Kollam (Kerala): ಬಾವಿಗೆ ಹಾರಿದ ಯುವತಿಯನ್ನು ರಕ್ಷಿಸುವ ಕಾರ್ಯಾಚರಣೆಯ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ ಮೂವರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಕೇರಳದ ಕೊಲ್ಲಂನ ನೆಡುವತೂರಿನಲ್ಲಿ ಈ ಅವಘಡ ನಡೆದಿದೆ.
ನೆಡುವತೂರಿನ ಅರ್ಚನಾ (33) ಬಾವಿಗೆ ಹಾರಿದ ಮಹಿಳೆ. ಈಕೆಯನ್ನ ರಕ್ಷಣೆ ಮಾಡಲು ಹೋದಾಗ ದುರಂತ ನಡೆದಿದೆ. ಮೃತರನ್ನು ಕೊಟ್ಟಾರಕ್ಕರ ಅಗ್ನಿಶಾಮಕ ದಳದ ಸಿಬ್ಬಂದಿ ಅಟ್ಟಿಂಗಲ್ ಮೂಲದ ಸೋನಿ ಎಸ್. ಕುಮಾರ್ (36), ಯುವತಿಯ ಸ್ನೇಹಿತ ಶಿವಕೃಷ್ಣನ್ (22) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಮದುವೆಯಾಗಿ ಮೂರು ಮಕ್ಕಳ ತಾಯಿಯಾಗಿರುವ ಅರ್ಚನಾಗೆ ಶಿವಕೃಷ್ಣನ್ ಜೊತೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ರಾತ್ರಿ 12:15ರ ಸುಮಾರಿಗೆ ಇಬ್ಬರ ನಡುವೆ ಜಗಳ ಏರ್ಪಟ್ಟು ಅರ್ಚನಾ ಬಾರಿಗೆ ಹಾರಿದ್ದಾಳೆ ಎಂದು ಪೊಲೀಸ್ ಪ್ರಾಥಮಿಕ ವರದಿ ತಿಳಿಸಿದೆ.
ಇದನ್ನೂ ಓದಿ: Puttur: ಇಬ್ಬರು ಸಹೋದ್ಯೋಗಿ ಯುವತಿಯರು ನಾಪತ್ತೆ – ದೂರು ದಾಖಲು
ಕೊಟ್ಟಾರಕ್ಕರ ಅಗ್ನಿಶಾಮಕ ದಳಕ್ಕೆ ಅಪಘಾತದ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸೋನಿ ಹಗ್ಗ ಸೇರಿದಂತೆ ಉಪಕರಣಗಳನ್ನು ಬಳಸಿ 80 ಅಡಿ ಆಳದ ಬಾವಿಗೆ ಇಳಿದಿದ್ದಾರೆ. ಯುವತಿಯನ್ನು ಮೇಲಕ್ಕೆತ್ತಲು ಪ್ರಯತ್ನಿಸುವಾಗ ಬಾವಿಯ ಮೇಲ್ಭಾಗದ ರಚನೆ ಕುಸಿದು ಈ ಅಪಘಾತ ಸಂಭವಿಸಿದೆ. ಈ ಸಮಯದಲ್ಲಿ, ಬಾವಿಯ ಬಳಿ ನಿಂತಿದ್ದ ಅರ್ಚನಾಳ ಸ್ನೇಹಿತ ಶಿವಕೃಷ್ಣನ್ ಬಾವಿಗೆ ಬಿದ್ದಿದ್ದಾನೆ. ಈ ವೇಳೆ ಶಿವಕೃಷ್ಣನ್ ಮದ್ಯಪಾನ ಮಾಡಿದ್ದ ಎಂದು ವರದಿಯಾಗಿದೆ.
ಘಟನೆಯ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
tulutime ಯುಟ್ಯೂಬ್ ಚಾನೆಲ್ ವೀಕ್ಷಿಸಿ: www.youtube.com/@tulutimess











