ಬ್ರೇಕಿಂಗ್ ನ್ಯೂಸ್
ಕರ್ನಾಟಕ

2026 ರ ಸಾಲಿನ ಕಾನ್ಸ್‌ಟೇಬಲ್ ಹುದ್ದೆ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ…!

ಉದ್ಯೋಗ : Tulu Times | ಭಾರತದ ವಿವಿಧ ಪೊಲೀಸ್ ಇಲಾಖೆಗಳಲ್ಲಿ ಸಾರ್ವಜನಿಕರ ಸುರಕ್ಷತೆ, ಕಾನೂನು-ಸುವ್ಯವಸ್ಥೆ ಕಾಪಾಡಲು ಕಾನ್ಸ್‌ಟೇಬಲ್‌ಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಪ್ರತಿವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗಾಗಿ ನೇಮಕಾತಿ ಪ್ರಕಟಣೆಗಳನ್ನು ಹೊರಡಿಸುತ್ತವೆ. ಈ ಹುದ್ದೆಗಳು ಯುವಕರಲ್ಲಿ ಹೆಚ್ಚಿನ ಆಸಕ್ತಿಯನ್ನು ಮೂಡಿಸುತ್ತವೆ, ಏಕೆಂದರೆ ಇದು ಗೌರವದ ಜೊತೆಗೆ ಸೇವಾ ಮನೋಭಾವಕ್ಕೆ ಅವಕಾಶ ನೀಡುವ ವೃತ್ತಿ.

ಇದೀಗ ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಸಿಬ್ಬಂದಿ ಆಯ್ಕೆ ಆಯೋಗ (SSC) ಬೃಹತ್ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. 2026 ರ ಸಾಲಿನ ಕಾನ್ಸ್‌ಟೇಬಲ್ (GD) ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಈ ಅಧಿಸೂಚನೆಯಡಿಯಲ್ಲಿ ಒಟ್ಟು 25,487 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳನ್ನು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPFs), ಅಸ್ಸಾಂ ರೈಫಲ್ಸ್, ಸೆಕ್ರೆಟರಿಯೇಟ್ ಸೆಕ್ಯುರಿಟಿ ಫೋರ್ಸ್ (SSF) ಇತ್ಯಾದಿಗಳಲ್ಲಿ ಭರ್ತಿ ಮಾಡಲಾಗುತ್ತದೆ.

ಅಭ್ಯರ್ಥಿಗಳು 18 ರಿಂದ 23 ವರ್ಷ ವಯೋಮಿತಿಯಲ್ಲಿರಬೇಕು ;
10ನೇ ತರಗತಿ ವಿದ್ಯಾರ್ಹತೆ ಹೊಂದಿರುವ ಯಾವುದೇ ಅಭ್ಯರ್ಥಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಅಭ್ಯರ್ಥಿಗಳ ವಯಸ್ಸು ಜನವರಿ 1, 2026 ಕ್ಕೆ 18 ರಿಂದ 23 ವರ್ಷ ವಯಸ್ಸಿನವರಾಗಿರಬೇಕು. ಅಂದರೆ, ಅವರು ಜನವರಿ 2, 2003 ರಿಂದ ಜನವರಿ 1, 2008 ರ ನಡುವೆ ಜನಿಸಿರಬೇಕು. ಈ ಅರ್ಹತೆಗಳನ್ನು ಹೊಂದಿರುವವರು 2025 ರ ಡಿಸೆಂಬರ್ 31ವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅರ್ಜಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಅರ್ಜಿ ಶುಲ್ಕವಾಗಿ ರೂ. 100 ಪಾವತಿಸಬೇಕು. ಎಸ್‌ಸಿ, ಎಸ್‌ಟಿ ಮತ್ತು ಮಾಜಿ ಸೈನಿಕರಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಅಂತಿಮ ಆಯ್ಕೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಇ) ಆನ್‌ಲೈನ್ ಲಿಖಿತ ಪರೀಕ್ಷೆಗಳು, ಪಿಇಟಿ/ಪಿಎಸ್‌ಟಿ, ವೈದ್ಯಕೀಯ ಪರೀಕ್ಷೆ, ದಾಖಲೆ ಪರಿಶೀಲನೆಯನ್ನು ಆಧರಿಸಿರುತ್ತದೆ.
ಕಾನ್ಸ್‌ಟೇಬಲ್ ನೇಮಕಾತಿ ಸಾಮಾನ್ಯವಾಗಿ, ಸಾಮಾನ್ಯ ಜ್ಞಾನ, ಭಾರತೀಯ ಸಂವಿಧಾನ, ಪ್ರಸ್ತುತ ಘಟನೆಗಳು, ಗಣಿತ & ಲಾಜಿಕಲ್ ರೀಸನಿಂಗ್, ಕನ್ನಡ/ಇಂಗ್ಲಿಷ್ ಭಾಷಾ ಜ್ಞಾನ, ದೈಹಿಕ ಸಾಮರ್ಥ್ಯ ಪರೀಕ್ಷೆ (PST/PET), ವೈದ್ಯಕೀಯ ಪರೀಕ್ಷೆ, (ದೃಷ್ಟಿ, ಆರೋಗ್ಯ ಸ್ಥಿತಿ, ಫಿಟ್ನೆಸ್ ಪರಿಶೀಲನೆ), ದಾಖಲೆ ಪರಿಶೀಲನೆ, ಅಂಕಪಟ್ಟಿ, ಜಾತಿ ಪ್ರಮಾಣಪತ್ರ, ಸ್ಥಳೀಯತೆ, DOB ಇತ್ಯಾದಿಗಳ ಹಂತಗಳಲ್ಲಿ ನಡೆಯುತ್ತದೆ.ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುವವರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಅಪರಾಧ ತನಿಖೆಗೆ ಸಹಕಾರ, ಟ್ರಾಫಿಕ್ ನಿಯಂತ್ರಣೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭದ್ರತೆ, ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯ ಮಾಡುವುದು ಮುಖ್ಯ ಕರ್ತವ್ಯವಾಗಿದೆ.

Applications are invited from eligible candidates for the recruitment of Constable posts for the year 2026 – ತುಳು ಟೈಮ್ಸ್

ಇದನ್ನೂ ಓದಿ :ಡಿಸೆಂಬರ್ 7 ಕ್ಕೆ‌ ನಡೆಯಲಿದೆ ಟಿಇಟಿ ಪರೀಕ್ಷೆ‌ : ಕನಿಷ್ಠ ಅರ್ಹತೆಯೊಂದಿಗೆ ನಿಗದಿ…!

========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/yek8Z0SdHr4?si=NcsSSQN6v83BB_Eh

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page