ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಎಟಿಎಂ ಕದ್ದೊಯ್ಯಲು ತಳ್ಳುಗಾಡಿ ಬಳಸಿದ ಕದೀಮರು…!

ಬೆಳಗಾವಿ : Tulu Times | ಹಣ ವರ್ಗಾವಣೆ ಮತ್ತು ಸಂಗ್ರಹಣೆಯ ಸ್ಥಳವಾದ ಎಟಿಎಂಗಳು ಅಪರಾಧಿಗಳ ಪ್ರಮುಖ ಗುರಿಯಾಗುತ್ತಿದೆ. ನಗದು ಲಭ್ಯತೆ, ತಂತ್ರಜ್ಞಾನ ಹಾಗೂ ಭದ್ರತಾ ಕೊರತೆ ಇವುಗಳ ಸಮೂಹ ಪರಿಣಾಮವಾಗಿ ಎಟಿಎಂ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ಇಂತಹ ಘಟನೆಗಳು ಹಲವು ಬಾರಿ ಸುದ್ದಿಯಾಗಿದ್ದು, ಇತ್ತೀಚೆಗಷ್ಟೇ ಬೆಂಗಳೂರಿನ ಏಳು ಕೋಟಿ ಎಟಿಎಂ ದರೋಡೆ ಪ್ರಕರಣ ಎಲ್ಲೆಡೆ ಸದ್ದು ಮಾಡಿತ್ತು. ಇಷ್ಟರಲ್ಲೇ ಬೆಳಗಾವಿಯಲ್ಲೊಂದು ಎಟಿಎಂ ಕಳ್ಳತನ ಇದೀಗ ವರದಿಯಾಗಿದೆ.

ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ಇಂಡಿಯಾ ಎಂಟಿಎಂನಲ್ಲಿ ಈ ಘಟನೆ ನಡೆದಿದೆ. ಎಟಿಎಂಗೆ ಬಂದ ಮೂವರು ಖದೀಮರು ಬರುವಾಗ ತಳ್ಳುಗಾಡಿಯೊಂದನ್ನು ತಂದಿದ್ದರು. ಎಟಿಎಂಗೆ ನುಗ್ಗಿದ ಗ್ಯಾಂಗ್‌ ಮೊದಲು ಸೆನ್ಸಾರ್ ಶಬ್ಧ ಬರದಂತೆ ಬ್ಲ್ಯಾಕ್ ಸ್ಪ್ರೇ ಸಿಂಪಡಿಸಿದ್ದಾರೆ. ಬಳಿಕ ಎಟಿಎಂ ಮಷಿನ್ ಹೊರ ತೆಗೆದು ತಳ್ಳು ಗಾಡಿಯಲ್ಲಿಟ್ಟುಕೊಂಡು ಹೋಗಿದ್ದಾರೆ. ತಳ್ಳುಗಾಡಿಯನ್ನು 200 ಮೀಟ‌ರ್ ತಳ್ಳಿಕೊಂಡು ಹೋಗಿ ತಮ್ಮ ವಾಹನದಲ್ಲಿ ಎಟಿಎಂ ಯಂತ್ರ ಇಟ್ಟುಕೊಂಡು ಪರಾರಿಯಾಗಿದ್ದಾರೆ. ಎಟಿಎಂನಲ್ಲಿ ಒಂದು ಲಕ್ಷಕ್ಕೂ ಅಧಿಕ ಹಣವಿತ್ತು ಎಂದು ತಿಳಿದುಬಂದಿದೆ. ಈ ಸಂದರ್ಭ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಬಂಧನಕ್ಕೆ ಶೋಧ ಆರಂಭವಾಗಿದೆ. ಹೀಗೇ, ಒಂದಲ್ಲ ಎರಡಲ್ಲ ಎಷ್ಟೋ ಫ್ಲಾನ್ ಗಳನ್ನು ಮಾಡಿ ಎಟಿಎಂ ನಿಂದ ಹಣ ಲಪಟಾಯಿಸುವ ಯೋಚನೆಗಳು ಹೆಚ್ಚಾಗುತ್ತಿವೆ. ದರೋಡೆಕೋರರು ಸುಲಭ ತಂತ್ರಗಳ ಮುಖಾಂತರ ಈ ರೀತಿಯ ತಳ್ಳುಗಾಡಿಯ ಯೋಜನೆ ಮಾಡಿದ್ದು, ವಿಶೇಷವಾಗಿ ಹಣ ಕಸಿದುಕೊಳ್ಳಲು ಏನೆಲ್ಲಾ ದಾರಿಗಳನ್ನು ಹುಡುಕುತ್ತಾರೆ ಅನ್ನೋದೇ ವಿಶೇಷ. The thieves used a wheelbarrow to steal an ATM – ತುಳು ಟೈಮ್ಸ್

ಇದನ್ನೂ ಓದಿ :ರಿಷಭ್‌ ಶೆಟ್ಟಿಗೆ ಕ್ಷಮೆ ಕೇಳಿದ ಬಾಲಿವುಡ್ ನಟ ರಣವೀರ್ ಸಿಂಗ್..!

=======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/yek8Z0SdHr4?si=NcsSSQN6v83BB_Eh

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page