ಆರೋಗ್ಯ: Tulu Times | ಪ್ರತಿದಿನದ ನಮ್ಮ ಜೀವನದ ಜಂಜಾಟದಲ್ಲಿ ಒಂದಲ್ಲ ಒಂದು ಕಾರಣದಿಂದ ನಮ್ಮ ನೆಮ್ಮದಿಯನ್ನು ನಾವು ಕಳೆದುಕೊಳ್ಳುತ್ತೇವೆ. ಇಂತಹ ಅಶಾಂತಿಯ ವಾತಾವರಣದಿಂದ ನೀವು ಮುಂದುವರಿಯಬೇಕಾದರೆ ಅಥವಾ ಅಂತಹ ಒತ್ತಡದ ಜೀವನದಿಂದ ನೀವು ಹೊರ ಬರಬೇಕಾದರೆ ಕೆಲವೊಂದು ಜೀವನದಲ್ಲಿ ಟಿಪ್ಸ್ ಗಳನ್ನು ಫಾಲೋ ಮಾಡಿ ಅದೇನು ಅಂತ ಈ ಸ್ಟೋರಿಯಲ್ಲಿ ಓದಿ..ಈ ಸ್ಟೋರಿ ನಿಮ್ಮ ನೆಮ್ಮದಿಗಾಗಿ..
ಪಾಸಿಟಿವ್ ವೈಬ್ ಸಿಗ್ತಿಲ್ವೇ..? ಹೀಗೆ ಮಾಡಿ!
ಹೌದು.. ಪ್ರತಿನಿತ್ಯ ನಮ್ಮ ನೆಮ್ಮದಿಯನ್ನು ನಾವು ಹುಡುಕುತ್ತಿರುತ್ತೇವೆ ಅದರ ಜೊತೆಗೆ ಒಂದಿಷ್ಟು ನೋವು ಒಂದಿಷ್ಟು ಹತಾಶೆ ಅದರ ಜೊತೆಗೆ ನಮ್ಮ ಮಾನಸಿಕವಾದ ಶಕ್ತಿಯನ್ನು ನಾವು ಕಳೆದುಕೊಳ್ಳುತ್ತಾ ಹೋಗುತ್ತೇವೆ. ಇಂತಹ ಅಶಾಂತಿಯ ವಾತಾವರಣವನ್ನು ನಾವು ನಾವಾಗಿಯೇ ದೂರ ಮಾಡಿಕೊಳ್ಳಬೇಕು. ಹೇಗೆಂದರೆ ಪ್ರತಿದಿನ ನೀವು ನಿಮ್ಮ ಮನೆ ಅಥವಾ ನೀವು ವಾಸಿಸುವಂತಹ ಸ್ಥಳದ ಸುತ್ತ ಪಾಸಿಟಿವ್ ವೈಬ್ ಇರುವಂತೆ ನೋಡಿಕೊಳ್ಳಬೇಕು. ಗಿಡ, ಮರ ಹಸಿರು ಹೀಗೆ ಅವುಗಳ ಜೊತೆಗೆ ನಿಮ್ಮ ಸಂಬಂಧವನ್ನು ನೀವು ಹೆಚ್ಚಿಸಿಕೊಳ್ಳಬೇಕು. ನೀವು ಎಲ್ಲಾದರೂ ಟ್ರಾವೆಲಿಂಗ್ ಮಾಡುವುದು ಸೂಕ್ತವಾದಂತಹ ಒಂದು ಕೆಲಸ ಅಥವಾ ನಿಮ್ಮ ಮನೆಯ ಹತ್ತಿರವಿರುವಂತಹ ಗಿಡಮರ ಅಥವಾ ನಿಮ್ಮ ಮನೆಯ ಗಾರ್ಡನ್ ನಲ್ಲಿ ಕುಳಿತು ಒಂದಿಷ್ಟು ಸಮಯವನ್ನು ಕಳೆಯಿರಿ. ಇದರಿಂದ ನಿಮ್ಮ ಮಾನಸಿಕ ಶಕ್ತಿ ಹೆಚ್ಚುತ್ತದೆ.
ಇನ್ನು ಸಾಕಷ್ಟು ಜನ ಮಾನಸಿಕ ನೆಮ್ಮದಿಗಾಗಿ ಧ್ಯಾನದ ಕಡೆಗೆ ವಾಲುತ್ತಾರೆ. ಇದು ಕೂಡ ಒಂದು ಒಳ್ಳೆಯ ಕೆಲಸ. ಅದರ ಜೊತೆಗೆ ನೀವು ಎಲ್ಲಿ ಧ್ಯಾನ ಮಾಡುತ್ತೀರಿ ಅನ್ನೋದು ಕೂಡ ಮುಖ್ಯವಾಗುತ್ತದೆ. ನಿಮ್ಮ ಮನೆಯ ಗಾರ್ಡನ್ ಅಥವಾ ನಿಮ್ಮ ರೂಮ್ನಲ್ಲಿ ಯಾರು ಇಲ್ಲದಿದ್ದಾಗ ಒಬ್ಬರೇ ಕುಳಿತುಕೊಂಡು ಕಣ್ಣು ಮುಚ್ಚಿಕೊಂಡು ಧ್ಯಾನಸ್ಥರಾದ್ರೆ ನಿಮ್ಮ ಮಾನಸಿಕ ಶಕ್ತಿ ಹೆಚ್ಚುತ್ತದೆ. ಇದರ ಜೊತೆಗೆ ನೀವು ಇನ್ನಷ್ಟು ಪಾಸಿಟಿವ್ ಆಗಿ ಯೋಚಿಸುವಿರಿ. ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ಟ್ರಕ್ಕಿಂಗ್ ಹೋಗಿ ಬಿಂದಾಸ್ ಆಗಿರಿ!
ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗಬೇಕಾದರೆ ನೀವು ಚಾರಣವನ್ನು ಕೈಗೊಳ್ಳಿ. ನಿಮಗೆ ಇಷ್ಟವಾದಂತಹ ಸ್ಥಳಕ್ಕೆ ಚಾರಣ ಹೋಗಿ ಮಾನಸಿಕ ನಿಮ್ಮದಿಯನ್ನು ಹುಡುಕಿಕೊಳ್ಳಿ. ನಿಮ್ಮ ಫ್ರೆಂಡ್ಸ್ ಗಳ ಜೊತೆ ಹೋಗುವುದಕ್ಕಿಂತ ನೀವು ಒಬ್ಬರೇ ಅಥವಾ ಒಬ್ಬರನ್ನು ಸೇರಿಸಿಕೊಂಡು ಟ್ರಕ್ಕಿಂಗ್ ಹೋಗುವಂತ ಹವ್ಯಾಸವನ್ನು ಇಟ್ಟುಕೊಳ್ಳಿ. ಇದರಿಂದ ನಿಮ್ಮ ದೈಹಿಕ ಶಕ್ತಿ ಹೆಚ್ಚುತ್ತದೆ. ಜೊತೆಗೆ ಮನಸ್ಸು ನಿರಾಳವಾಗುತ್ತದೆ. ಇದರಿಂದ ಯಾವುದೇ ಕೆಲಸ ಮಾಡಿದರೂ ಕೂಡ ನಿಮಗೆ ಇನ್ನಷ್ಟು ಹುರುಪಿನಿಂದ ಕೆಲಸ ಮಾಡುತ್ತಾ ನಿಮ್ಮ ಮನಸ್ಸು ಹಾತೊರೆಯುತ್ತಾ ಇರುತ್ತದೆ.
Are you struggling with tension every day? Then don’t worry- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











