ಬೆಂಗಳೂರು : Tulu Times | ಇ-ಸ್ವತ್ತು ಎಂಬುದು ಕರ್ನಾಟಕ ಸರ್ಕಾರದ ಗ್ರಾಮೀಣ ಸ್ಥಳೀಯ ಸಂಸ್ಥೆಗಳು (ಪಂಚಾಯತ್ ರಾಜ್ ಇಲಾಖೆ) ಪರಿಚಯಿಸಿದ ಆನ್‌ಲೈನ್ ಭೂ ಮತ್ತು ಆಸ್ತಿ ದಾಖಲೆ ವ್ಯವಸ್ಥೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮನೆ, ಜಾಗ, ಕಟ್ಟಡ, ವ್ಯಾಪಾರಿಕ ಆಸ್ತಿಗಳ ಸಂಬಂಧಿತ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸಲು ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಮಾಹಿತಿಯನ್ನು ಒದಗಿಸಲು ಈ ಪೋರ್ಟಲ್ ಬಳಸಲಾಗುತ್ತದೆ.
ಇ-ಸ್ವತ್ತಿನ ಮುಖ್ಯ ಉದ್ದೇಶಗಳು ; ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಆಸ್ತಿಗಳ ಪಾರದರ್ಶಕ ದಾಖಲಾತಿ, ಜಾಗ ಅಥವಾ ಮನೆಗೆ ಸಂಬಂಧಿಸಿದ ಕಾನೂನುಬದ್ಧ ದಾಖಲೆಗಳನ್ನು ಡಿಜಿಟಲ್‌ವಾಗಿ ಲಭ್ಯ ಮಾಡುವುದು. ಆಸ್ತಿ ತೆರಿಗೆ, ಕಟ್ಟಡ ಅನುಮತಿ, ಹೆಸರು ಬದಲಾವಣೆ ಪ್ರಕ್ರಿಯೆಗಳನ್ನು ಸರಳ ಮತ್ತು ಆನ್‌ಲೈನ್ ಮಾಡುವುದು, ನಕಲಿ ದಾಖಲೆಗಳು, ಭೂ ಮರುಪಾವತಿ ಗೊಂದಲಗಳನ್ನು ತಡೆಗಟ್ಟುವುದು, ಗ್ರಾಮೀಣ ಆಸ್ತಿ ವ್ಯವಹಾರಗಳಿಗೆ ಸುರಕ್ಷಿತ ದಾಖಲೆ ವ್ಯವಸ್ಥೆ ನಿರ್ಮಿಸುವುದಾಗಿದೆ.
ಆದರೆ ಇದೀಗ, ಗ್ರಾಮ ಪಂಚಾಯಿತಿಗಳ ಸಂಪನ್ಮೂಲ ಹೆಚ್ಚಳದ ಉದ್ದೇಶದೊಂದಿಗೆ ಅಕ್ರಮ ಲೇಔಟ್ ಗಳ ನಿವೇಶನಗಳಿಗೆ ಇ-ಖಾತಾ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇ-ಸ್ವತ್ತು 2.0 ತಂತ್ರಾಂಶ ಅಭಿವೃದ್ಧಿಪಡಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸೌಧದಲ್ಲಿ ಚಾಲನೆ ನೀಡಲಾಯಿತು. ಗ್ರಾಮ ಠಾಣಾಗಳ ಹೊರೆಗೆ ಭೂ ಪರಿವರ್ತನೆ ಮಾಡಿಸದೆ ಮನೆ ನಿರ್ಮಿಸಿಕೊಂಡವರಿಗೆ ಕುಡಿಯುವ ನೀರು, ಬೀದಿ ದೀಪ, ರಸ್ತೆ ಚರಂಡಿ ಇತರ ಸೌಲಭ್ಯಗಳನ್ನು ನೀಡಲಾಗಿದೆ. ಇದರಿಂದ ಗ್ರಾಮ ಪಂಚಾಯಿತಿಗಳಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಹೀಗಾಗಿ ತೆರಿಗೆ ವ್ಯಾಪ್ತಿಗೆ ತರಲು ಸರ್ಕಾರ ನಿಯಮ ರೂಪಿಸಿದೆ ಹೊಸ ಆಸ್ತಿಗಳ ತೆರಿಗೆ ವ್ಯಾಪ್ತಿಗೆ ತರಲಾಗಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ರಮ ನಿವೇಶನಗಳಿಂದ ಸಕ್ರಮವಾಗಲಿದ್ದು, ರಾಜ್ಯದ್ಯಂತ 90 ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ ಅಧಿಕೃತ ಮಾನ್ಯತೆ ಸಿಗಲಿದೆ. ಅರ್ಜಿ ಸಲ್ಲಿಸಿದ 15 ದಿನದಲ್ಲಿ ಇ-ಖಾತಾ ಸಿಗಲಿದೆ ಹಾಗೂ ತಂತ್ರಾಂಶದ ಮೂಲಕ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕರ ಆಸ್ತಿಗಳಿಗೆ ಡಿಜಿಟಲ್ ಇ- ಸ್ವತ್ತು ಪ್ರಮಾಣ ಪತ್ರ ವಿತರಣೆ ಆರಂಭಿಸಲಾಗುವುದು. ಆಸ್ತಿ ಸಂಬಂಧಿತ ಸೇವೆಗಳನ್ನು ಪಾರದರ್ಶಕ ಮತ್ತು ತ್ವರಿತವಾಗಿ ಒದಗಿಸಲು ಉದ್ದೇಶಿಸಲಾಗಿದೆ. ತಂತ್ರಾಂಶದ ಮೂಲಕ ಇ-ಸ್ವತ್ತು ಪಡೆಯಲು ಎದುರಾಗುವ ಆಡಳಿತಾತ್ಮಕ ಮತ್ತು ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ನೀಡಲು ಸಹಾಯವಾಣಿ 94834 76000 ಸ್ಥಾಪಿಸಲಾಗಿದೆ. Illegal plots under Gram Panchayat jurisdiction will be legalized: E-Swathu – ತುಳು ಟೈಮ್ಸ್
ಇದನ್ನೂ ಓದಿ : ದಿತ್ವಾ ಚಂಡಮಾರುತ ಹಿನ್ನೆಲೆ ಚೆನ್ನೈಗೆ ರೆಡ್ ಅಲರ್ಟ್ ಘೋಷಣೆ..!
==========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/yek8Z0SdHr4?si=NcsSSQN6v83BB_Eh











