ಬ್ರೇಕಿಂಗ್ ನ್ಯೂಸ್
ಕರ್ನಾಟಕ

RSS Ban ಮಾಡಲು ಸಾಧ್ಯವೇ ಇಲ್ಲಾ.ಏಕೆ ಗೊತ್ತಾ?

ರಾಜ್ಯದಲ್ಲಿ RSS ಬ್ಯಾನ್ ಕುರಿತಾದ ಚರ್ಚೆ ಜೋರಾಗ್ತಿದೆ.ಪ್ರಿಯಾಂಕ ಖರ್ಗೆ ಹೇಗಾದ್ರೂ ಸಿಎಂ ಸಿದ್ದರಾಮಯ್ಯರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಬ್ಯಾನ್ ಮಾಡುವಂತೆ ಪತ್ರ ಬರೆದಿದ್ದಾರೆ.

ಈ ಪತ್ರದಲ್ಲಿ ಸಂಘವೂ ಅಶಾಂತಿಗೆ ಕಾರಣವಾಗ್ತಿದೆ.ಸಮಾಜದಲ್ಲಿ ದ್ವೇಷವನ್ನು ಹರಡುತ್ತಿದೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಬಳಸಿಕೊಂಡು ಸರ್ಕಾರಿ ಶಾಲೆಯ ಗ್ರೌಂಡ್ ಗಳಲ್ಲಿ ಶಾಖೆ ನಡೆಸಲಾಗ್ತಿದೆ.ಜೊತೆಗೆ ಜೋರಾಗಿ ಘೋಷಣೆಗಳನ್ನು ಕೂಗಿ ಯುವಕರ ಮನಸ್ಸಿನಲ್ಲಿ ಭಾರತದ ಏಕತೆಯ ವಿರುದ್ದವಾಗಿ ಸಂವಿಧಾನದ ವಿಚಾರಗಳ ವಿರುದ್ದವಾಗಿ ಸಮಾಜದಲ್ಲಿ ನಕಾರಾತ್ಮಕ ವಿಚಾರಗಳನ್ನು ತುಂಬುತ್ತಿದೆ.ಪೊಲೀಸರ ಅನುಮತಿಯಿಲ್ಲದೆ.ದೊಣ್ಣೆಗಳನ್ನು ಹಿಡಿದು ಅಕ್ರಮಣಕಾರಿ ಪ್ರದರ್ಶನ ನಡೆಸ್ತಾರೆ.ಇದರಿಂದಾಗಿ ಮುಗ್ಧ ಮಕ್ಕಳು ಮತ್ತು ಯುವಜನರ ಮೇಲೆ ದುಷ್ಟರಿಣಾಮ ಬೀರಲಾಗ್ತಿದೆ.

ನಾಡಿನ ಮಕ್ಕಳು ಯುವ ಸಮುದಾಯ ಸಾರ್ವಜನಿಕರು ಸಮಾಜದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳು,ಅನುದಾನಿತ ಶಾಲೆಗಳು ಗ್ರೌಂಡ್ ಗಳು,ಮುಜರಾಯಿ ಇಲಾಖೆಯ ದೇವಸ್ಥಾನ,ಪುರಾತತ್ವ ಇಲಾಖೆಯ ಸ್ಥಳಗಳಲ್ಲಿ ಸಂಘದ ಶಾಖೆ,ಬೈಠಕ್ ಇನ್ನಿತರ ಆರ್ ಎಸ್ ಎಸ್ ನ ಚಟುವಟಿಕೆಗಳನ್ನು ನಡೆಸದಂತೆ ನಿಷೇಧ ಹೇರಬೇಕೆಂದು ಮುಖ್ಯಮಂತ್ರಿಯವರಿಗೆ ಪ್ರಿಯಾಂಕ್  ಖರ್ಗೆ ಪತ್ರ ಬರೆದಿದ್ದಾರೆ.

ಈ ಪತ್ರದಂತೆ ಸಿಎಂ ಕ್ರಮ ಕೈಗೊಂಡರೆ ಆರ್ ಎಸ್ ಎಸ್ ಕಾರ್ಯಕ್ರಮಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ.
ಈ ಬಗ್ಗೆ ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.ಶಾಸಕ ಸುನಿಲ್ ಕುಮಾರ್, ಪ್ರಿಯಾಂಕ ಖರ್ಗೆ ಪತ್ರವನ್ನು ಅವಿವೇಕಿತನದ ಪತ್ರ ಎಂದಿದ್ದಾರೆ.ಬಿಜೆಪಿ ನಾಯಕರಾದ ಆರ್.ಆಶೋಕ್ ,ಅಶ್ವತ್ಥ್ ನಾರಾಯಣ್,ಸಿ.ಟಿ ರವಿ ಸೇರಿದಂತೆ ಹಲವಾರು ನಾಯಕರು ಪ್ರಿಯಾಂಕ್ ಖರ್ಗೆ ವಿರುದ್ದ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಬಂದಾಗೆಲ್ಲಾ ಅದ್ರಲ್ಲೂ ವಿಶೇಷವಾಗಿ ಸಿಎಂ ಸಿದ್ದರಾಮಯ್ಯ ಸಿಎಂ ಆಗಿರೋ ಸಂದರ್ಭಗಳಲ್ಲಿ ಆರ್ ಎಸ್ ಎಸ್ ಬ್ಯಾನ್ ಮಾಡೋ ಮಾತುಗಳು ಹೆಚ್ಚಾಗಿ ಕೇಳಿ ಬರ್ತಾನೆ ಇರುತ್ತದೆ.ಆರ್ ಎಸ್ ಎಸ್ ಸಂಘಟನೆಯನ್ನು ಮತೀಯ ಸಂಘಟನೆ ಎಂದು ಝರಿದು ಮಾತಾಡುವ ಕಾಂಗ್ರೆಸ್ ನಾಯಕರ ಸಂಖ್ಯೆ ಹೆಚ್ಚಾಗ್ತಿದೆ.ಅದ್ರಲ್ಲೂ ಪ್ರಿಯಾಂಕ ಖರ್ಗೆ ಆರ್ ಎಸ್ ಎಸ್ ಬಗ್ಗೆ ತುಚ್ಚವಾಗಿ ಮಾತಾಡಿದ್ದು ಕೂಡ ಇದೆ.ಪ್ರಿಯಾಂಕ ಖರ್ಗೆಗೆ ಆರ್ ಎಸ್ ಎಸ್ ಸಂಘಟನೆಯ ಬಗ್ಗೆ ಸ್ವಲ್ಪ ಹೆಚ್ಚು ಸಿಟ್ಟಿರುವುದು ಅವರ ನಡವಳಿಕೆಯಲ್ಲಿ ಕಂಡುಬರುತ್ತದೆ.

ತುಂಬಾ ಹಿಂದಿನಿಂದಲೂ ಆರ್ ಎಸ್ ಎಸ್ ವಿರೋಧಿಸುವವರು ಅಧಿಕಾರಕ್ಕೆ ಬಂದಾಗೆಲ್ಲಾ ಸಂಘಟನೆಯನ್ನು ನಿಷೇಧಿಸುವ ಬಗ್ಗೆ ಮಾತಾಡುತ್ತಲೇ ಬಂದಿದ್ದಾರೆ.ಆದ್ರೆ ಇದುವರೆಗೆ ಸಂಘವನ್ನು ನಿಷೇಧಿಸುವ ಕೆಲಸವನ್ನು ಯಾರು ಮಾಡಿಲ್ಲ.ವಿರೋಧಿ ಸರ್ಕಾರ ಇದ್ದಾಗ ಸರ್ಕಾರಿ ಜಾಗಗಳಲ್ಲಿ ಕಾರ್ಯಕ್ರಮ ನಡೆಯದಂತೆ ತಡೆಹಿಡಿದದ್ದು ಇದೆ.

ಪ್ರಿಯಾಂಕ ಖರ್ಗೆ ಅಥವಾ ಇನ್ಯಾರೋ  ಸಂಘವನ್ನು ವಿರೋಧಿಸುವ ನಾಯಕರು ಆರ್ ಎಸ್ ಎಸ್ ಬ್ಯಾನ್ ಮಾಡಿ ಅಂದಾಕ್ಷಣ ಬ್ಯಾನ್ ಮಾಡುವುದಕ್ಕೆ ಸಾಧ್ಯವಿಲ್ಲ.ಆರ್ ಎಸ್ ಎಸ್ ನೂರು ವರ್ಷಗಳನ್ನು ಕಂಪ್ಲೀಟ್ ಮಾಡಿದ ಸಂದರ್ಭದಲ್ಲಿದೆ ಅಂದ್ರೆ ಅದ್ರ ಕೆಲಸ ಕಾರ್ಯಗಳು ಶಿಸ್ತು,ರಾಷ್ಟ್ರಪ್ರೇಮ ಪ್ರಮುಖ ಕಾರಣವಾಗಿರುತ್ತದೆ.ಸಂಘದ ಹಿನ್ನೆಲೆಯನ್ನು ಗಮನಿಸಿದ್ರೆ ಭಾರತದಲ್ಲಿ ಬ್ಯಾನ್ ಮಾಡುವುದಕ್ಕೆ ಸಾಧ್ಯವೇ ಇಲ್ಲ.

ಭಾರತದಲ್ಲಿ ಪ್ರತಿಯೊಂದು ಸಂಘ ಸಂಸ್ಥೆಗಳಿಗೆ ಅದರದ್ದೇ ಆದ ಅಧಿಕಾರ ಇದೆ.ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಎಲ್ಲಾ ಅವಕಾಶಗಳು ಇರುತ್ತವೆ.ಪ್ರತಿಯೊಂದು ಸಂಸ್ಥೆಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೊಂದಿರುತ್ತದೆ.ಸಂವಿಧಾನದಲ್ಲಿ ರಾಷ್ಟ್ರಕ್ಕೆ ಪೂರಕವಾಗುವ ರಾಷ್ಟ್ರಪ್ರೇಮದ ಕೆಲಸ ಮಾಡುವುದು ಅಪರಾಧವೆಂದು ಪರಿಗಣಿತವಾಗಿಲ್ಲ.ಹೀಗಿರುವಾಗ ರಾಷ್ಟ್ರೀಯ ವಿಚಾರಧಾರೆಯ ಸಾರದಲ್ಲಿ ಪ್ರವಹಿಸುತ್ತಿರುವ ಆರ್ ಎಸ್ ಎಸ್ ನ್ನೂ ಯಾವುದೇ ಕಾರಣಕ್ಕೂ ಬ್ಯಾನ್ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.

ಕೇವಲ ಆರೋಪಕ್ಕೆ ಯಾವುದೇ ಸಂಘಟನೆಗಳನ್ನು ನಿಷೇಧಿಸುವ ಹಕ್ಕು ಸರ್ಕಾರಕ್ಕೆ ಇರುವುದಿಲ್ಲ.ಆರೋಪಗಳು ಅಧಿಕೃತವಾಗಿ ಸಾಬೀತಾದರಷ್ಟೇ ಬ್ಯಾನ್ ವಿಚಾರಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತದೆ.ಪ್ರಿಯಾಂಕ ಖರ್ಗೆ ಆರ್ ಎಸ್ ಎಸ್ ಸಂಘಟನೆಯನ್ನು ಬ್ಯಾನ್ ಮಾಡುವುದಕ್ಕೆ ನೀಡಿರುವ ಕಾರಣಗಳಿಗೆ ಸರಿಯಾದ ಆಧಾರಗಳಿದ್ದರಷ್ಟೇ ನಿಷೇಧಿಸುವ ಪ್ರಕ್ರಿಯೆ ಮುಂದುವರಿಯಬಹುದು

ಆದರೆ ಪ್ರಿಯಾಂಕ ಖರ್ಗೆಯ ಅಭಿಪ್ರಾಯಕ್ಕೆ ದೊಡ್ಡ ಮಟ್ಟದಲ್ಲಿ ವಿರೋಧವಿದೆ ಎಂದರೆ ಆರ್ ಎಸ್ ಎಸ್ ಸಮರ್ಪಕವಾದ ಕೆಲಸವನ್ನು ಮಾಡುತ್ತಿದೆ ಎಂದರ್ಥ.ಯಾವುದೇ ಸಂಘಟನೆಯನ್ನು ನಿಷೇಧಿಸಲು ಒತ್ತಡ ಹೇರುವವರು ಸಂಘಟನೆಯ ಚಟುವಟಿಕೆಗಳು ಕಾನೂನಿಗೆ ಹೇಗೆ ವಿರುದ್ಧವಾಗಿದೆ ಎಂಬುದನ್ನು ಸಾಕ್ಷಾಧಾರಗಳೊಂದಿಗೆ ಸಾಬೀತು ಮಾಡಬೇಕಾಗುತ್ತದೆ.

ಸಾಮಾಜಿಕ ಶಾಂತಿಗೆ ಆರ್ ಎಸ್ ಎಸ್ ಭಂಗ ತಂದಿದೆ ಎಂಬುದನ್ನು ಪ್ರಿಯಾಂಕ ಖರ್ಗೆ ಜನರ ಮುಂದೆ ಸರ್ಕಾರದ ಮುಂದೆ ಪಾರದರ್ಶಕವಾಗಿ ಇಡಬೇಕಿದೆ.ಗಂಭೀರ ಆರೋಪ ಮಾಡಿರುವ ಪ್ರಿಯಾಂಕ ಖರ್ಗೆ ಆರ್ ಎಸ್ ಎಸ್ ನಡೆಸಿರುವ ಕಾನೂನು ಬಾಹಿರ ಚಟುವಟಿಕೆಗಳ ದಾಖಲೆಯನ್ನು ಜನರ ಮುಂದೆ ತೆರೆದಿಡುತ್ತಾರಾ ಅನ್ನೋದು ಮುಂದಿರುವ ಕುತೂಹಲ
ಸಕಾರಣವಿಲ್ಲದೆ,ರಾಜಕೀಯ ದ್ವೇಷಕ್ಕಾಗಿ ಯಾವುದೇ ಸಂಘಟನೆಗಳನ್ನು ನಿಷೇಧಗೊಳಿಸಿದರೆ ಅಂತಿಮವಾಗಿ ನ್ಯಾಯಾಲಯದ ಮೊರೆ ಹೋಗಬಹುದು.ಅಲ್ಲಿ ಕೂಡ ಸೂಕ್ತ ದಾಖಲೆಯನ್ನು ಇಟ್ಟರಷ್ಟೇ ಬ್ಯಾನ್ ಎಂಬ ಪದಕ್ಕೆ ಮಾನ್ಯತೆ ಸಿಕ್ಕೀತು.

ನೂರು ವರ್ಷಗಳಿಂದ ಸಮಾಜಮುಖಿಯಾಗಿ,ರಾಷ್ಟ್ರಪ್ರೇಮವನ್ನು ಸಾರುತ್ತಿರುವ ಆರ್ ಎಸ್ ಎಸ್ ಸಂಘಟನೆಯನ್ನು ಒಬ್ಬ ನಾಯಕನ ದೂರಿನಂತೆ ನಿಷೇಧ ಹೇರುವುದೆ ಆದರೇ, ಆದನ್ನೂ ಯಾವುದೇ ಸಂಘಟಿತ ಸಮಾಜ ಒಪ್ಪುವುದಕ್ಕೆ ಸಾಧ್ಯವಿಲ್ಲ,ವೈಯುಕ್ತಿಕ ಲೆಕ್ಕಚಾರದ ಸ್ಟೇಟ್ ಮೆಂಟ್ ಗಳು ಮನವಿಪತ್ರಗಳು ಸಾಮಾನ್ಯವಾಗಿರುವ ಈ ಸಂದರ್ಭದಲ್ಲಿ ಒಂದು ದಿನದ ಸುದ್ದಿಯಲ್ಲಿ ಪ್ರಿಯಾಂಕ್ ಖರ್ಗೆ ಮುಂಚೂಣಿಗೆ ಬಂದದ್ಧಷ್ಟೇ ಅವರಿಗೆ ಸಿಕ್ಕಿರುವ ಲಾಭ.

ಇದನ್ನೂ ಓದಿ:Bangalore:ಡಿಕೆಶಿ ನನ್ನ ಕೊಲ್ತಾರೆ,ಹೆಣ್ಣಿಗಾಗಿ ಹೀಗೆ ಮಾಡ್ತಿದ್ದಾರೆ!
………………………………………………………………………………………………………………

ವೀಡಿಯೋ ಸುದ್ದಿಗಳನ್ನು ವೀಕ್ಷಿಸಲು ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ Subscribe ಮಾಡಿ:https://www.youtube.com/watch?v=JJgZvG3Eep4

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page