ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಮದುವೆಯಲ್ಲಿ ನೀವು‌ ಥೇಟ್‌ ಅಪ್ಸರೆಯಂತೆ ಕಾಣುವ ಆಸೆನಾ..? ಈ ಸ್ಟೋರಿ ನಿಮಗಾಗಿ !

ಲೈಫ್ ಸ್ಟೈಲ್:‌ Tulu Times | ನಾವು ಯಾವುದೇ ಮದುವೆ ಕಾರ್ಯಕ್ರಮಕ್ಕೆ ಹೋಗಬೇಕಾದ್ರೆ, ಒಂದು ತಯಾರಿಯನ್ನು ಮಾಡಿಕೊಂಡಿರುತ್ತೇವೆ. ಯಾವುದೇ ಪ್ರಿಪರೇಷನ್ ಇಲ್ಲದೆ ಪಂಕ್ಷನ್ ಗೆ  ಹೆಣ್ಣುಮಕ್ಕಳು ಕಾಲಿಡಲ್ಲ!  ಒಂದು ಸ್ವಲ್ಪವಾದರೂ ಮುಖಕ್ಕೆ ಮೇಕಪ್ ಹಚ್ಚಿಕೊಂಡು ಹೆಣ್ಣು ಮಕ್ಕಳು ಕಾರ್ಯಕ್ರಮಗಳಿಗೆ ತೆರಳುತೇವೆ. ಯಾವುದನ್ನು ಮರೆತರೂ ಮೇಕಪ್ ಮಾತ್ರ ಮರೆಯೋದಿಲ್ಲ! ಹಾಗಾದ್ರೆ ನಮ್ಮ ಹೆಣ್ಣು ಮಕ್ಕಳು ಸಮಾರಂಭಗಳಿಗೆ ಅಥವಾ ಮದುವೆ ಕಾರ್ಯಗಳಿಗೆ  ತೆರಳಬೇಕಾದ್ರೆ ಹೇಗೆ ರೆಡಿ ಆದರೆ ಚಂದ..? ನೋಡೋಣ ಈ ಸ್ಟೋರಿಯಲ್ಲಿ..

ಮದುವೆಯಲ್ಲಿ ನೀವೆ ಸೆಂಟರ್‌ ಆಫ್‌ ಅ‌ಟ್ರ್ಯಾ ಕ್ಷನ್‌ ಆಗೋದು ಹೇಗೆ..?

ಸಾಮಾನ್ಯವಾಗಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮದುವೆಯ ದಿನ ಹೆಣ್ಣು ಮಕ್ಕಳು ತುಂಬಾನೇ ಬ್ಯೂಟಿಫುಲ್ ಆಗಿ ರೆಡಿ ಆಗಿರುತ್ತಾರೆ. ಅದರಲ್ಲೂ ಮದುವೆಯಾಗುವ ಹುಡುಗಿಗಿಂತ ಆಕೆಯ ಅಕ್ಕ-ತಂಗಿ ಅದ್ಭುತವಾಗಿ ರೆಡಿಯಾಗುತ್ತಾರೆ. ಇದು ಎಲ್ಲಾ ಕಡೆನೂ ಒಂದೇ ರೀತಿಯಾಗಿರುತ್ತದೆ. ಮದುವೆಗೆ ತಯಾರಿಯನ್ನು ಎರಡು ತಿಂಗಳಿನಿಂದಲೇ ತಯಾರಿಯನ್ನು ಮಾಡಿಕೊಂಡಿರುತ್ತೇವೆ.

ಮದುವೆ ಅನ್ನೋದು ಒಂದೇ ಸಲ ಹಾಗಾಗಿ ಮದುವೆಯ ದಿನ ನಾವು ಚಂದವಾಗಿ ಕಾಣಬೇಕು ಅಂತ ನಮ್ಮೆಲ್ಲರ ಆಶಯ ಕೂಡ. ಅದ್ರಲ್ಲೂ ಮದುವೆಯಾಗುವ ಹೆಣ್ಣು ಮಗಳು ಥೇಟ್ ಅಪ್ಸರೆಯಂತೆ ಕಾಣುವ ಹಾಗೆ ಆಕೆಯನ್ನು ಶೃಂಗಾರ ಮಾಡಿರುತ್ತಾರೆ.  ಆಕೆಯ ಫ್ಯಾಮಿಲಿ ಕುಟುಂಬಸ್ಥರು ಎಲ್ಲರೂ ಕೂಡ ಸಿಂಪಲ್ ಆಗಿ ತುಂಬಾನೇ ಬ್ಯೂಟಿಫುಲ್ ಆಗಿ ಕಾಣುವ ಹಾಗೆ ತಮ್ಮನ್ನು ತಾವು ಅಲಂಕಾರ ಮಾಡಿಕೊಂಡಿರುತ್ತಾರೆ.

ಮೊದಲು ನಿಮ್ಮ ಮುಖದ ಆಕಾರವನ್ನು ತಿಳಿದುಕೊಳ್ಳಿ. ಹಾಗೆ ನಿಮ್ಮ ಮುಖದ ಆಕಾರಕ್ಕೆ ಸರಿ ಹೊಂದುವ ರೀತಿ ನಿಮ್ಮ ಮುಖದ ಮೇಕಪ್ ಇರಲಿ. ಮುಖಕ್ಕೆ ಫೌಂಡೇಶನ್ ಕ್ರೀಮ್ ಹಚ್ಚುವಾಗ  ನಿಮ್ಮ ಮುಖವನ್ನು ಬಹಳ ರಬ್ ಮಾಡಬೇಡಿ. ನಿಮ್ಮ ಮುಖವನ್ನು ನೀವು ಸಿಂಪಲ್ ಆಗಿ ಮೇಕಪ್ ಮಾಡಿಕೊಂಡು ರೆಡಿಯಾದರೆ ನಿಮ್ಮಷ್ಟು ಬ್ಯೂಟಿಫುಲ್ ಆಗಿ ಕಾಣುವವರು ಬೇರೆ ಯಾರು ಇಲ್ಲ! ಇಡೀ ಮದುವೆಯಲ್ಲಿ ನೀವೇ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರ್ತೀರಿ.

ಚಂದ ಕಾಣಬೇಕು ಅಂತ ಕೈಗೆ ಸಿಕ್ಕ ಕ್ರೀಂ ಮುಖಕ್ಕೆ ಹಚ್ಚಬೇಡಿ..!

ನೀವು ನಿಮ್ಮ ಮುಖಕ್ಕೆ ಹಚ್ಚುವಂತಹ ಕ್ರೀಮ್ ಗಳ ಬಗ್ಗೆ ಜಾಗರೂಕರಾಗಿರಿ. ಮದುವೆ ಇದೆ ಅಂದ ತಕ್ಷಣ ಮದುವೆಗೆ ಎರಡು ದಿವಸದ ಹಿಂದಿನಿಂದ ಮುಖಕ್ಕೆ ಕ್ರೀಮ್ಗಳನ್ನು ಬಳಸುವುದು ಒಳ್ಳೆಯದಲ್ಲ. ನಿಮ್ಮ ಸ್ಕಿನ್ ಅನ್ನು ಚರ್ಮದ ಡಾಕ್ಟರ್ ಜೊತೆ ಪರಿಶೀಲನೆ ಮಾಡದೆ ಮುಖಕ್ಕೆ ಕ್ರೀಮ್ಗಳನ್ನು ಹಚ್ಚುವುದು ಸೂಕ್ತವಲ್ಲ. ಇದರಿಂದ ನಿಮ್ಮ ಮುಖದ ಅಂತ ಕೆಡುತ್ತದೆ. ಮುಂದಿನ ದಿನಗಳಲ್ಲಿ ನಿಮ್ಮ ಮುಖದಲ್ಲಿ ಅಲರ್ಜಿ ಆಗುವಂತಹ ಸಾಧ್ಯತೆ ಇದೆ.

ಹಾಗಾಗಿ, ನೀವು ಮದುವೆಗೆ ರೆಡಿಯಾಗುತ್ತೀರಿ ಅಂದಾಗ ನೀವು ಸಲಹೆಯನ್ನು ಕೇಳುವಂತಹ ಅಥವಾ ನೀವು ಬ್ಯೂಟಿ ಪಾರ್ಲರ್ ಅವರನ್ನು ಮನೆಗೆ ಕರೆಸಿಕೊಂಡರೆ ಆಕೆಗೆ ಸಂಪೂರ್ಣವಾಗಿ ನಿಮ್ಮ ಚರ್ಮದ ಬಗ್ಗೆ ಮಾಹಿತಿ ನೀಡಿ. ನಂತರ ಅವರು ಯಾವ ಕ್ರೀಮ್ ಬಳಸುತ್ತಾರೆ ಎನ್ನುವುದನ್ನು ಪರಿಶೀಲನೆ ಮಾಡಿಕೊಳ್ಳಿ.. ನಾನು ಚಂದ ಕಾಣಬೇಕು ಅಂತ ನಿಮ್ಮ ಚರ್ಮಕ್ಕೆ  ಸಿಕ್ಕ ಸಿಕ್ಕ ಕ್ರೀಮ್ಗಳನ್ನು ಬಳಸುವುದು ಬೇಡ. ಇದರಿಂದ ನಿಮ್ಮ ಮುಖ ಮುಂದಿನ ದಿನಗಳಲ್ಲಿ ಕೆಡಲು ಶುರುವಾಗುತ್ತದೆ. ಒಂದು ದಿನಕ್ಕೋಸ್ಕರ ನಿಮ್ಮ ಮುಖವನ್ನು ಹಾಳು ಮಾಡಿಕೊಳ್ಳದಿರಿ.

ಜುಮ್ಕಿಗಳನ್ನು ಧರಿಸೋವಾಗ ಮುಖದ ಶೇಪ್‌ ನೋಡ್ಕೊಳ್ಳಿ!

ಇನ್ನು ನಿಮ್ಮ ಮುಖಕ್ಕೆ ಸೂಟ್ ಆಗುವಂತಹ ಕಿವಿಯೋಲೆಗಳನ್ನು ಧರಿಸಿ. ಕೆಲವರ ಮುಖ ದುಂಡಗೆ ಇರುತ್ತದೆ, ಅಂತವರು ಜುಮ್ಕಗಳನ್ನು ಧರಿಸಿದರೆ ಅವರ ಮುಖದ ಅಂದ ಹೆಚ್ಚುತ್ತದೆ ಅವರು ತುಂಬಾನೇ ಬ್ಯೂಟಿಫುಲ್ ಆಗಿ ಕಾಣುತ್ತಾರೆ. ಹಾಗೆ ಕೆಲವರ ಮುಖ ಕೋಲಿನಂತೆ ಉದ್ದವಿರುತ್ತದೆ, ಅಂತವರು ದುಂಡಗಿನ ಜುಮುಕಿ ಗಳನ್ನು ಧರಿಸಿ. ಇನ್ನು ಮದುವೆಯಲ್ಲಿ ಸಿಂಪಲ್ಲಾಗಿ ರೆಡಿಯಾಗಬೇಕಾದರೆ ನೀವು ಸಿಂಪಲ್ ಆದಂತಹ ಸೀರೆಯನ್ನೇ ಧರಿಸಿ ಅದರಲ್ಲೂ ತುಂಬಾನೇ ಕ್ವಾಲಿಟಿ ಇರುವಂತಹ ಪ್ಲೇನ್ ಸಾರಿಗಳನ್ನು  ಧರಿಸಿ.

ಬಾರ್ಡರ್ ಸಣ್ಣದಾಗಿ ಇರುವಂತಹ ಸೀರೆಗಳು ಇಂದಿನ ಯುವತಿಯರ ಫೇವರೆಟ್! ಹಾಗಾಗಿ  ಪ್ಲೈನ್‌  ಇರುವಂತಹ ಸೀರೆಗಳನ್ನು ಧರಿಸಿ. ಅದಕ್ಕೆ ಪ್ಲೈನ್ ಇರುವಂತಹ ಗಾಜಿನ ಬಳೆಯನ್ನು ಧರಿಸಿದರೆ ನೀವು ತುಂಬಾನೇ ಬ್ಯೂಟಿಫುಲ್ ಆಗಿ ಕಾಣುತ್ತೀರಿ. ಬಹಳಷ್ಟು ಜನ ಹೆಣ್ಣು ಮಕ್ಕಳು ತನ್ನ ಮುಖಕ್ಕೆ ಹಾಗೂ ತನ್ನ ದೇಹಕ್ಕೆ ಹೆಚ್ಚಿನ ಆಭರಣಗಳನ್ನು ಧರಿಸಿ ನೋಡೋಕೆ ಜಾಸ್ತಿ ಆಯ್ತು ಅನ್ನುವಷ್ಟು ಡಿಫ್ರೆಂಟ್ ಆಗಿ ರೆಡಿ ಆಗ್ತಾರೆ. ಇದೆಲ್ಲ ನಿಜಕ್ಕೂ ಅಷ್ಟೆಲ್ಲ ಚಂದ ಅಂತ ಅನಿಸುವುದಿಲ್ಲ. ಇನ್ನು ನಿಮ್ಮ ಭಾವನೆಗೆ ಬಿಟ್ಟಿದ್ದು.‌ ನಿಮಗೆ ಯಾವುದು ಇಷ್ಟವಾಗುತ್ತೋ ಅದೇ ರೀತಿ ರೆಡಿಯಾಗಿ!

Do you want to look like a nymph at your wedding? This story is for you!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page