ಬ್ರೇಕಿಂಗ್ ನ್ಯೂಸ್
ಕರಾವಳಿಪುತ್ತೂರು

ಪುತ್ತೂರು: ನಾಪತ್ತೆಯಾಗಿದ್ದ ಯುವಕನ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಪುತ್ತೂರು -ತುಳು ಟೈಮ್ಸ್: ‌ಚಿಕನ್‌ ಸೆಂಟರ್‌ನಿಂದ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಪುತ್ತೂರಿನ ಸೇಡಿಯಾಪು ಬಳಿಯ ಕಾಡಿನಲ್ಲಿ ಡಿ. 1ರ ಸೋಮವಾರ ಬೆಳಿಗ್ಗೆ ಯುವಕನ ಶವ ಪತ್ತೆಯಾಗಿದೆ.

ನ. 29ರಂದು ನಾಪತ್ತೆಯಾಗಿದ್ದ ನಗರದ ಪಡೀಲ್‌ ನ ಚಿಕನ್ ಸೆಂಟರ್’ ನಲ್ಲಿ ಕೆಲಸ ಮಾಡುತ್ತಿದ್ದ ಬದ್ರುದ್ದೀನ್ ಡಿ.ಕೆ (29) ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಆರ್ಥಿಕ ಸಮಸ್ಯೆಯಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಕಾಣೆಯಾದ ಎರಡು ದಿನಗಳ ನಂತರ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬದ್ರುದ್ದೀನ್ ಅವಿವಾಹಿತನಾಗಿದ್ದು ಕುಟುಂಬಸ್ಥರನ್ನು ಅಗಲಿದ್ದಾರೆ.

ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Puttur: Missing youths diedbody found in deserted area of Sediyapu. Deceased youth identified as Babruddeen D K.

==============================

ಇದನ್ನೂ ಓದಿ: ವಿಶ್ವ ಏಡ್ಸ್ ದಿನ ಡಿಸೆಂಬರ್ 0 1 : ಸಮುದಾಯಗಳೇ ಮುನ್ನಡೆಸಲಿ…!

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess 

 

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 34

You cannot copy content of this page