂದೆರಡು ನಿಮಿಷ ಕುದಿಸಿಕೊಂಡು ಒಲೆ ಆಫ್ ಮಾಡಿ ಇಳಿಸಿಕೊಳ್ಳಿ.  ಇದನ್ನು ಒಂದು ಬಾಟಲಿಯಲ್ಲಿ ತುಂಬಿಕೊಂಡು ಅದಕ್ಕೆ ಚಿಕ್ಕದಾದ ತೂತು ಮಾಡಿ ಬಳಿಕ ಮನೆಯಲ್ಲಿ ಸಿಂಪಡಿಸಿ. ಅದರಲ್ಲೂ ಕಿಟಕಿಗೆ ಹಾಕಲಾಗಿರುವ ಬಟ್ಟೆಗಳಿಗೆ. ಬಾಗಿಲಿಗೆ ಹಾಕಿದ ಕರ್ಟನ್ ಪರದೆಗಳಿಗೆ, ಸೋಫಾ, ಹೀಗೆ ಮನೆಯ ಮೂಲೆಯಲ್ಲಿ ಇದನ್ನು ಸ್ಪಲ್ಪ ಸ್ಪ್ರೇ ಮಾಡಿಕೊಂಡರೆ ಮನೆ 24 ಗಂಟೆಗಳ ಕಾಲ ಘಮ ಘಮ ಎನ್ನುವ ಸುವಾಸನೆಯಿಂದ ತುಂಬಿರಲಿದೆ.

ಅರ್ಧ ಕರ್ಪೂರವನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಪುಡಿ ಮಾಡಿ ಒಂದು ಚಿಕ್ಕ ಗ್ಲಾಸ್‌ಗೆ ಹಾಕಿಕೊಳ್ಳಿ. ಬಳಿಕ ಅದಕ್ಕೆ ಸ್ವಲ್ಪ ಕಮ್‌ಫರ್ಟ್ ಹನಿಗಳ ಹಾಕಿ ಚೆನ್ನಾಗಿ ಕಲಸಿ. ಅದರ ವಾಸನೆ ಸರಿಯಾಗದಿದ್ದರೆ ಅಥವಾ ಗಡಸು ಎನಿಸಿದರೆ ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ, ನಂತರ ಅದನ್ನು ಮನೆಯಲ್ಲಿ ಚಿಮುಕಿಸಿದರೆ ನಿಮ್ಮ ಮನೆ ಯಾವಾಗಲೂ ಘಮ ಘಮ ಎನ್ನುತ್ತಲೇ ಇರುತ್ತೆ. ಆದ್ರೆ ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಇದನ್ನು ಬಳಸಬೇಡಿ. ಇದು ಅವರಿಗೆ ಅಲರ್ಜಿ ಉಂಟು ಮಾಡಬಹುದು. ಆದ್ರೆ ಮನೆ ತುಂಬೆಲ್ಲಾ ಈ ಸುವಾಸನೆ ತುಂಬಿದ್ದರೆ ಮನೆಗೆ ಬಂದ ಅತಿಥಿಗಳು ಕೂಡ ಒಮ್ಮೆ ಆ ಕಡೆ ಗಮನಹರಿಸುವುದು ಖಚಿತ. If you do this, the house you live in will smell very fragrant – ತುಳು ಟೈಮ್ಸ್

ಇದನ್ನೂ ಓದಿ :2026 ರ ಸಾಲಿನ ಕಾನ್ಸ್‌ಟೇಬಲ್ ಹುದ್ದೆ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ…!

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/dcWSAiKNAZc?si=Dl6dRfk0ldeacqIZ

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page