ಬ್ರೇಕಿಂಗ್ ನ್ಯೂಸ್
ರಾಜಕೀಯ

Bangalore:ಡಿಕೆಶಿ ನನ್ನ ಕೊಲ್ತಾರೆ,ಹೆಣ್ಣಿಗಾಗಿ ಹೀಗೆ ಮಾಡ್ತಿದ್ದಾರೆ!

Bangalore:ಜೆ.ಪಿ ಪಾರ್ಕ್ ನಲ್ಲಿ ರಾಜಕೀಯ ಹೈಡ್ರಾಮಾವೇ ನಡೆದು ಹೋಗಿದೆ.ಡಿಕೆಶಿ ನಡಿಗೆ ಕಾರ್ಯಕ್ರಮದಲ್ಲಿ ಡಿಕೆಶಿ ಮುನಿರತ್ನ ವಾರ್ ತಾರಕಕ್ಕೇರಿದೆ.ಇಂದು ಮುಂಜಾನೆ ಜೆ.ಪಿ ಪಾರ್ಕ್ ನಲ್ಲಿ ಡಿಕೆಶಿ ನಡಿಗೆ ಕಾರ್ಯಕ್ರಮ ನಡೀತಿತ್ತು.ಜನರ ಆಹವಾಲುಗಳನ್ನು ಕೇಳಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮಕ್ಕೆ ಬಂದ ಮುನಿರತ್ನ ಕ್ಷೇತ್ರದ ಶಾಸಕರು ಮತ್ತು ಸಂಸದರಿಗೆ ಆಹ್ವಾನ ನೀಡದೆ ಇರೋದಿಕ್ಕೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸೋಕೆ ಮುಂದಾದ್ರೂ.ಆರ್.ಎಸ್.ಎಸ್ ಗಣವೇಷ ಧರಿಸಿದ್ದ ಮುನಿರತ್ನ ವೇದಿಕೆಗೆ ಹೋಗಿ ಶಾಸಕರಿಗೆ ಮತ್ತು ಸಂಸದರಿಗೆ ಆಹ್ವಾನ ನೀಡದೆ ಸರ್ಕಾರಿ ಕಾರ್ಯಕ್ರಮ ನಡೀತಿದೆ.ಇದು ಕಾಂಗ್ರೆಸ್ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮ ಅಲ್ಲ ಎಂದು ಮೈಕ್  ಹಿಡಿದು ಕೂಗಾಡಿದ್ರು.ಮುನಿರತ್ನ ಮಾತಾಡುತ್ತಿದ್ದಂತೆ ಎರಡು ಗುಂಪುಗಳಿಂದ ಕಿರುಚಾಟ ಶುರುವಾಯಿತು.

ಏಯ್ ಕರಿಟೋಪಿ ಬಾರೋ
ಆರ್ ಎಸ್ ಎಸ್ ಗಣವೇಷ ಧರಿಸಿದ್ದ ಮುನಿರತ್ನ ಸಾರ್ವಜನಿಕರ ಜೊತೆ ಪ್ರತಿಭಟಿಸಲು ಕೂತಿದ್ರು.ಇದನ್ನು ಗಮನಿಸಿದ ಡಿಕೆ ಶಿವಕುಮಾರ್,ಮುನಿರತ್ನ ಶಾಸಕರು ಎಂಬುದನ್ನು ಮರೆತು ಏಯ್ ಕರಿಟೋಪಿ ಬಾರೋ ಎಂದು ಏಕವಚನದಲ್ಲಿ ವೇದಿಕೆಗೆ ಆಹ್ವಾನಿಸಿದ್ರು..ಇದ್ರಿಂದ ಮುನಿರತ್ನ ಕುಪಿತರಾದ್ರು..ಜನರಿಂದ ಆಯ್ಕೆಯಾದ ಶಾಸಕರಿಗೆ ಶಿಷ್ಟಾಚಾರಕ್ಕಾದ್ರೂ ಜನರ ಮುಂದೆ ಬಹುವಚನದಲ್ಲಿ ಕರೆಯಬೇಕಾಗಿತ್ತು.ಅದು ಅಲ್ದೇ ಆರ್.ಎಸ್.ಎಸ್ ಟೋಪಿಯನ್ನು ಕರಿಟೋಪಿ ಎಂದು ಕರೆದು ಸಂಘಕ್ಕೆ ಅವಮಾನಿಸಿದ್ದಾರೆ.ಎಂದು ಮುನಿರತ್ನ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆರ್.ಎಸ್.ಎಸ್ ಧಿರಿಸಿಗೆ ಅವಮಾನಿಸಿದ್ದು ಇದು ನನಗಾದ ಅನ್ಯಾಯ ಅಲ್ಲ ಸಂಘಕ್ಕಾದ ಅನ್ಯಾಯ ಎಂದು ಮುನಿರತ್ನ ಸಿಟ್ಟಾಗಿದ್ದಾರೆ

ಹೆಣ್ಣಿಗಾಗಿ ಇಷ್ಟೆಲ್ಲಾ ಮಾಡ್ತಿದ್ದಾರೆ.
ಕಳೆದ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಯಾಗಿರುವ ಕುಸುಮರನ್ನು ಇವತ್ತಿನ ಕಾರ್ಯಕ್ರಮದ ವೇದಿಕೆಯಲ್ಲಿ ಕುಳ್ಳಿರಿಸಲಾಗಿತ್ತು.ಕುಸುಮರನ್ನೂ ಹೇಗಾದ್ರೂ ಮಾಡಿ ಗೆಲ್ಲಿಸಬೇಕೆಂಬ ಕಾರಣಕ್ಕೆ ಡಿ.ಕೆ ಶಿವಕುಮಾರ್ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಮುನಿರತ್ನ ಆರೋಪಿಸಿದ್ದಾರೆ.ಹೆಣ್ಣಿಗಾಗಿ ಡಿಕೆಶಿವಕುಮಾರ್ ಇಷ್ಟೆಲ್ಲಾ ಮಾಡ್ತಿದ್ದಾರೆ.ಎಂದು ಡಿಕೆಶಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.ಎಂ.ಎಲ್ ಎ. ಆದಂದಿನಿಂದ ನನಗೆ ತೊಂದರೆ ಕೊಡ್ತಿದ್ದಾರೆ.ನನ್ನನ್ನೂ ಸಾಯಿಸುವುದೇ ಡಿಕೆಶಿವಕುಮಾರ್,ಡಿಕೆಸುರೇಶ್ ಉದ್ದೇಶ ಎಂಬ ಗಂಭೀರ ಆರೋಪ ಮುನಿರತ್ನ ಮಾಡಿದ್ದಾರೆ.

ಶಿಲಾನ್ಯಾಸ ಕಾರ್ಯಕ್ರಮವಲ್ಲ
ಮುನಿರತ್ನ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಡಿ.ಕೆ ಶಿವಕುಮಾರ್,ಶಿಷ್ಟಾಚಾರ ಪಾಲಿಸಲು ಇಂದು ನಡೆದದ್ದು ಯಾವುದೇ ಶಿಲಾನ್ಯಾಸ ಕಾರ್ಯಕ್ರಮವಲ್ಲ ಎಂದಿದ್ದಾರೆ.ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಶಾಸಕರಿಗೆ,ಸಂಸದರಿಗೆ ಆಹ್ವಾನ ನೀಡಬೇಕಿಲ್ಲ.ಮುನಿರತ್ನ ಆರೋಪಗಳೆಲ್ಲಾ ಸುಳ್ಳು ಪ್ರಚಾರಕ್ಕಾಗಿ ಈ ರೀತಿ ಡ್ರಾಮಾ ಮಾಡ್ತಿದ್ದಾರೆ.ಎಂದು ಉತ್ತರಿಸಿದ್ದಾರೆ.ಮುನಿರತ್ನಗೆ ಪಬ್ಲಿಸಿಟಿ ಬೇಕು ಅದಕ್ಕಾಗಿ ಈ ಕಸರತ್ತು ಮಾಡಿದ್ದಾರೆ ಎಂಬುದು ಡಿಕೆಶಿ ಸ್ಪಷ್ಟನೆ.

ಸಮಸ್ಯೆ ಗೊತ್ತಿರುವುದು ಸ್ಥಳೀಯ ಶಾಸಕರಿಗಲ್ಲವೇ?
ಜನರ ಸಮಸ್ಯೆಗಳನ್ನು ಆಲಿಸಲು ಸ್ಥಳೀಯ ಶಾಸಕರು ಇರಲೇಬೇಕಾಗುತ್ತದೆ.ಯಾಕೆಂದರೆ ಅಲ್ಲಿನ ಸಮಸ್ಯೆಗಳು ಸ್ಪಷ್ಟವಾಗಿ ಗೊತ್ತಿರುವುದು ಅಲ್ಲಿನ ಸ್ಥಳೀಯ ನಾಯಕರಿಗೆ.ಯಾವುದೇ ಸಮಸ್ಯೆಗಳನ್ನು ಜನರು ಕೂಡ ಮೊದಲು ತಲುಪಿಸುವುದು ತಾವು ಆಯ್ಕೆಮಾಡಿದ ಶಾಸಕರಿಗೆ ಹೀಗಾಗಿ ಅಹವಾಲು ಸ್ವೀಕರಿಸುವ ಕಾರ್ಯಕ್ರಮದಲ್ಲಿ ಸ್ಥಳೀಯ ನಾಯಕರು ಇರಲೇಬೇಕು ಅನ್ನುವ ಅಭಿಪ್ರಾಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.ಚುನಾಯಿತ ಪ್ರತಿನಿಧಿಯನ್ನು ಏಕವಚನದಲ್ಲಿ ಕರೆದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವಮಾನಿಸಿದ್ದು ಸರಿಯಲ್ಲ ಎಂಬ ಮಾತು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಿದೆ.
ಇದನ್ನೂ ಓದಿ:CM ಆಗೋ ಅರ್ಜಂಟ್ ನನಗಿಲ್ಲ,ತಿರುಚಿದ ಸುದ್ದಿಗಳ ವಿರುದ್ದ ಡಿಕೆಶಿ ಗರಂ
………………………………………………………………………………………………………………….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ subscribe ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 16

You cannot copy content of this page