ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನಿಮ್ಮ ಬಗ್ಗೆ ನೆಗೆಟಿವ್ ಮಾತುಗಳನ್ನು ಕೇಳಿ ಬೇಸರ ಆಗೋಗಿದ್ಯಾ? ಟ್ರಿಕ್ಸ್‌ ಲೈಫ್‌ ಚೇಂಜ್‌ ಮಾಡುತ್ತೆ!

ಲೈಫ್‌ ಸ್ಟೈಲ್‌: Tulu Times | ಮನುಷ್ಯ ಸಂಘ ಜೀವಿ. ಪ್ರತಿ ಸಂದರ್ಭ ಒಬ್ಬರ ಜೊತೆಗೆ ಇನ್ನೊಬ್ಬರು ಮಾತನಾಡಲೇಬೇಕು. ಇಲ್ಲದಿದ್ದರೆ, ಜೀವನ ನಿಂತ ನೀರಾಗಿರುತ್ತದೆ. ನಿಮಗೆ ಕಷ್ಟ ಬಂದಾಗ ಯಾರು ಜೊತೆಗೆ ಇರುವುದಿಲ್ಲ. ಅದಾಗ್ಯೂ, ಕೂಡ ನಿಮ್ಮ ಬಗ್ಗೆ ನೆಗೆಟಿವ್ ಮಾತನಾಡುತ್ತಾರಾ? ಹಾಗಾದ್ರೆ ಅಂತವರ ಬಾಯಿ ಮುಚ್ಚಿಸುವುದು ಹೇಗೆ ನೋಡೋಣ ಈ ಸ್ಟೋರಿಯಲ್ಲಿ…

ಜನರಿಗೆ ನಿಮ್ಮ ನೆಗೆಟಿವ್‌ ಅಂಶ ಅಷ್ಟೇ ಅಟ್ರ್ಯಾಕ್ಟ್‌ ಆಗೋದು ಯಾಕೆ ಗೊತ್ತಾ..?

ನಾವು ನಮ್ಮ ಜೀವನದಲ್ಲಿ ಸಾಕಷ್ಟು ಕಹಿ ಘಟನೆಗಳನ್ನು ಅನುಭವಿಸಿರುತ್ತೇವೆ. ಅದರಲ್ಲಿ ನೆಗೆಟಿವ್ ಟಾಕ್ಸ್ ಕೂಡ ಒಂದು. ಅಂದಹಾಗೆ, ನೆಗೆಟಿವ್ ಟಾಕ್ಸ್ ಅಂದ್ರೆ,ನಿಮ್ಮ ಬಗ್ಗೆ ಬಹಳ ನೆಗೆಟಿವ್ ಆಗಿ ಜನ ನಿಮ್ಮ ಹಿಂದಿನಿಂದ ಮಾತನಾಡಿಕೊಳ್ಳುವುದು. ನೀವು ಬಹಳ ಪ್ರಾಮಾಣಿಕರಾಗಿ ಇದ್ದೀರಿ ಅಂತ ಗೊತ್ತಿದ್ರೂ ಕೂಡ ನಿಮ್ಮ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಹೇಳಿ ನಿಮ್ಮ ವ್ಯಕ್ತಿತ್ವವನ್ನು ಹಾಳು ಮಾಡುವುದು. ಇದು ಸಾಕಷ್ಟು ಜನ ಮಾಡ್ತಾರೆ.

ಇಂತಹ ಕೆಲಸದಿಂದ ಜನ ನಿಮ್ಮ ಬಗ್ಗೆ ನೆಗೆಟಿವ್ ಆಗಿ ಮಾತನಾಡಲು ಶುರು ಮಾಡುತ್ತಾರೆ. ನಿಮಗೆ ಗೊತ್ತಿರುವ ಹಾಗೆ ಜನ ಒಳ್ಳೆಯದನ್ನು ಮಾತನಾಡುವುದಕ್ಕಿಂತ ಹೆಚ್ಚಾಗಿ ನೆಗೆಟಿವ್ ವಿಚಾರಗಳನ್ನು ಬಹಳ ಬೇಗ ಮನಸ್ಸಿಗೆ ತೆಗೆದುಕೊಂಡು ಅದನ್ನೇ ಮಾತನಾಡುತ್ತಾರೆ. ಸಾಕಷ್ಟು ಜನ ಎಲ್ಲಿ ನೆಗೆಟಿವ್ ಅಂಶ ಸಿಗುತ್ತೆ ಅಂತ ಕಾಯ್ತಾ ಇರುತ್ತಾರೆ. ತಕ್ಷಣ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿ ಜನರಿಗೆ ನಿಮ್ಮ ಬಗ್ಗೆ ಕೆಟ್ಟ ಭಾವನೆ ಮೂಡುವ ಹಾಗೆ ಮಾಡುವವರು ಇರುತ್ತಾರೆ.

ಹೆಣ್ಣು ಮಕ್ಕಳೇ ಈ  ರೀತಿ ತಲೆಕೆಡಿಸಿಕೊಳ್ಳದಿರಿ..!

ಬಹುತೇಕ ಜನ ಅದರಲ್ಲೂ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಾರೆ. ತನ್ನ ಬಗ್ಗೆ ನೆಗೆಟಿವ್ ಆಗಿ ಮಾತುಗಳು ಕೇಳಿ ಬರುತ್ತಿದೆ ಅಂದ ತಕ್ಷಣ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಮನಸ್ಸಿಗೆ ಬೇಸರ ಮಾಡಿಕೊಳ್ಳುತ್ತಾರೆ. ತಾನು ಏನೂ ಕೂಡ ತಪ್ಪು ಮಾಡಿಲ್ಲ ಅಂದ್ರು ಕೂಡ ಜನ ಹೀಗೆ ಮಾತನಾಡಿಕೊಳ್ಳುತ್ತಾರೆ ಅಂತ ಹೆಣ್ಣು ಮಕ್ಕಳು ನೊಂದುಕೊಂಡು ಬಿಡುತ್ತಾರೆ.

ನಿಮ್ಮ ಬಗ್ಗೆ ನೆಗೆಟಿವ್ ಆಗಿ ಮಾತನಾಡುವ ಜನರ ಜೊತೆಗೆ ನೀವು ಹೆಚ್ಚಾಗಿ ಮಾತನಾಡದಿರಿ. ನಿಮ್ಮ ಮುಖಭಾವ ಯಾವತ್ತೂ ಕೂಡ ಪಾಸಿಟಿವ್ ಆಗಿರಲಿ. ಯಾವುದನ್ನು ಕೂಡ ಮನಸ್ಸಿಗೆ ಹಂಚಿಕೊಳ್ಳದೆ ಗಟ್ಟಿಯಾದ ಮನಸ್ಸಿನಿಂದ ಜೀವನವನ್ನು ಸಾಗಿಸಿ. ನಿಮ್ಮ ಬಗ್ಗೆ ನಿಮಗಷ್ಟೇ ಗೊತ್ತು! ನಿಮ್ಮ ಮಾನಸಿಕ ದೃಢತೆಯ ಬಗ್ಗೆ ನಿಮಗಷ್ಟೇ ಗೊತ್ತು. ನಿಮ್ಮ ತಪ್ಪುಗಳಿದ್ದರೂ ಕೂಡ ಆ ತಪ್ಪುಗಳನ್ನು ತಿದ್ದುಕೊಂಡು ಗಾಸಿಪ್ ಗಳಿಗೆ ಗುಡ್ ಬೈ ಹೇಳಿ.

ಬಹಳಷ್ಟು ಹೆಣ್ಣು ಮಕ್ಕಳು ತನ್ನ ಬಗ್ಗೆ ನೆಗೆಟಿವ್ ಆಗಿ ಮಾತನಾಡುತ್ತಾರೆ ಅಂದ ತಕ್ಷಣ ಕಣ್ಣೀರು ಸುರಿಸುತ್ತಾರೆ. ಮಾನಸಿಕವಾಗಿ ಕುಗ್ಗಿ ಬೇಸತ್ತು ಹೋಗುತ್ತಾರೆ. ಇನ್ನು ಹೆಚ್ಚಿನವರು ತನ್ನ ಜೀವವನ್ನೇ ಕಳೆದುಕೊಳ್ಳುತ್ತಾರೆ. ನನ್ನ ಬಗ್ಗೆ ಈ ತರಹ ಮಾತನಾಡುತ್ತಿದ್ದಾರೆ ಅಂತ ಹೇಳಿಕೊಂಡು ತನ್ನ ಉಸಿರನ್ನೇ ನಿಲ್ಲಿಸುತ್ತಾರೆ.ಇಂಥವರು ಧೈರ್ಯ ಕೆಡದೆ ಜೀವನದಲ್ಲಿ ಮುನ್ನಡೆಯಬೇಕು. ಇಲ್ಲವಾದಲ್ಲಿ ಇಂತಹ ಸಣ್ಣಪುಟ್ಟ ನೆಗೆಟಿವ್ ಟಾಕ್ಸ್ ಗಳಿಗೆ ನೀವು ಇನ್ನಷ್ಟು ಬಲಿಯಾಗುತ್ತೀರಿ. ಸೋ ಡೋಂಟ್ ವರಿ.

Are you tired of hearing negative talks about yourself? These tricks will change your life!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page