ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಬಿಗ್‌ ಬಾಸ್‌ ಗಿಲ್ಲಿ ಬೆನ್ನಿಗೆ ಚಾಕು ಹಾಕಿದ ರಘು..! ಫ್ಯಾನ್ಸ್‌ ಕಾಮೆಂಟ್ಸ್‌ ನೋಡಿ!

ಬಿಗ್‌ ಬಾಸ್:‌ Tulu Times | ಬಿಗ್‌ ಬಾಸ್‌ ಮನೆಯಲ್ಲಿ ಬೆನ್ನಿಗೆ ಚಾಕು ಹಾಕುವ ಟಾಸ್ಕ್‌ ನಡೆಯುತ್ತಿದೆ. ಇದೀಗ ಬಿಗ್ ಬಾಸ್ ಕನ್ನಡ ಮನೆಯಲ್ಲಿ ರಘು, ಗಿಲ್ಲಿಗೆ ಚಾಕು ಹಾಕಿ ನಾಮಿನೇಟ್ ಮಾಡಿದ್ದು ವೈರಲ್ ಆಗುತ್ತಿದೆ.

ಇದನ್ನೂ ಓದಿ:‌ ರಿಷಭ್‌ ಶೆಟ್ಟಿಗೆ ಕ್ಷಮೆ ಕೇಳಿದ ಬಾಲಿವುಡ್ ನಟ ರಣವೀರ್ ಸಿಂಗ್..!

ನಾಮಿನೇಷನ್ ಮಾಡಲು ಬಿಗ್ ಬಾಸ್ ನೀಡಿದ್ದ ಚಟುವಟಿಕೆಯಲ್ಲಿ,  ಬೆನ್ನಿಗೆ ಚೆಂಡಿನ ವಸ್ತು ಇರುತ್ತದೆ. ಇದಕ್ಕೆ ಚಾಕು ಹಾಕುವ ಮೂಲಕ ನಾಮಿನೇಷನ್ ಮಾಡಬೇಕು. ರಘು ಅವರು ಒಂದು ಚಾಕುವನ್ನು ಗಿಲ್ಲಿಗೆ ಹಾಕಿದ್ದು, ಅವರನ್ನು ನಾಮಿನೇಟ್ ಮಾಡಿದರು. ಗಿಲ್ಲಿಯನ್ನು ರಘು ನಾಮಿನೇಟ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

ಇದನ್ನೂ ಓದಿ:‌ ಇಮ್ರಾನ್ ಖಾನ್ ಸಾವಿನ ವದಂತಿ; ಬೆಂಬಲಿಗರು ಬೃಹತ್ ಪ್ರತಿಭಟನೆಗೆ ಸಜ್ಜು!

ಗಿಲ್ಲಿ ಬೆನ್ನಿಗೆ ರಘು ಚಾಕು ಹಾಕಿದ್ದನ್ನು ಫ್ಯಾನ್ಸ್  ರಘು ಅವರ ಈ ನಡೆಯನ್ನು ಕಟ್ಟಪ್ಪ ಬಾಹುಬಲಿಗೆ ಚುಚ್ಚಿದ ಘಟನೆಗೆ ಎಂದು ಅಭಿಮಾನಿಗಳು ಹೇಳಿದ್ದಾರೆ.  ಬಾಹುಬಲಿ’ ಸಿನಿಮಾದ ಕ್ಲೈಮ್ಯಾಕ್ಸ್​ನ ನೋಡಿರುತ್ತೀರಿ.. ಇದರಲ್ಲಿ ಕಟ್ಟಪ್ಪನು ಬಾಹುಬಲಿಗೆ ಖಡ್ಗದಿಂದ ಚುಚ್ಚುತ್ತಾನೆ. ಬಾಹುಬಲಿಯ ಆಪ್ತನಾಗಿರೋ ಕಟ್ಟಪ್ಪ ಹೀಗೇಕೆ ಮಾಡಿದ, ಇವರ ನಡುವಿನ ಗೆಳೆತನಕ್ಕೆ ಬೆಲೆಯೇ ಇಲ್ಲದಂತೆ ಆಯಿತೇ ಎಂಬ ಪ್ರಶ್ನೆಗಳು ಮೂಡುವಂತೆ ಆದವು.

ಇದನ್ನೂ ಓದಿ:‌ ಹನುಮ ಜಯಂತಿಯಂದು ಅಂಜನಿಪುತ್ರನ ಕೃಪೆಗೆ ಪಾತ್ರರಾಗೋದು ಹೇಗೆ..?

ಈಗ ಬಿಗ್ ಬಾಸ್ ಯಲ್ಲಿ ಗಿಲ್ಲಿ ಬೆನ್ನಿಗ್ಗೆ ರಘು  ಚಾಕು ಹಾಕಿದ್ದನ್ನು ಹೀಗೆಯೇ ಹೇಳಲಾಗಿದೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ದೊಡ್ಮನೆಲಿ ರಘು ಹಾಗೂ ಗಿಲ್ಲಿ ಮಧ್ಯೆ  ಗೆಳೆತನ ಇದೆ. ಆದರೆ ಕಳೆದ ವಾರದಿಂದ ಇವರ ಮಧ್ಯೆ ಬಿರುಕು ಮೂಡಿದೆ. ಗಿಲ್ಲಿ ಬಟ್ಟೆಯನ್ನು ಸಿಟ್ಟಿನಿಂದ ರಘು ಮೇಲೆ ಎಸೆದಿದ್ದರು. ಇದು ಚರ್ಚೆಯಾಗಿತ್ತು. ಗಿಲ್ಲಿಯನ್ನು ನಂಬ ಬಾರದು, ಆತನಿಗೆ ಕಿವಿಮಾತು ಹೇಳಬಾರದು ಎಂಬ ನಿರ್ಧಾರಕ್ಕೆ ರಘು ಬಂದಿದ್ದಾರೆ. ರಘು ಹಾಗೂ ಗಿಲ್ಲಿ ಎಷ್ಟೇ ಕಿತ್ತಾಡಿಕೊಂಡರೂ ಕೊನೆಯಲ್ಲಿ ಒಂದಾಗುತ್ತಾರೆ.

Raghu stabbed Bigg Boss Ghilli in the back..! See fans’ comments!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page