ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಸಮವಸ್ತ್ರ ಧರಿಸಿ ಶಾಲೆಗೆ ಹೋಗಬೇಕಿದ್ದ ಮಕ್ಕಳು ಹತ್ತಿ ತೆಗೆಯಲು ಜಮೀನಿನ ಕಡೆ…!

ಯಾದಗಿರಿ : Tulu Times | ಪೆನ್ನು, ಪುಸ್ತಕ‌ ಹಿಡಿದು ಅಕ್ಷರ ಕಲಿಯೋಕೆ ಶಾಲೆಗೆ ಹೋಗಬೇಕಿದ್ದ ಮಕ್ಕಳ ಕೈಯಿಂದ ಕೂಲಿ ಕೆಲಸ ಮಾಡಿಸಲಾಗುತ್ತಿದೆ. ಶಾಲೆ ಕಡೆ ಬ್ಯಾಗ್ ಹಾಕಿಕೊಂಡು, ಸಮವಸ್ತ್ರ ಧರಿಸಿಕೊಂಡು ಹೋಗಬೇಕಾಗಿದ್ದ ಮಕ್ಕಳೀಗ ಜಮೀನಿನ ಕಡೆ ಹೋಗಿ ಅಲ್ಲಿ ಕೂಲಿ ಕೆಲಸ ಮಾಡುತ್ತಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ದಸರಾ, ದೀಪಾವಳಿ ಮುಗಿದರೂ ಶಾಲೆ ಕಡೆ ಮುಖ ಮಾಡದ ವಿದ್ಯಾರ್ಥಿಗಳು ಹತ್ತಿ ಬಿಡಿಸಲು ಜಮೀನಿಗೆ ಮಕ್ಕಳು ಹೋಗುತ್ತಿರುವ ಸುದ್ದಿ ವರದಿಯಾಗಿದೆ. ಯಾದಗಿರಿಯಲ್ಲಿ ಹತ್ತಿ ಬಿಡಿಸುವ ಸಮಯ ಪ್ರಾರಂಭವಾಗಿದ್ದು, ಎರಡು ತಿಂಗಳ ಕಾಲ ಹತ್ತಿ ಬಿಡಿಸುವ, ಬೇರ್ಪಡಿಸುವ ಕೆಲಸ ಕಾರ್ಯ ನಡೆಯುತ್ತಿರುತ್ತದೆ. ಹತ್ತಿ‌ಬಿಡಿಸಲು ಕೂಲಿ ಕಾರ್ಮಿಕರು ಸಿಗದ ಕಾರಣ ಇಲ್ಲಿ ಶಾಲಾ ಮಕ್ಕಳನ್ನು ಬಳಕೆ‌ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿಗಳ ಪೋಷಕರು ಕೂಲಿಗೆ ಸಿಗುವ ಹಣದ ಆಸೆಗೆ ಬಾಯಿ ಮುಚ್ಚಿ ಕುಳಿತಿದ್ದಾರೆ. ರಾಜ್ಯದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿಷೇಧವಿದ್ದರೂ ಕೂಡಾ ಮಕ್ಕಳನ್ನು ಕೂಲಿ ಕೆಲಸಕ್ಕೆ ಹಾಕಲಾಗುತ್ತಿದೆ. ಇಲ್ಲಿಗೇ ಸ್ವತಃ ಪೋಷಕರೇ ತಮ್ಮ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ.

ವಸ್ತ್ರೋದ್ಯಮಕ್ಕೆ ಮೂಲ ವಸ್ತುವಾದ ಹತ್ತಿ, ದೇಶದ ಕೃಷಿ ಆರ್ಥಿಕತೆಯಲ್ಲಿ ಮಹತ್ವದ ಪಾತ್ರವಹಿಸಿದೆ. ಉಷ್ಣ ಹವಾಮಾನ, ಕಪ್ಪು ಮಣ್ಣು ಮತ್ತು ಸಮರ್ಪಕ ನೀರಾವರಿ ದೊರೆತರೆ ಹತ್ತಿ ಉತ್ತಮವಾಗಿ ಬೆಳೆಯುತ್ತದೆ. ಆದರೀಗ ಇದಕ್ಕೆ ಕೂಲಿ ಜನಗಳ ಬದಲಾಗಿ ಪುಸ್ತಕ ಹಿಡಿದು ಅಕ್ಷರಾಭ್ಯಾಸದಲ್ಲಿ ತೊಡಗಿರಬೇಕಾದ ಮಕ್ಕಳನ್ನು ಈ ರೀತಿ ಜಮೀನಿಗೆ ಅಟ್ಟುತ್ತಿರುವ ಪೋಷಕರ ಮನಸ್ಥಿತಿ ಹೇಗಿರಬಹುದು ಎಂದು ನೀವೇ ಅರ್ಥೈಸಿಕೊಳ್ಳಿ.

Children who were supposed to go to school wearing uniforms went to the farm to take them off – ತುಳು ಟೈಮ್ಸ್

ಇದನ್ನೂ ಓದಿ :ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಜಾನ್ವಿ..! ಹೊರಬರಲು ಅಸಲಿ ಕಾರಣ ಏನು..?

=======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/9__hBRPRAJ0?si=uR-Fro929bU1qXNb

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page