ಕರ್ನಾಟಕ: Tulu Times | ನುಗ್ಗೇಕಾಯಿ ಬೆಲೆ ಅಕ್ಷರಶಃ ಗಗನಕ್ಕೇರಿದೆ. ಕೆ.ಜಿ.ಗೆ 500 ರಿಂದ 600 ರೂಪಾಯಿಗೆ ಏರಿಕೆಯಾಗಿದೆ. ನುಗ್ಗೇಕಾಯಿ ಬೆಲೆ ಜನರಿಗೆ ಶಾಕ್ ನೀಡಿದೆ.
ಈ ಹಿಂದೆ ಈರುಳ್ಳಿ ಕಣ್ಣೀರು ತರಿಸುತ್ತೆ ಅಂತ ಜನರು, ಗೃಹಿಣಿಯರು ದೂರುತ್ತಿದ್ದರು. ಆದರೇ, ಈಗ ಈರುಳ್ಳಿ ಸ್ಥಾನವನ್ನು ನುಗ್ಗೇಕಾಯಿ ಆವರಿಸಿಕೊಂಡಿದೆ. ಈ ಭಾರಿ ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿತವಾಗಿದೆ. ಆದರೇ, ನುಗ್ಗೇಕಾಯಿ ಬೆಲೆ ಅಕ್ಷರಶಃ ಗಗನಕ್ಕೇರಿದೆ. ಪ್ರತಿ ಕೆ.ಜಿ. ನುಗ್ಗೇಕಾಯಿ ಬೆಲೆ ಬರೋಬ್ಬರಿ 500 ರೂಪಾಯಿ ಗಡಿ ದಾಟಿ ಪ್ರತಿ ಕೆ.ಜಿ.ಗೆ ಆರು ನೂರು ರೂಪಾಯಿಗೆ ಏರಿಕೆಯಾಗಿದೆ.
ನುಗ್ಗೇಕಾಯಿ ಬಗ್ಗೆ ನಟ ರವಿಚಂದ್ರನ್ ಸಿನಿಮಾ ಹಾಡು ಕೇಳಿ ಜನರು ಎಂಜಾಯ್ ಮಾಡಿದ್ದರು. ನುಗ್ಗೇಕಾಯಿ ಹಾಡು ಅನ್ನು ಜನರು ಇಂದಿಗೂ ಗುನುಗುನಿಸುತ್ತಿದ್ದಾರೆ. ಆದರೇ, ಈಗ ನುಗ್ಗೇಕಾಯಿ ಹೆಸರು ಕೇಳಿದರೇ, ಬೆಚ್ಚಿಬೀಳುವಂಥ ಸ್ಥಿತಿ ಉಂಟಾಗಿದೆ.
ರಾಜ್ಯದಲ್ಲಿ ಶೇಕಡ 60% ರಷ್ಟು ನುಗ್ಗೆಕಾಯಿ ಪೂರೈಕೆ ಕುಸಿತ ಕಂಡಿದೆ. ಈಗಾಗಲೇ ತಮಿಳುನಾಡಿನಲ್ಲಿ ರೈತರು ಹೆಚ್ಚಾಗಿ ನುಗ್ಗೇಕಾಯಿ ಬೆಳೆ ಬೆಳೆದಿದ್ದು, ಜನವರಿ, ಫೆಬ್ರವರಿಯಲ್ಲಿ ಒಂದಷ್ಟು ಬೆಲೆ ಕಡಿಮೆ ಆಗಲಿದೆ ಅಂತಾ ಹೋಲ್ ಸೇಲ್ ವ್ಯಾಪಾರಿಗಳು ಹೇಳುತ್ತಿದ್ದಾರೆ. ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಜೋಡಿ ನುಗ್ಗೇಕಾಯಿ ಬೆಲೆ 100 ರೂಪಾಯಿ ಆಗಿದೆ. ಗ್ರಾಹಕರು ದೂರ ಸರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿಗೆ ಈ ಹಿಂದೆ ಪ್ರತಿದಿನ 100 ಟನ್ ನುಗ್ಗೆಕಾಯಿ ಪೂರೈಕೆ ಆಗುತ್ತಿತ್ತು. ಆದರೆ ಇದೀಗ ವಾತಾವರಣ ಬದಲಾವಣೆಯಿಂದ ನುಗ್ಗೆಕಾಯಿ ಬೆಳೆ ಸರಿಯಾಗಿ ಬಂದಿಲ್ಲವಂತೆ. ಹಾಗಾಗಿ ಪ್ರತಿದಿನ ನಗರಕ್ಕೆ 30 ರಿಂದ 40 ಟನ್ ಮಾತ್ರ ನುಗ್ಗೆಕಾಯಿ ಪೂರೈಕೆ ಆಗುತ್ತಿದೆ. ಹೋಲ್ ಸೇಲ್ ನಲ್ಲಿ ಪ್ರತಿ ಕೆ.ಜಿ. ನುಗ್ಗೇಕಾಯಿ 500 ರುಪಾಯಿಗೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ನುಗ್ಗೇಕಾಯಿ ಪ್ರತಿ ಕೆ.ಜಿ.ಗೆ 600 ಗೆ ಮಾರಾಟವಾಗುತ್ತಿದೆ.
ಕೆ.ಜಿ ನುಗ್ಗೆಕಾಯಿ 500 ರಿಂದ 600 ರುಪಾಯಿ ಆಗಿರುವ ಕಾರಣದಿಂದ ಗ್ರಾಹಕರು ನುಗ್ಗೆಕಾಯಿ ಖರೀದಿಸಲು ಮುಂದಾಗುತ್ತಿಲ್ಲ. ಬೆಲೆ ಏರಿಕೆ ಎಫೆಕ್ಟ್ ನಿಂದಾಗಿ ಕೆಆರ್ ಮಾರುಕಟ್ಟೆಯಲ್ಲಿ ನುಗ್ಗೇಕಾಯಿ ಸಿಗುತ್ತಿಲ್ಲ. ವ್ಯಾಪಾರಸ್ಥರು ಯಾರೂ ನುಗ್ಗೆಕಾಯಿ ಮಾರಾಟ ಮಾಡುತ್ತಿಲ್ಲ. 40 ಕೆಜಿ ನುಗ್ಗೆಕಾಯಿ ಮೂಟೆ 18 ಸಾವಿರ ರೂಪಾಯಿ ಆಗಿದೆ. ಹೋಲ್ ಸೇಲ್ ನಲ್ಲೇ ಕೆಜಿಗೆ 450-500ರೂ ವರೆಗೂ ಇದೆ . ಗ್ರಾಹಕರಿಗೆ ಕೆಜಿಗೆ 550-600ರೂ ಮಾರಾಟ ಮಾಡಬೇಕಾಗಿದೆ . ಆದರೆ, ಜನ ಅಷ್ಟು ದುಡ್ಡು ಕೊಟ್ಟು ನುಗ್ಗೆಕಾಯಿ ಖರೀದಿ ಮಾಡುತ್ತಿಲ್ಲ. ಸಾಲ ಮಾಡಿ ಬಂಡವಾಳ ಹಾಕಿದ್ದೇನೆ . ಆದರೆ, ಬೆಲೆ ಕೇಳಿ ಯಾರೂ ಖರೀದಿ ಮಾಡುತ್ತಿಲ್ಲ ಎಂದು ವ್ಯಾಪಾರಿಯೊಬ್ಬರು ಹೇಳುತ್ತಾರೆ.
see-the-glory-drumstick-the-price-of-drumstick-has-increased-from-rs-500-to-rs-600-per-kg- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











