ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ.. ಗಿಲ್ಲಿ.. ರಘು ಹವಾ ಜೋರು !

ಬಿಗ್‌ ಬಾಸ್:‌ Tulu Times | ಬಿಗ್ ಬಾಸ್ ಸೀಸನ್ 12 ರಲ್ಲಿ ಇರುವಂತಹ ಸ್ಪರ್ಧಿಗಳು ಎಲ್ಲರೂ ಕೂಡ ಬಹಳ ಅದ್ಭುತವಾಗಿ ಆಟ ಆಡುತ್ತಿದ್ದಾರೆ. ಅದರಲ್ಲಿ ಈ ಬಾರಿ ಹಲವಾರು ಊಹಿಸಲಾಗದ ವಿಚಾರಗಳು  ಇವೆ. ಸಾಕಷ್ಟು ಜನ ಬಿಗ್ ಬಾಸ್ ಮನೆಯಲ್ಲಿ ರಘು, ರಕ್ಷಿತಾ, ಗಿಲ್ಲಿ ಅವರು ಫೈನಲ್ ತನಕ ಬರ್ತಾರೆ ಅಂತ ಹೇಳುತ್ತಾ ಇದ್ದಾರೆ. ಅಷ್ಟಕ್ಕೂ ಈ ಮೂವರು ಬಿಗ್ ಬಾಸ್ ಮನೆಯಲ್ಲಿ ಹೇಗೆ ಆಟ ಆಡುತ್ತಿದ್ದಾರೆ ನೋಡೋಣ..

ಬಿಗ್ ಬಾಸ್ ಸೀಸನ್ 12 ರಲ್ಲಿ ಎಲ್ಲಾ ಸ್ಪರ್ಧಿಗಳು ಬಹಳ ಉತ್ಸುಕರಾಗಿ ಆಟ ಆಡುತ್ತಿದ್ದಾರೆ. ಈ ಬಾರಿಯ ಬಿಗ್ ಬಾಸ್ ಅನ್ನು ರಘು ರಕ್ಷಿತಾ, ಗಿಲ್ಲಿ ಈ ಮೂವರಲ್ಲಿ ಒಬ್ಬರು ಖಂಡಿತವಾಗಲೂ ಕಪ್ ಗೆಲ್ತಾರೆ ಅಂತ ಹೇಳುತ್ತಾ ಇದ್ದಾರೆ. ಜನಗಳು ಈಗಾಗಲೇ ಅಂದುಕೊಂಡಂತೆ ಗಿಲ್ಲಿಗೆ ಮೊಟ್ಟಮೊದಲ ಸ್ಥಾನವನ್ನು ನೀಡಿದ್ದಾರೆ. ಬಿಗ್ ಬಾಸ್ ಮನೆಯ ಒಳಗಡೆ ಗಿಲ್ಲಿಯಿಂದ ಮನೆಯವರಿಗೆಲ್ಲರಿಗೂ ಕೂಡ ಕಿರಿಕಿರಿ ಅನುಭವ ಆಗಿದೆ. ಆದರೆ  ಆಚೆ ಗಿಲ್ಲಿಯ ನಡವಳಿಕೆ ಜನರಿಗೆ ಇಷ್ಟ ಆಗುತ್ತಿದೆ. ಕಿಚ್ಚ ಸುದೀಪ್ ಅವರು ಕೂಡ ಗಿಲ್ಲಿ ನಟನಿಗೆ ಏನು ಕೂಡ ಹೇಳುವುದಿಲ್ಲ. ಹಾಗಾಗಿ ಜನ ಗಿಲ್ಲಿ ನಟನೆ ಗೆಲ್ತಾರೆ ಅಂತ ಈಗಾಗಲೇ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಒಂದು ಕಡೆ ಗಿಲ್ಲಿ ನಟ ಗೆಲ್ತಾರೆ ಅಂತ ಹೇಳಿದರೆ ಇನ್ನೊಂದು ಕಡೆ ರಕ್ಷಿತಾ ಶೆಟ್ಟಿ ಜನರ ಮನಸ್ಸನ್ನು ಗೆಲ್ಲುತ್ತಿದ್ದಾಳೆ. ಈಗ ಅತಿ ಚಿಕ್ಕ ಹುಡುಗಿಯಾಗಿ ಬಿಗ್ ಬಾಸ್ ಮನೆಯಲ್ಲಿ ಇರುವಂತಹ ರಕ್ಷಿತಾ ಶೆಟ್ಟಿ, ಡೈರೆಕ್ಟ್ ಆಗಿ ಮಾತನಾಡಿ ಪ್ರಾಮಾಣಿಕಳಾಗಿ ಆಟ ಆಡುತ್ತಿದ್ದಾಳೆ ಅಂತ ಜನರ ಮನಸ್ಸಲ್ಲಿದೆ. ಆಕೆಯ ಮುಗ್ಧತೆ ಜೊತೆಗೆ ಆಕೆಯ ಮಾತು ಜನರಿಗೆ ಲೈಕ್ ಆಗುತ್ತಿದೆ. ಇದರಿಂದ ಕರಾವಳಿ ಅಲ್ಲದೆ, ಇಡೀ ಕರ್ನಾಟಕದ ಜನತೆ ರಕ್ಷಿತಾ ಶೆಟ್ಟಿಯ ಪರವಾಗಿ ಇದ್ದಾರೆ. ಈಕೆಯನ್ನು ಟಾಪ್ ಸ್ಥಾನದಲ್ಲಿ ನೋಡಲು ಜನ ಲೈಕ್ ಮಾಡುತ್ತಿದ್ದಾರೆ. ಆದರೆ‌, ರಕ್ಷಿತಾ ಶೆಟ್ಟಿ, ಕೆಲವೊಮ್ಮೆ ಮನೆ ಒಳಗಡೆ ಬಹಳ ಕಿರಿಕಿರಿ ಅನುಭವ ನೀಡುತ್ತಿದ್ದಾರೆ.

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಬಂದಂತಹ ರಘು ಜನರ ಮನಸ್ಸು ಗೆಲ್ಲುತ್ತಿದ್ದಾರೆ. ಕ್ಯಾಪ್ಟನ್ ಆಗಿ ತನ್ನ ಸ್ಥಾನವನ್ನು ಭದ್ರವಾಗಿ ಇಟ್ಟುಕೊಂಡಿದ್ದ ಇವರು ಆಟಗಳಲ್ಲಿ ಕೂಡ ಬಹಳ ಜಾಗರೂಕತೆಯಿಂದ ಆಟ ಆಡುತ್ತಿದ್ದರು. ಇವರ ವ್ಯಕ್ತಿತ್ವ ಜನರಿಗೆ ಇಷ್ಟವಾಗಿದೆ. ಮನೆಯ ಹೊರಗಡೆ ಬಹಳ ಕೋಪಿಷ್ಟರಾಗಿದ್ದ ರಘು ಬಿಗ್ ಬಾಸ್ ಮನೆಯ ಒಳಗಡೆ ಬಂದ ನಂತರ ಕೊಂಚ ಶಾಂತತೆಯಿಂದ ಇದ್ದಾರೆ.

ಇನ್ನು ಬಿಗ್ ಬಾಸ್ ನೋಡುತ್ತಿರುವಂತಹ ಕರ್ನಾಟಕದ ಜನತೆ ಈ ಮೂವರು ಫೈನಲ್ ತನಕ ಇದ್ದೇ ಇರುತ್ತಾರೆ ಅಂತ ಹೇಳುತ್ತಿದ್ದಾರೆ. ಇನ್ನು ಕಳೆದ ವಾರ ಜಾನ್ವಿ ಮನೆಯಿಂದ ಹೊರ ನಡೆದಿದ್ದಾರೆ. ಇನ್ನು ಮುಂದಿನ ವಾರ  ಯಾರು ಮನೆಯಿಂದ  ಆಚೆ ಬರುತ್ತಾರೆ ಅನ್ನೋದನ್ನು ಕಾದುನೋಡಬೇಕು.

The atmosphere in the Bigg Boss house is tense, Rakshita.. Ghilli.. Raghu- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page