ಬ್ರೇಕಿಂಗ್ ನ್ಯೂಸ್
ಕರ್ನಾಟಕ

ವಾಟ್ಸಾಪ್, ಟೆಲೆಗ್ರಾಂ 6 ಗಂಟೆಗೊಮ್ಮೆ ಲಾಗೌಟ್ : 3 ತಿಂಗಳಿಗೊಮ್ಮೆ ಸಿಮ್ ವೇರಿಫೈ ಮಾಡುವ ಹೊಸ ನಿಯಮ

ಸೈಬರ್ ಕ್ರೈಂ : Tulu Times | ಸೈಬರ್ ಕ್ರೈಮ್ ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ನಿಯಮವೊಂದನ್ನು ಜಾರಿ ಮಾಡಿದೆ. ಕೇಂದ್ರ ದೂರ ಸಂಪರ್ಕ ಇಲಾಖೆ ವಾಟ್ಸಾಪ್ ನಂತಹ ಮೆಸೇಜಿಂಗ್ ಮಾಡುವ ಸಾಮಾಜಿಕ ಜಾಲತಾಣಗಳಿಗೆ ಈ ಹೊಸ ನಿಯಮವನ್ನು ರೂಪಿಸಿದೆ. ವಾಟ್ಸಾಪ್, ಟೆಲಿಗ್ರಾಂ ನಂತಹ ಮೆಸೆಜ್ ಮಾಡುವ ಆ್ಯಪ್ ಗಳು ಬಳಕೆದಾರರ ಸಿಮ್ ಕಾರ್ಡ್ ಗಳನ್ನು ಮೂರು ತಿಂಗಳಿಗೊಮ್ಮೆಯಾದರೂ ವೇರಿಫೈ ಮಾಡುವಂತೆ ಹಲವು ನಿಯಮಗಳನ್ನು ಜಾರಿ ಮಾಡಿದೆ. ವಾಟ್ಸಾಪ್, ಟೆಲಿಗ್ರಾಂ ಮೆಸೇಜಿಂಗ್ ಫ್ಲಾಡ್ ಫಾರ್ಮ್ ಗಳಿಗೆ ಹಲವು ನಿರ್ದೇಶನಗಳನ್ನು ನೀಡಲಾಗಿದ್ದು, ವೆಬ್ ಬ್ರೌಸರ್ ನಲ್ಲಿ 6 ಗಂಟೆಗೆ ವಾಟ್ಸಾಪ್ ಲಾಗೌಟ್ ಆಗುವಂತೆಯೂ ಸೂಚಿಸಿದೆ.

ಬಳಕೆದಾರರು ಸಿಮ್ ಕಾರ್ಡ್ ಸಕ್ರಿಯವಾಗಿರುವುದನ್ನು ಫ್ಲಾಟ್ ಫಾರ್ಮ್ ಗಳು ಖಾತ್ರಿ ಪಡಿಸಬೇಕು. ಆ್ಯಕ್ಟಿವ್ ಆಗಿರುವ ಸಿಮ್ ಇದ್ದರೆ ಮಾತ್ರ ಮೆಸೇಜಿಂಗ್ ಸರ್ವೀಸ್ ನೀಡಬೇಕು. ಅಲ್ಲದೇ 6 ಗಂಟೆಗೊಮ್ಮೆ ಲಾಗೌಟ್ ಆಗಿ, ಮತ್ತೆ 6 ಗಂಟೆಗೊಮ್ಮೆ ಆ್ಯಕ್ಟಿವ್ ಮೊಬೈಲ್ ಬಳಸಿ ಮತ್ತೆ ವೆಬ್ ಲಿಂಕ್ ಮಾಡಬೇಕು ಎಂಬ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಇಂಟರ್ನೆಟ್, ಕಂಪ್ಯೂಟರ್ ಅಥವಾ ಮೊಬೈಲ್ ಸಾಧನಗಳನ್ನು ಬಳಸಿ ಮಾಡುವ ಯಾವುದೇ ಅನಧಿಕೃತ ಕ್ರಿಯೆಯನ್ನು ಸೈಬರ್ ಕ್ರೈಮ್ ಎಂದು ಕರೆಯಲಾಗಿದ್ದು, ಕಂಪ್ಯೂಟರ್ ಅಥವಾ ಇಂಟರ್ನೆಟ್ ಬಳಸಿ ವ್ಯಕ್ತಿ, ಸಂಸ್ಥೆ ಅಥವಾ ಸರ್ಕಾರಕ್ಕೆ ಹಾನಿ ಮಾಡುವ, ಮಾಹಿತಿಯನ್ನು ಕದಿಯುವ, ಹಣ ವಂಚಿಸುವ, ಅಥವಾ ಡೇಟಾವನ್ನು ನಾಶ ಮಾಡುವ ಎಲ್ಲಾ ಕ್ರಿಯೆಗಳು ಸೈಬರ್ ಕ್ರೈಮ್ ಗಳಾಗಿವೆ. ಇನ್ನು ಸೈಬರ್ ಕ್ರೈಮ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತಂತ್ರಜ್ಞಾನದ ಸೌಲಭ್ಯಗಳನ್ನು ಸುರಕ್ಷಿತವಾಗಿ ಬಳಸುವುದು, ಜಾಗರೂಕತೆ, ಮತ್ತು ಅನುಮಾನಾಸ್ಪದ ಚಟುವಟಿಕೆಗಳಿಗೆ ತಕ್ಷಣ ಪ್ರತಿಕ್ರಿಯಿಸದಿರುವುದು ನಮ್ಮನ್ನು ರಕ್ಷಿಸುತ್ತದೆ. ಇದುವರೆಗೂ ಯಾವುದೇ ಕ್ರಮ ಕೈಗೊಂಡರೂ ವಂಚನೆಗೆ ಒಳಗಾಗುವ ಅಮಾಯಕ ಜನರು ಹೆಚ್ಚಾಗುತ್ತಲೇ ಇವೆ. ಈ ಎಲ್ಲಾ ವಂಚನೆಗೆ ಇನ್ನು ಬ್ರೇಕ್ ಬೀಳುವ ಸಾಧ್ಯತೆಯಿದೆ. WhatsApp, Telegram logout every 6 hours: New rule to verify SIM once every 3 months – ತುಳು ಟೈಮ್ಸ್

ಇದನ್ನೂ ಓದಿ :ದಿ ಡೆವಿಲ್ ಟ್ರೈಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್ ! ಫ್ಯಾನ್ಸ್‌ ವೈಟಿಂಗ್‌ !

======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/9__hBRPRAJ0?si=uR-Fro929bU1qXNb

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page