ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಸಂಚಾರ್ ಸಾಥಿ ಆ್ಯಪ್ ಕಡ್ಡಾಯವಲ್ಲ : ಮೊಬೈಲ್ ಗಳಲ್ಲಿ ಹೊಸ ಅಪ್ಲಿಕೇಶನ್

ನವದೆಹಲಿ : Tulu Times | ದೂರಸಂಪರ್ಕ ತಂತ್ರಜ್ಞಾನದ ಜಾಗತಿಕ ಬೆಳವಣಿಗೆಯೊಂದಿಗೆ, ಫ್ರಾಡ್ ಕರೆಗಳು, ನಕಲಿ ಸಂದೇಶಗಳು, ಮೊಬೈಲ್ ಕಳವು ಹಾಗೂ ಸೈಬರ್ ಮೋಸಗಳ ಪ್ರಮಾಣವೂ ಹೆಚ್ಚುತ್ತಿದೆ. ಸಾಮಾನ್ಯ ನಾಗರಿಕರ ಮೊಬೈಲ್‌ ಸುರಕ್ಷತೆಯನ್ನು ಬಲಪಡಿಸುವುದು, ವಂಚನೆಗಳನ್ನು ತಡೆಗಟ್ಟುವುದು ಮತ್ತು ಸಂಪರ್ಕಗಳ ಮೇಲೆ ಪಾರದರ್ಶಕತೆಯನ್ನು ತರಲು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ ವಿಶೇಷವಾಗಿ ರೂಪಿಸಿರುವ ಡಿಜಿಟಲ್ ಯೋಜನೆಯೇ ಸಂಚಾರ್‌ ಸಾಥಿ.

ಫೋನ್ ಕಳವು ಸಂದರ್ಭದಲ್ಲಿ ತ್ವರಿತ ಕ್ರಮ ;

ಈ ಆ್ಯಪ್ ನ‌ ಪ್ರಮುಖ ಉದ್ದೇಶಗಳು, ನಾಗರಿಕರ ಮೊಬೈಲ್ ಫೋನ್ ಸುರಕ್ಷತೆ, ವಂಚನೆ ಕರೆ/ಸಂದೇಶಗಳ ವಿರುದ್ಧ ರಕ್ಷಣೆ, ಫೋನ್ ಕಳವು ಸಂದರ್ಭದಲ್ಲಿ ತ್ವರಿತ ಕ್ರಮ ಹಾಗೂ ನಿಮ್ಮ ಹೆಸರಿನಲ್ಲಿ ಇರುವ SIM ಸಂಖ್ಯೆಗಳ ಮೇಲಿನ ನಿಯಂತ್ರಣ. ಈ ಪೋರ್ಟಲ್ ಮೂಲಕ ಪ್ರತಿ ಮೊಬೈಲ್ ಬಳಕೆದಾರರಿಗೂ ತಮ್ಮ ಸ್ವಂತ ಸಂಪರ್ಕಗಳ ಬಗ್ಗೆ ಸಂಪೂರ್ಣ ಅರಿವು ಮತ್ತು ನಿಯಂತ್ರಣ ದೊರೆಯುತ್ತದೆ. ಆದರೆ ಇದೀಗ, ಸಂಚಾರ್ ಸಾಥಿ ಆ್ಯಪ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ದೃಢಪಡಿಸಿದ್ದು, ನಿಮಗೆ ಬೇಡವಾದ್ರೆ ಮೊಬೈಲ್​ನಿಂದ ಅಪ್ಲಿಕೇಷನ್ ಡಿಲೀಟ್ ಮಾಡಿಕೊಳ್ಳಿ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ಪಷ್ಟಪಡಿಸಿದ್ದಾರೆ. ನಿಮಗೆ ಆ ಅಪ್ಲಿಕೇಷನ್ ಬೇಡವಾದರೆ ಮೊಬೈಲ್​ನಲ್ಲಿ ಡಿಲೀಟ್ ಮಾಡಬಹುದು. ಈ ಆ್ಯಪ್​ ಅನ್ನು ಎಲ್ಲರಿಗೂ ಪರಿಚಯಿಸುವುದು ನಮ್ಮ ಕರ್ತವ್ಯ. ಅದನ್ನು ಇಟ್ಟುಕೊಳ್ಳಬೇಕೋ ಬೇಡವೋ ಎಂಬುದು ಬಳಕೆದಾರರಿಗೆ ಬಿಟ್ಟದ್ದು ಎಂದು ಹೇಳಿದ್ದಾರೆ.

ಮೊಬೈಲ್‌ ಕಳ್ಳತನವಾದರೆ ಅಥವಾ ಕಳೆದುಹೋದರೆ ಬ್ಲಾಕ್‌ ಮಾಡಬಹುದು ;

ಸಂಚಾರ್‌ ಸಾಥಿ ಪೋರ್ಟಲ್ ಅನ್ನು ಮೇ 2023 ರಲ್ಲಿ ತೆರೆಯಲಾಗಿದ್ದು ಅದರ ಮುಂದುವರಿದ ಭಾಗವಾಗಿ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಜನವರಿಯಲ್ಲಿ ದೂರಸಂಪರ್ಕ ಇಲಾಖೆಯು ಆಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರಿಗೆ ಈ ಆ್ಯಪ್ ಅನ್ನು ಬಿಡುಗಡೆ ಮಾಡಿತ್ತು. ಈ ಆ್ಯಪ್‌ ಅನ್ನು ಇನ್‌ಸ್ಟಾಲ್‌ ಮಾಡಿದ ಬಳಿಕ ಮೊಬೈಲ್‌ ಕಳ್ಳತನವಾದರೆ ಅಥವಾ ಕಳೆದುಹೋದರೆ ಬ್ಲಾಕ್‌ ಮಾಡಬಹುದು. ಅಷ್ಟೇ ಅಲ್ಲದೇ ಈ ಫೋನ್‌ ದೇಶದ ಬೇರೆ ಕಡೆ ಬಳಕೆಯಾಗುತ್ತಿದ್ದರೂ ಕಾನೂನು ಸಂಸ್ಥೆಗಳಿಗೆ ಎಲ್ಲಿ ಈ ಫೋನ್‌ ಸಕ್ರಿಯವಾಗಿದೆ ಎಂಬ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ . ಈಗಾಗಲೇ ತಯಾರಿಸಲಾದ ಅಥವಾ ಪ್ರಸ್ತುತ ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಿರುವ ಮೊಬೈಲ್ ಫೋನ್‌ಗಳು ಸಹ ಈ ಅಪ್ಲಿಕೇಶನ್ ಅನ್ನು ಸೇರಿಸಬೇಕಾಗುತ್ತದೆ. ಕಂಪನಿಗಳು ಸಾಫ್ಟ್‌ವೇರ್ ನವೀಕರಣಗಳ ಮೂಲಕ ಸಂಚಾರ ಸಾಥಿ ಅಪ್ಲಿಕೇಶನ್ ಅನ್ನು ಲಭ್ಯವಾಗುವಂತೆ ಮಾಡಬೇಕಾಗುತ್ತದೆ. ತಯಾರಕರು ಮತ್ತು ಆಮದುದಾರರು ಈ ಆದೇಶವನ್ನು ಪಾಲಿಸಬೇಕು ಮತ್ತು 120 ದಿನಗಳಲ್ಲಿ ದೂರಸಂಪರ್ಕ ಇಲಾಖೆಗೆ ವರದಿಯನ್ನು ಸಲ್ಲಿಸಬೇಕಾಗುತ್ತದೆ.

Sanchar Saathi app not mandatory: New app on mobiles – ತುಳು ಟೈಮ್ಸ್

ಇದನ್ನೂ ಓದಿ :ಬಿಗ್‌ ಬಾಸ್‌ ಗಿಲ್ಲಿ ಬೆನ್ನಿಗೆ ಚಾಕು ಹಾಕಿದ ರಘು..! ಫ್ಯಾನ್ಸ್‌ ಕಾಮೆಂಟ್ಸ್‌ ನೋಡಿ!

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/yek8Z0SdHr4?si=NcsSSQN6v83BB_Eh

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page