ಸಿನಿಮಾ: Tulu Times |ಇತ್ತೀಚೆಗೆ ಕೆಂಪು ಹಳದಿ ಹಸಿರು’ ಸಿನಿಮಾದ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆ ಸಮಾರಂಭ ರೇಣುಕಾಂಬಾ ಸ್ಟುಡಿಯೋದಲ್ಲಿ ನಡೆಯಿತು.
ಇದನ್ನೂ ಓದಿ: ವಾಟ್ಸಾಮ್, ಟೆಲಿಗ್ರಾಂ 6 ಗಂಟೆಗೊಮ್ಮೆ ಲಾಗೌಟ್ : 3 ತಿಂಗಳಿಗೊಮ್ಮೆ ಸಿಮ್ ವೇರಿಫೈ ಮಾಡುವ ಹೊಸ ನಿಯಮ
ಈ ಸಿನಿಮಾವನ್ನು ಮಣಿ ಎಜೆ ಕಾರ್ತಿಕೇಯನ್ ಅವರು ವಿಭಿನ್ನ ಶೀರ್ಷಿಕೆಯ ‘ಕೆಂಪು ಹಳದಿ ಹಸಿರು’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಕಥಾಹಂದರದ ಬಗ್ಗೆ ಚಿತ್ರತಂಡದವರು ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು. ಈ ಸಿನಿಮಾದಲ್ಲಿ ತುಳುನಾಡಿನ ಹಾಸ್ಯನಟ ಅರವಿಂದ್ ಬೋಳಾರ್, ಶ್ರೀಹನ್ ದೀಪಕ್, ದಿವ್ಯಾ ಸುರೇಶ್ ಹೊಸ ಸಿನಿಮಾ ‘ಕೆಂಪು ಹಳದಿ ಹಸಿರು’ ಅರವಿಂದ್ ಬೋಳಾರ್, ಶ್ರೀಹನ್ ದೀಪಕ್, ದಿವ್ಯಾ ಸುರೇಶ್ ಮುಂತಾದವರು ಅಭಿನಯಿಸಿದ್ದಾರೆ. ಟೈಟಲ್ ಕಾರಣದಿಂದ ಈ ಸಿನಿಮಾ ಕೌತುಕ ಮೂಡಿಸಿದೆ. ‘ಸನ್‌ರೈಸ್ ಎಂಟರ್‌ಟೈನ್‌ಮೆಂಟ್ ಆ್ಯಂಡ್ ಫಿಲ್ಮ್ಸ್’ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಪ್ರಸಾದ್ ಕುಮಾರ್ ನಾಯ್ಕ್ ಅವರು ‘ಕೆಂಪು ಹಳದಿ ಹಸಿರು’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
ಇದನ್ನೂ ಓದಿ: ಸಮವಸ್ತ್ರ ಧರಿಸಿ ಶಾಲೆಗೆ ಹೋಗಬೇಕಿದ್ದ ಮಕ್ಕಳು ಹತ್ತಿ ತೆಗೆಯಲು ಜಮೀನಿನ ಕಡೆ…!
ಈಗಾಗಲೇ ತುಳು ಸಿನಿಮಾ ನಿರ್ದೇಶನ ಮಾಡಿ ಅನುಭವ ಪಡೆದ ಮಣಿ ಎಜೆ ಕಾರ್ತಿಕೇಯನ್ ಅವರು ಮೊದಲ ಬಾರಿ ಕನ್ನಡ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ‘ಸ್ಟಾಪ್, ಥಿಂಕ್ ಆ್ಯಂಡ್ ಪ್ರೊಸೀಡ್ ಇನ್ ಲೈಫ್’ ಎಂಬ ಅರ್ಥಪೂರ್ಣ ಟ್ಯಾಗ್ ಲೈಗ್ ಈ ಸಿನಿಮಾದ ಶೀರ್ಷಿಕೆಗೆ ಇದೆ. ‘ಒಂದು ಮೊಟ್ಟೆಯ ಕಥೆ’ ಸಿನಿಮಾದಲ್ಲಿ ಅಭಿನಯಿಸಿದ್ದ ಶೈಲಾಶ್ರೀ ಮುಲ್ಕಿ ಕೂಡ ಈಗ ‘ಕೆಂಪು ಹಳದಿ ಹಸಿರು’ ಸಿನಿಮಾದಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ನಾಯಕಿ ಆಗಿದ್ದಾರೆ.
ನಿರ್ದೇಶಕರ ಜೊತೆ ಕಿಶೋರ್ ಮೂಡಬಿದ್ರೆ ಅವರು ಸಾಹಿತ್ಯ ಬರೆದಿದ್ದಾರೆ. ಮುಂಬೈ ಮೂಲದ ವಿಕಾಶ್ ವಿಶ್ವಕರ್ಮ ಅವರು ಸಂಗೀತ ನೀಡಿದ್ದಾರೆ. ತ್ರಿಕೋನ ಪ್ರೇಮಕಥೆಯು ಸೆಸ್ಪೆನ್ಸ್, ಥ್ರಿಲ್ಲರ್ ಕಾಮಿಡಿಯಾಗಿ ಸಿನಿಮಾ ಮೂಡಿಬಂದಿದೆ. ಮಂಗಳೂರು, ಉಡುಪಿಯ ಸುಂದರ ತಾಣಗಳಲ್ಲಿ ಶೂಟಿಂಗ್ ಮಾಡಿದ್ದೇವೆ ಎಂದರು.
Aravind Bolar is a laughing stock in the movie ‘Red Yellow Green’! – ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











