ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಅಚ್ಚರಿಯೆಂದರೂ ಸತ್ಯ : ಇಡೀ ರಾತ್ರಿ ಕಾಡಿನಲ್ಲಿ ಕಳೆದ ಮಗುವನ್ನು ಪತ್ತೆ ಮಾಡಿದ ಶ್ವಾನ

ಕೊಡಗು : Tulu Times |ಕೆಲವೊಮ್ಮೆ ನಾಪತ್ತೆಯಾದ ವ್ಯಕ್ತಿಯನ್ನು ಹುಡುಕೋದಕ್ಕೆ ಸಾಮಾನ್ಯ ಪೋಲಿಸರಿಂದಲೇ ಸಾಧ್ಯವಾಗುವುದಿಲ್ಲ. ಎಷ್ಟೇ ಸಾಕ್ಷ್ಯಾಧಾರಗಳಿದ್ದರೂ ಕಳುವಾಗಿರುವ ವ್ಯಕ್ತಿ ಅಥವಾ ವಸ್ತುಗಳ ಹುಡುಕಾಟಕ್ಕೆ ಅಡಚಣೆಗಳು ಉಂಟಾಗುತ್ತವೆ. ಹೀಗಿರುವಾಗ ಇಲ್ಲೊಂದು ಕಡೆ ನಾಯಿಯೇ ಮಗುವೊಂದನ್ನು ಹುಡುಕಿ ಕೊಟ್ಟ ಘಟನೆ ಎಲ್ಲೆಡೆ ಸದ್ದು ಮಾಡುತ್ತಿದೆ.

ಕಾಫಿ ಕೊಯ್ಲು ಕೆಲಸಕ್ಕೆ ಹೋಗುವ ಕಾರ್ಮಿಕ ದಂಪತಿ ತಮ್ಮ ಇಬ್ಬರು ಮಕ್ಕಳನ್ನೂ ಕೆಲಸಕ್ಕೆ ಹೋಗುವಾಗ ಕರೆದೊಯ್ದಿದ್ದರು. ಮಕ್ಕಳೂ ಕಾಫಿ ತೋಟದಲ್ಲಿ ಆಟ ಆಡಿಕೊಂಡು ಖುಷಿಯಾಗಿದ್ದರು. ಆದರೆ ಸಂಜೆ ವೇಳೆ ಕೆಲಸ ಮುಗಿಸಿ ಹೊರಡುವಾಗ ಮಕ್ಕಳಿಬ್ಬರ ಪೈಕಿ 2 ವರ್ಷದ ಹೆಣ್ಣು ಮಗು ನಾಪತ್ತೆಯಾಗಿರೋದು ಪೋಷಕರಿಗೆ ಗೊತ್ತಾಗಿದೆ. ಕೂಡಲೇ ಅವರು ಪೂರ್ತಿ ಕಾಫಿ ತೋಟ ಹುಡುಕಾಡಿದ್ದಾರೆ. ಅರಣ್ಯ ಇಲಾಖೆಯವರೂ ಸ್ಥಳಕ್ಕೆ ಬಂದು ಜಾಲಾಡಿದ್ದಾರೆ. ಆದರೆ ಮಗುವನ್ನು ಹುಡುಕಿದ್ದು ಮಾತ್ರ ನಾಯಿ.

ಹೌದು… ಕೇಳೋದಿಕ್ಕೆ ಇದು ವಿಶೇಷ ಅನಿಸಿದ್ರೂ, ನಿಜವಾಗಿ ನಡೆದ ಘಟನೆ. ಕಾಫಿ ಕೊಯ್ಲು ಹಿನ್ನೆಲೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕೊಂಗಣ‌ ಗ್ರಾಮದಲ್ಲಿ ಕಾರ್ಮಿಕ‌ ದಂಪತಿ ಸುನಿಲ್ ಮತ್ತು ನಾಗಿಣಿ ತಮ್ಮ ಇಬ್ಬರು ಮಕ್ಕಳು ಜೊತೆಗಿದ್ದರು. ಕಾಫಿ ತೋಟದಲ್ಲಿ ಕೆಲಸ ನಿರತರಾಗಿದ್ದ ಅವರು ಸಂಜೆ ವೇಳೆ ಗಮನಿಸಿದಾಗ ಇಬ್ಬರು ಮಕ್ಕಳ ಪೈಕಿ 2 ವರ್ಷದ ಮಗು ಸುಕನ್ಯಾ ನಾಪತ್ತೆಯಾಗಿರೋದು ಗೊತ್ತಾಗಿದೆ. ಮಗಳಿಗಾಗಿ ಹುಡುಕಾಡಿದ್ದಾರೆ. ಅದರೆ ಮಗು ಕಾಣಿಸದ ಕಾರಣ ವಿಷಯವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮುಟ್ಟಿಸಿದ್ದಾರೆ. ತಕ್ಷಣ ಅವರೂ ಕೂಡ ಸ್ಥಳಕ್ಕೆ ಬಂದಿದ್ದು, ಸುಕನ್ಯಾಗಾಗಿ ಕಾಫಿ ತೋಟದ ತುಂಬಾ ಮಧ್ಯರಾತ್ರಿವರೆಗೆ ಹುಡುಕಿದರೂ ಮಗು ಪತ್ತೆಯಾಗಿರಲಿಲ್ಲ.

ಅರಣ್ಯ ಇಲಾಖೆ ಅಧಿಕಾರಿಗಳು ಮರುದಿನವೂ ಸುಕನ್ಯಾಗಾಗಿ ಹುಡುಕಾಟ ಮುಂದುವರಿಸಿದ್ದು, ಮಗು ಪತ್ತೆಗಾಗಿ ಅನಿಲ್ ಎಂಬುವರ ಶ್ವಾನಗಳನ್ನು ಕೂಡ ಬಳಕೆ ಮಾಡಿಕೊಂಡಿದ್ದರು. ಈ ವೇಳೆ ಆ ನಾಯಿಗಳ ಪೈಕಿ ಒಂದು ಶ್ವಾನ ಸುಕನ್ಯಾಳನ್ನ ಪತ್ತೆ ಮಾಡಿದೆ. ಓರಿಯೋ ಹೆಸರಿನ ಶ್ವಾನ ಕಾಫಿ ತೋಟದ ಎತ್ತರದ ಪ್ರದೇಶದಲ್ಲಿ ಮಗು ನೋಡಿ ಬೊಗಳಲು ಆರಂಭಿಸಿದೆ. ಹೀಗಾಗಿ ಆ ಭಾಗದಲ್ಲಿ ನೋಡಿದಾಗ ಸುಕನ್ಯಾ ಪತ್ತೆಯಾಗಿದ್ದಾಳೆ. ದಟ್ಟ ಕಾರ್ಗತ್ತಲಿನಲ್ಲೇ ಒಂದು ದಿನ ಕಳೆದಿದ್ದ ಮಗು ಸುರಕ್ಷಿತವಾಗಿ ಮನೆಗೆ ಮರಳಿದೆ. ಮಗಳ ನಾಪತ್ತೆಯಿಂದ ಕಂಗಾಲಾಗಿದ್ದ ಸುನಿಲ್ ಮತ್ತು ನಾಗಿಣಿ ದಂಪತಿ ನಿಟ್ಟುಸಿರು ಬಿಟ್ಟಿದ್ದಾರೆ. Surprising but true: Dog finds child who spent entire night in forest – ತುಳು ಟೈಮ್ಸ್

ಇದನ್ನೂ ಓದಿ :ಎಐ ನ್ಯಾನೋ ಬನಾನ ಟೂಲ್ ನಿಂದ ರಜೆಗಿಟ್ಟಿಸಿಕೊಂಡ ಉದ್ಯೋಗಿ …!

==========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/9__hBRPRAJ0?si=uR-Fro929bU1qXNb

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page